AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವೃದ್ಧ ಪೋಷಕರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಕನ್ವರ್ ಯಾತ್ರೆ ಕೈಗೊಂಡ ಆಧುನಿಕ ಶ್ರವಣ ಕುಮಾರ, ವೈರಲ್ ವಿಡಿಯೋ ಇಲ್ಲಿದೆ

ತನ್ನ ವಯಸ್ಸಾದ ತಂದೆ ತಾಯಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಹೆಗಲ ಮೇಲೆಹೊತ್ತುಕೊಂಡು ಕನ್ವರ್ ಯಾತ್ರೆಗೆ ಹೋಗುತ್ತಿರುವ ಶಿವಭಕ್ತನ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು, ಇಂತಹ ಮಗ ಎಲ್ಲಾ ಪೋಷಕರಿಗೂ ಸಿಗಲಿ ಎಂದು ಹಾರೈಸುತ್ತಿದ್ದಾರೆ.

Viral Video: ವೃದ್ಧ ಪೋಷಕರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಕನ್ವರ್ ಯಾತ್ರೆ ಕೈಗೊಂಡ ಆಧುನಿಕ ಶ್ರವಣ ಕುಮಾರ, ವೈರಲ್ ವಿಡಿಯೋ ಇಲ್ಲಿದೆ
ಪೋಷಕರನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಕನ್ವರ್ ಯಾತ್ರೆ ಕೈಗೊಂಡ ಆಧುನಿಕ ಶ್ರವಣ ಕುಮಾರ
TV9 Web
| Edited By: Rakesh Nayak Manchi|

Updated on:Jul 22, 2022 | 1:00 PM

Share

ವಯಸ್ಸಾದಾಗ ಆತ್ಮವನ್ನು ಶುದ್ಧೀಕರಿಸಲು ತೀರ್ಥಯಾತ್ರೆಯ ನಾಲ್ಕು ಅತ್ಯಂತ ಪವಿತ್ರ ಸ್ಥಳಗಳಿಗೆ ಕರೆದೊಯ್ಯಬೇಕೆಂದು ಬಯಸಿದ್ದ ತಂದೆ ತಾಯಿಯನ್ನು ಬುಟ್ಟಿಯಲ್ಲಿ ಕೂರಿಸಿಕೊಂಡು ಹೆಗಲ ಮೇಲೆ ಹೊತ್ತು ಸಾಗಿದ ಶ್ರವಣ ಕುಮಾರನ ಕಥೆ ಕೇಳಿದ್ದೇವೆ. ಇದೀಗ ವಯಸ್ಸಾದರೆ ಸಾಕು ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸುವ, ಪೋಷಕರನ್ನು ಹೀಯಾಳಿಸುವ, ಮನೆಯಿಂದ ಹೊರಹಾಕುವ ಈ ಆಧುನಿಕ ಕಾಲದಲ್ಲಿ ಇಂತಹ ಶ್ರವಣ ಕುಮಾರ ಇದ್ದಾನೆ ಎಂದರೆ ನಂಬುತ್ತೀರಾ? ನಂಬಲೇ ಬೇಕು. ತನ್ನ ವಯಸ್ಸಾದ ತಂದೆ ತಾಯಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಹೆಗಲ ಮೇಲೆಹೊತ್ತುಕೊಂಡು ಕನ್ವರ್ ಯಾತ್ರೆಗೆ ಹೋಗುತ್ತಿರುವ ಶಿವಭಕ್ತನ ವಿಡಿಯೋ ವೈರಲ್ (Video Viral) ಆಗುತ್ತಿದೆ.

ಕೊರೋನಾ ಹಿನ್ನೆಲೆ ಎರಡು ವರ್ಷಗಳಿಂದ ಉತ್ತರಾಖಂಡದಲ್ಲಿ ಸ್ಥಗಿತಗೊಂಡಿದ್ದ ವಾರ್ಷಿಕ ಕನ್ವರ್ ಯಾತ್ರೆ ಜು.14ರಂದು ಆರಂಭಗೊಂಡಿದೆ. ಈ ಯಾತ್ರೆಯು ಜು.26ರ ವರೆಗೆ ಇರಲಿದೆ. ಈ ಯಾತ್ರೆಗೆ ಶಿವಭಕ್ತನಾಗಿರುವ ವ್ಯಕ್ತಿಯೊಬ್ಬರು ತನ್ನ ವೃದ್ಧ ತಂದೆ ತಾಯಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಹೆಗಲ ಮೇಲೆ ಹೊತ್ತು ಸಾಗುತ್ತಿರುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ.

ಆಧುನಿಕ ಶ್ರವಣ ಕುಮಾರನ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ಐಪಿಎಸ್ ಅಧಿಕಾರಿ ಅಶೋಕ್ ಕುಮಾರ್, “ಇತ್ತೀಚಿನ ದಿನಗಳಲ್ಲಿ ವಯಸ್ಸಾದ ಪೋಷಕರನ್ನು ಅವಹೇಳನ ಮಾಡಲಾಗುತ್ತದೆ, ಅವರನ್ನು ಮನೆಯಿಂದ ಹೊರಹಾಕಲಾಗುತ್ತದೆ ಅಥವಾ ಅವರೊಂದಿಗೆ ವಾಸಿಸಲು ಅನುಮತಿಸುವುದಿಲ್ಲ… ಆದರೆ ಇಂದು ಇದಕ್ಕೆ ವಿರುದ್ಧವಾದ ನೋಟ ಕಂಡುಬಂದಿದೆ. ಲಕ್ಷಗಟ್ಟಲೆ ಶಿವಭಕ್ತರಲ್ಲಿ ಒಬ್ಬ ಶ್ರವಣ ಕುಮಾರನೂ ಇದ್ದಾನೆ, ಅವನು ತನ್ನ ವಯಸ್ಸಾದ ಹೆತ್ತವರೊಂದಿಗೆ ಪಲ್ಲಕ್ಕಿಯಲ್ಲಿ ಕನ್ವರ್ ಯಾತ್ರೆಗೆ ಬಂದಿದ್ದಾನೆ. ನನ್ನ ಗೌರವಗಳು! ” ಎಂದು ಶೀರ್ಷಿಕೆ ಬರೆದಿದ್ದಾರೆ.

ವಿಡಿಯೋವನ್ನು ಜು.19ರಂದು ಹಂಚಿಕೊಳ್ಳಲಾಗಿದ್ದು, ಈವರೆಗೆ 12 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದ್ದು, ಸಾವಿರಕ್ಕೂ ಹೆಚ್ಚು ಲೈಕ್​ಗಳು ಬಂದಿವೆ ಮತ್ತು ನೂರಾರು ರೀಟ್ವೀಟ್​ಗಳು ಆಗಿವೆ. ವಿಡಿಯೋ ನೋಡಿದ ನೆಟ್ಟಿಗರು ಮನತುಂಬಿ ಶಿವಭಕ್ತನನ್ನು ಕೊಂಡಾಡಲು ಪ್ರಾರಂಭಿಸಿದ್ದಾರೆ.

ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿ, “ಅಯ್ಯೋ, ಇಂದಿನ ಕಾಲದಲ್ಲಿ ಅಂತಹ ಮಗನನ್ನು ಪಡೆದ ಅಂತಹ ಸಂತೋಷ, ಶ್ರೀಮಂತ, ಅದೃಷ್ಟವಂತ ತಂದೆತಾಯಿಗಳು ಇದ್ದಾರೆ ಎಂದು ನೋಡುವುದು ತುಂಬಾ ಸಂತೋಷವಾಗಿದೆ. ಏಕೆಂದರೆ ಹೆಚ್ಚಿನ ದುರಾದೃಷ್ಟ ತಂದೆತಾಯಿಗಳು ಸಮಾಜದಲ್ಲಿ ಕಾಣುತ್ತಾರೆ, ಅವರು ಕೇವಲ ಅಯೋಗ್ಯ ಪುತ್ರರನ್ನು ಹೊಂದಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿ ಅವರ ಹೆತ್ತವರು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸುವಂತೆ ಪ್ರಾರ್ಥಿಸಿದರು. “ಶಿವನು ಅವನ ಎಲ್ಲಾ ಪ್ರಾರ್ಥನೆಗಳನ್ನು ಸ್ವೀಕರಿಸಲಿ ಮತ್ತು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲಿ” ಎಂದು ಹಾರೈಸಿದರು. ಇದರ ಹೊರತಾಗಿ ಕೆಲವರು, ಎಲ್ಲಾ ತಂದೆ ತಾಯಗಳು ಇಂತಹ ಯೋಗ್ಯ ಮಗನನ್ನು ಪಡೆಯಲಿ, ಶ್ರವಣ ಕುಮಾರ ಅವರಿಗೆ ದೊಡ್ಡ ಗೌರವಗಳು ಎಂಬಿತ್ಯಾದಿ ಕಾಮೆಂಟ್​ಗಳನ್ನು ಮಾಡಿದ್ದಾರೆ.

Published On - 12:59 pm, Fri, 22 July 22

Follow Us
Web contact
Web contact

TV9 Kannada

Read More
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ