Viral News: ಇಬ್ಬರು ಕ್ಯಾನ್ಸರ್ ಪೀಡಿತ ಮಕ್ಕಳ ಐಪಿಎಸ್ ಅಧಿಕಾರಿಯಾಗುವ ಕನಸನ್ನು ಈಡೇರಿಸಿದ ಪೊಲೀಸರು
13 ವರ್ಷದ ಇಬ್ಬರು ವಿದ್ಯಾರ್ಥಿಗಳು ತಮ್ಮ ಐಪಿಎಸ್ ಆಗುವ ಕನಸನ್ನು ನನಸಾಗಿಸಿದ್ದಾರೆ. ಕ್ಯಾನ್ಸರ್ ಕಾಯಿಲೆಗಳೊಂದಿಗೆ ಹೋರಾಡುತ್ತಿರುವ 9ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಗುರುವಾರ ಬೆಂಗಳೂರಿನಲ್ಲಿ ಕೆಲವು ಗಂಟೆಗಳ ಕಾಲ ಐಪಿಎಸ್ ಅಧಿಕಾರಿಗಳಾಗುವ ತಮ್ಮ ಕನಸು ನನಸಾಗಿದ್ದಾರೆ.
ತಾನು ಕಲಿತು ದೊಡ್ಡವನಾಗಿ ಐಎಎಸ್, ಐಪಿಎಸ್ (IAS, IPS) ಆಗಬೇಕು ಎಂದು ಹಲವರು ಕನಸು ಕಟ್ಟಿಕೊಂಡಿರುತ್ತಾರೆ. ಕೆಲವರು ತಮ್ಮ ಕನಸನ್ನು ನನಸಾಗಿಸದರೆ, ಇನ್ನು ಕೆಲವರಿಗೆ ಅಸಾಧ್ಯ. ಮತ್ತೂ ಕೆಲವರಿಗೆ ತಮ್ಮ ಆರೋಗ್ಯ ಸಮಸ್ಯೆಯಿಂದ ಸಾಧ್ಯವಾಗುವುದಿಲ್ಲ. ಈ ಪೈಕಿ ಮೂರನೇ ವಿಷಯಕ್ಕೆ ಸೇರಿದ 13 ವರ್ಷದ ಇಬ್ಬರು ವಿದ್ಯಾರ್ಥಿಗಳು ತಾವು ಐಪಿಎಸ್ ಅಧಿಕಾರಿಯಾಗಬೇಕು ಎಂದು ಕನಸು ಕಟ್ಟಿಕೊಂಡಿದ್ದು, ಇವರ ಕನಸನ್ನು ಬೆಂಗಳೂರು ಪೊಲೀಸರು ನನಸಾಗಿಸಿದ್ದಾರೆ. ಕ್ಯಾನ್ಸರ್ (Cancer) ಕಾಯಿಲೆಗಳೊಂದಿಗೆ ಹೋರಾಡುತ್ತಿರುವ 9ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಗುರುವಾರ ಬೆಂಗಳೂರಿನಲ್ಲಿ ಕೆಲವು ಗಂಟೆಗಳ ಕಾಲ ಐಪಿಎಸ್ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಪೊಲೀಸರು ಅನುವುಮಾಡಿಕೊಟ್ಟಿದ್ದಾರೆ.
ಠಾಣೆಯಲ್ಲಿ ಡಿಸಿಪಿಗಳಿಗೆ ಸಿಬ್ಬಂದಿ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಪ್ರಸ್ತುತಪಡಿಸಿದರು. ಇದೇ ವೇಳೆ ಇಬ್ಬರು ಡಿಸಿಪಿಗಳು ದೂರನ್ನು ಆಲಿಸಿ ಅಗತ್ಯ ನಿರ್ದೇಶನಗಳನ್ನು ನೀಡಿದರು. ಈ ವೇಳೆ ಪೊಲೀಸ್ ಅಧಿಕಾರಿಯಾಗುವ ಕನಸಿನ ಮಾತನ್ನು ಹಂಚಿಕೊಂಡ ಸಲ್ಮಾನ್, ಸಂಕಷ್ಟದಲ್ಲಿರುವ ಎಷ್ಟೋ ಜನರಿಗೆ ಸಾಂತ್ವನ ನೀಡುವ ಉದಾತ್ತ ವೃತ್ತಿ ಇದಾಗಿದೆ ಎಂದರು. ಈ ವೇಳೆ ಮಿಥಿಲೇಶ್ ಅವರು ಟ್ರಾಫಿಕ್ ನಿರ್ವಹಣೆ ಮತ್ತು ರಸ್ತೆ ಶಿಸ್ತಿನ ಬಗ್ಗೆ ಇರುವ ಆಸಕ್ತಿಯ ಬಗ್ಗೆ ಮಾಹಿತಿ ಹಂಚಿಕೊಂಡರು.
Published On - 11:20 am, Fri, 22 July 22