Shocking News: ಬರ್ಗರ್​​ನಲ್ಲಿತ್ತು ಅರ್ಧ ಸೇದಿದ ಸಿಗರೇಟ್; ಇನ್ನೆಂದೂ ಫಾಸ್ಟ್​ಫುಡ್ ತಿನ್ನುವುದಿಲ್ಲ ಎಂದು ಯುವತಿಯ ಶಪಥ

ನಾವಿಬ್ಬರೂ ಇನ್ನೆಂದೂ ಫಾಸ್ಟ್​ಫುಡ್ ತಿನ್ನಲು ಹೋಗುವುದಿಲ್ಲ ಎಂದು ಆ ಯುವತಿ ಶಪಥ ಮಾಡಿದ್ದಾಳೆ. ಈ ವಿಷಯ ಆ ಶಾಪ್​ನವರಿಗೆ ತಿಳಿಸುತ್ತಿದ್ದಂತೆ ಅವರು ಪೂರ್ತಿ ಹಣವನ್ನು ವಾಪಾಸ್ ನೀಡಿದ್ದಾರೆ.

Shocking News: ಬರ್ಗರ್​​ನಲ್ಲಿತ್ತು ಅರ್ಧ ಸೇದಿದ ಸಿಗರೇಟ್; ಇನ್ನೆಂದೂ ಫಾಸ್ಟ್​ಫುಡ್ ತಿನ್ನುವುದಿಲ್ಲ ಎಂದು ಯುವತಿಯ ಶಪಥ
ಬರ್ಗರ್​​ನಲ್ಲಿ ಸಿಗರೇಟ್ ತುಂಡು
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 21, 2022 | 4:28 PM

ಆಸೆಯಿಂದ ಬರ್ಗರ್ ತಿನ್ನಲು ಹೋದ ಯುವತಿಗೆ ಶಾಕ್ ಒಂದು ಕಾದಿತ್ತು. ಬರ್ಗರ್​ ಮಧ್ಯೆ ಅರ್ಧ ಸೇದಿದ ಸಿಗರೇಟ್ ತುಂಡೊಂದು ಸಿಕ್ಕಿತ್ತು. ಇದರಿಂದ ಶಾಕ್ ಆದ ಆ ಯುವತಿ ಇನ್ನೆಂದೂ ಬರ್ಗರ್ ತಿನ್ನುವುದಿಲ್ಲ ಎಂದು ಶಪಥ ಮಾಡಿದ್ದಾಳೆ. ಬರ್ಗರ್ ಮಧ್ಯೆ ಹೊಗೆಯಾಡುತ್ತಿದ್ದ ಸಿಗರೇಟ್ ತುಂಡು ಸಿಕ್ಕಿದ್ದು, ಅದನ್ನು ನೋಡಿದ ಗ್ರಾಹಕಿ ಆಘಾತಗೊಂಡಿದ್ದಾಳೆ. ಆ ಹುಡುಗಿ ತನ್ನ ತಾಯಿ ಜೆನ್ ಹೋಲಿಫೀಲ್ಡ್ ಜೊತೆ ಅಮೆರಿಕಾದ ಮಿಸಿಸಿಪ್ಪಿಯಲ್ಲಿರುವ ಮೆರಿಡಿಯನ್‌ನಲ್ಲಿರುವ ಬರ್ಗರ್ ಕಿಂಗ್‌ಗೆ ಹೋಗಿದ್ದರು. ಅಲ್ಲಿ ಈ ಘಟನೆ ನಡೆದಿದೆ.

ತಾಯ- ಮಗಳಿಬ್ಬರೂ 9 ಚಿಕನ್ ಫ್ರೈಸ್ ಮತ್ತು ಕೆಲವು ಜಲಪೆನೊ ಪಾಪ್ಪರ್‌ಗಳ ಬ್ಯಾಗ್ ಆರ್ಡರ್ ಮಾಡಿದರು. ಅವರ ಆರ್ಡರ್​ ಟೇಬಲ್​ಗೆ ಬರುತ್ತಿದ್ದಂತೆ ಅದನ್ನು ತೆಗೆದುಕೊಂಡು ಮನೆಗೆ ಹೊರಟರು. ಮನೆಗೆ ಹೋಗಿ ಪಾರ್ಟಲ್ ತೆಗೆದು ತಿನ್ನತೊಡಗಿದಾಗ ಸಿಗರೇಟ್ ವಾಸನೆ ಬರತೊಡಗಿತು. 6 ಚಿಕನ್ ಫ್ರೈಗಳನ್ನು ತಿಂದ ನಂತರ ಬರ್ಗರ್ ಮಧ್ಯೆ ಸಿಗರೇಟ್ ಇರುವುದು ಕಂಡಿತು.

ಇದನ್ನೂ ಓದಿ: Shocking News: ಗರ್ಭಪಾತ ಮಾಡಿಸಿಕೊಳ್ಳಲು ಪ್ರಿಯಕರನಿಂದ 14 ಬಾರಿ ಒತ್ತಾಯ; ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

ನನ್ನ ಮಗಳು ಬಹಳ ಹಸಿದಿದ್ದಳು. ಅವಳು ಬರ್ಗರ್ ಅನ್ನು ತಿನ್ನಲು ಪ್ರಾರಂಭಿಸಿದಳು. ಬರ್ಗರ್ ತಿನ್ನುವಾಗ ಸಿಗರೇಟ್ ವಾಸನೆ ಬರುತ್ತಿದೆ ಎಂದು ಆಕೆ ಹೇಳಿದಳು. ನಾನು ಅದೆಲ್ಲ ನಿನ್ನ ಭ್ರಮೆ ಎಂದೆ. ಆದರೆ, ಆಕೆಯ ಬರ್ಗರ್​ನಲ್ಲಿ ಅರ್ಧ ತುಂಡಾದ ಸಿಗರೇಟ್ ಇರುವುದನ್ನು ನೋಡಿ ನಾವಿಬ್ಬರೂ ಶಾಕ್ ಆದೆವು. ಅದೊಂದು ಅಸಹ್ಯಕರ ಘಟನೆ ಎಂದಿರುವ ಅವರು ಅದಾದ ನಂತರ ನನ್ನ ಮಗಳು ಆಘಾತಕ್ಕೊಳಗಾಗಿದ್ದಾಳೆ ಎಂದು ಹೇಳಿದ್ದಾರೆ.

ನಾವಿಬ್ಬರೂ ಇನ್ನೆಂದೂ ಫಾಸ್ಟ್​ಫುಡ್ ತಿನ್ನಲು ಹೋಗುವುದಿಲ್ಲ ಎಂದು ಆ ಯುವತಿ ಶಪಥ ಮಾಡಿದ್ದಾಳೆ. ಈ ವಿಷಯ ಆ ಶಾಪ್​ನವರಿಗೆ ತಿಳಿಸುತ್ತಿದ್ದಂತೆ ಅವರು ಪೂರ್ತಿ ಹಣವನ್ನು ವಾಪಾಸ್ ನೀಡಿದರು.