Viral Video: ಶಾಂತವಾಗಿದೆ ಎಂದು ಹಿಡಿಯಲು ಹೋದ ವ್ಯಕ್ತಿಯ ಕೈಯನ್ನೇ ಕಚ್ಚಿದ ನರ್ಸ್ ಶಾರ್ಕ್ ಮೀನು! ಇದು ನಾಲ್ಕನೇ ಪ್ರಕರಣ
ಶಾಂತವಾಗಿದೆ ಎಂದು ಶಾರ್ಕ್ ಮೀನನ್ನು ಹಿಡಿಯಲು ಹೋದ ವ್ಯಕ್ತಿಯ ಕೈಯನ್ನೇ ಶಾರ್ಕ್ ಕಚ್ಚಿದ್ದು, ಬೆಳ್ಳಗಿದ್ದ ಶಾರ್ಕ್ ಮುಖವನ್ನು ರಕ್ತವು ಕೆಂಪಗಾಗಿಸಿದೆ. ಇದರ ವಿಡಿಯೋ ವೈರಲ್ ಆಗುತ್ತಿದೆ.

ಕೆಲವು ಮನುಷ್ಯರ ಸ್ವಭಾವವೇ ಹಾಗೆ, ಪ್ರಾಣಿಯೊಂದು ಮೌನವಾಗಿದೆ, ಶಾಂತ ಸ್ವಭಾವದಿಂದ ವರ್ತಿಸುತ್ತಿದೆ ಎಂದು ಅದಕ್ಕೆ ಇನ್ನಿಲ್ಲದ ಕಿರಿಕಿರಿ ಉಂಟುಮಾಡುವುದು. ಕೆಲವೊಂದು ಜೀವಿಗಳು ಸೈಲೆಂಟ್ ಆಗಿದ್ದರೆ, ಇನ್ನು ಕೆಲವು ಪ್ರಾಣಿಗಳು ಒಮ್ಮಿಂದೊಮ್ಮೆಲೇ ತಿರುಗಿಬಿದ್ದು ದಾಳಿ ನಡೆಸಬಹುದು. ಇಂತಹ ನಿದರ್ಶನಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿರುತ್ತೇವೆ. ಇದೀಗ ಅಂತಹದ್ದೇ ಮತ್ತೊಂದು ವಿಡಿಯೋ ವೈರಲ್ (Video Viral) ಆಗುತ್ತಿದೆ. ಬೋಟಿಂಗ್ ವೇಳೆ ವ್ಯಕ್ತಿಯೊಬ್ಬರಿಗೆ ಶಾರ್ಕ್ ಮೀನು ಮುಂದೆಂದಿಗೂ ಅಂತಹ ದುಸ್ಸಾಹಸಕ್ಕೆ ಕೈಹಾಕದಂತೆ ಮಾಡಿದೆ. ಶಾಂತವಾಗಿದೆ ಎಂದು ಶಾರ್ಕ್ ಮೀನನ್ನು ಹಿಡಿಯಲು ಹೋದ ವ್ಯಕ್ತಿಯ ಕೈಯನ್ನೇ ಶಾರ್ಕ್ ಕಚ್ಚಿದ್ದು, ಬೆಳ್ಳಗಿದ್ದ ಶಾರ್ಕ್ ಮುಖ ರಕ್ತದಿಂದ ಕೆಂಪಾಗಿರುವುದನ್ನು ವಿಡಿಯೋ ತೋರಿಸುತ್ತದೆ.
ವೈರಲ್ ವಿಡಿಯೋದಲ್ಲಿ ಕಾಣುತ್ತಿರುವಂತೆ, ಕುಟುಂಬವೊಂದು ಶಾರ್ಕ್ ಮೀನುಗಳಿರುವ ಸಮುದ್ರದ ಪ್ರದೇಶದಲ್ಲಿ ಬೋಟಿಂಗ್ ನಡೆಸುತ್ತಿರುತ್ತದೆ. ಬೋಟ್ ಹತ್ತಿರ ಇದ್ದ ಶಾರ್ಕ್ ಅನ್ನು ವ್ಯಕ್ತಿಯೊಬ್ಬರು ಹಿಡಿಯಲು ಮುಂದಾಗುತ್ತಾರೆ. ಮಹಿಳೆ, ಮಕ್ಕಳು ಅವರ ಹತ್ತಿರ ಇರುತ್ತಾರೆ. ಆರಂಭದಲ್ಲಿ ಶಾಂತವಾಗಿದ್ದ ಶಾರ್ಕ್ ಕೈಗೆ ಸಿಕ್ಕಾಗ ಆ ವ್ಯಕ್ತಿ ಎತ್ತಲು ಮುಂದಾಗಿದ್ದಾನೆ. ಈ ವೇಳೆ ಶಾರ್ಕ್ ವ್ಯಕ್ತಿಯ ಕೈಯನ್ನೇ ಕಚ್ಚಿ ಒಂದೆರಡು ಸುತ್ತು ತಿರುಗುತ್ತದೆ. ಪರಿಣಾಮವಾಗಿ ವ್ಯಕ್ತಿಯ ಕೈಗೆ ಗಂಭೀರ ಗಾಯವಾಗಿದ್ದು, ಮಾಂಸವೇ ಹೋಗಿರುವ ಸಾಧ್ಯತೆ ಇದೆ. ಏಕೆಂದರೆ ಕಚ್ಚುವ ಮುನ್ನ ಬಿಳಿಯಾಗಿದ್ದ ಶಾರ್ಕ್ನ ಮುಖದ ಕೆಳಭಾಗ ಕಚ್ಚಿದ ನಂತರ ರಕ್ತದಿಂದ ಕೆಂಪಾಗಿರುವುದನ್ನು ನೋಡಬಹುದು.
He won’t make that mistake again from CrazyFuckingVideos
ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾದ 11 ಸೆಕೆಂಡ್‌ಗಳ ವಿಡಿಯೋ ಕ್ಲಿಪ್‌ಗೆ 33,000ಕ್ಕೂ ಹೆಚ್ಚು ವೊಟ್ಗಳು ಲಭಿವಿದ್ದು, 3ಸಾವಿರಕ್ಕೂ ಹೆಚ್ಚು ಕಾಮೆಂಟ್ಗಳನ್ನು ಮಾಡಲಾಗಿದೆ. ವೀಡಿಯೊದಲ್ಲಿರುವ ಮೀನು ನರ್ಸ್ ಶಾರ್ಕ್ ಆಗಿದೆ, ಇದು ಸಾಮಾನ್ಯವಾಗಿ ಚಿಕ್ಕದಾಗಿದೆ ಮತ್ತು ಅವುಗಳ ದವಡೆಗಳು ಬಲವಾಗಿರುತ್ತವೆ. ಇದರ ಬಾಯಿಗಳು ನೂರಾರು ದಂತುರೀಕೃತ ಹಲ್ಲುಗಳಿಂದ ತುಂಬಿರುತ್ತವೆ. ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಮಾನವರ ಮೇಲೆ ದಾಖಲಾದ ಕಡಿತಗಳ ಸಂಖ್ಯೆಯಲ್ಲಿ ಈ ವ್ಯಕ್ತಿ ನಾಲ್ಕನೇಯವರಾಗಿದ್ದಾರೆ.
ಎರಡು ವರ್ಷಗಳ ಹಿಂದೆ ಫ್ಲೋರಿಡಾದ ಜೆನ್ಸನ್ ಬೀಚ್‌ನಲ್ಲಿ ಈಜುತ್ತಿದ್ದ ವ್ಯಕ್ತಿಯ ತೋಳಿನ ಮೇಲೆ ನರ್ಸ್ ಶಾರ್ಕ್ ಅನ್ನು ಹಿಡಿದಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ನೀರಿನಲ್ಲಿ ಈಜುತ್ತಿರುವಾಗ ಶಾರ್ಕ್ ವ್ಯಕ್ತಿಯ ತೋಳನ್ನು ಕಚ್ಚಿದೆ ಎಂದು ಸ್ಥಳೀಯ ಪ್ರಕಟಣೆಗಳು ತಿಳಿಸಿವೆ.




