Viral Video: ಮೈ ಬಣ್ಣ ಬದಲಾಗುವ ಅನ್ನಾಸ್ ಹಮ್ಮಿಂಗ್ ಬರ್ಡ್ ವಿಡಿಯೋ ನೋಡಿ ಕಣ್ತುಂಬಿಕೊಳ್ಳಿ
ಅನ್ನಾಸ್ ಹಮ್ಮಿಂಗ್ ಬರ್ಡ್ ಕೈ ಬೆರಳ ಮೇಲೆ ಕುಳಿತುಕೊಂಡು ಬಣ್ಣಗಳನ್ನು ಬದಲಾಯಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಗರಿಗಳೊಳಗಿನ ನ್ಯಾನೊಸ್ಕೇಲ್ ರಚನೆಗಳಿಂದ ಬೆಳಕಿನ ಚದುರುವಿಕೆಯಿಂದ ಉಂಟಾಗುವ ವರ್ಣವೈವಿಧ್ಯ ಇದಾಗಿದೆ.
ದೇವ ಸೃಷ್ಟಿ ಈ ಪ್ರಕೃತಿಯು ಆಕರ್ಷಕ ಜೀವಿಗಳಿಂದ ಕೂಡಿದ್ದು, ಪ್ರತಿಯೊಂದು ಜೀವಿಗಳು ಕೂಡ ಭಿನ್ನ ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿವೆ. ಇದಕ್ಕೆ ಸಾಕ್ಷಿಯಂತಿರುವ ಹಲವಾರು ಜೀವಿಗಳ ಪೈಕಿ ಅನ್ನಾಸ್ ಹಮ್ಮಿಂಗ್ ಬರ್ಡ್ಸ್ ಕೂಡ ಒಂದು. ಈ ಹಕ್ಕಿ ಗಮನಾರ್ಹ ಬಣ್ಣಗಳಿಗೆ ಹೆಸರುವಾಸಿಯಾಗಿದ್ದು, ವಿವಿಧ ಕೋನಗಳಿಂದ ನೋಡಿದಾಗ ಅವುಗಳ ಬಣ್ಣ ಬದಲಾಗುತ್ತಿರುವಂತೆ ಕಾಣುತ್ತದೆ. ಈ ಸತ್ಯ ಸಂಗತಿಯನ್ನು ನಂಬಲು ಸಾಧ್ಯವಾಗದೇ ಇದ್ದರೆ ನಿಮಗಾಗಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಕಾದಿದೆ. ಅನ್ನಾಸ್ ಹಮ್ಮಿಂಗ್ ಬರ್ಡ್ ಕೈ ಬೆರಳ ಮೇಲೆ ಕುಳಿತುಕೊಂಡು ಬಣ್ಣಗಳನ್ನು ಬದಲಾಯಿಸುತ್ತಿರುವುದನ್ನು ವೈರಲ್ ವಿಡಿಯೋ (Viral Video)ದಲ್ಲಿ ಕಾಣಬಹುದು.
ವಂಡರ್ ಆಫ್ ಸೈನ್ಸ್ ಎಂಬ ಟ್ವಿಟರ್ ಖಾತೆಯಲ್ಲಿ ಬಣ್ಣ ಬದಲಾಯಿಸುವ ಹಕ್ಕಿಯ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಅನ್ನಾಸ್ ಝೇಂಕರಿಸುವ ಹಕ್ಕಿಯ ಬೆರಗುಗೊಳಿಸುವ ಬಣ್ಣಗಳು ಅವುಗಳ ಗರಿಗಳೊಳಗಿನ ನ್ಯಾನೊಸ್ಕೇಲ್ ರಚನೆಗಳಿಂದ ಬೆಳಕಿನ ಚದುರುವಿಕೆಯಿಂದ ಉಂಟಾಗುವ ವರ್ಣವೈವಿಧ್ಯವಾಗಿದೆ” ಎಂದು ಶೀರ್ಷಿಕೆ ನೀಡಲಾಗಿದೆ.
ವೈರಲ್ ವಿಡಿಯೋ ಅನ್ನಾಸ್ ಝೇಂಕರಿಸುವ ಹಕ್ಕಿಯನ್ನು ಪ್ರದರ್ಶಿಸುತ್ತದೆ. ಹೆಬ್ಬೆರಳಿನ ಗಾತ್ರದ ಪುಟ್ಟ ಹಕ್ಕಿ ತನ್ನ ತಲೆಯನ್ನು ತಿರುಗಿಸುತ್ತದೆ. ಈ ವೇಳೆ ಹಕ್ಕಿಯ ಕತ್ತಿನ ಭಾಗದಲ್ಲಿನ ಗರಿಗಳು ಕೆಂಪು-ಗುಲಾಬಿ ಮತ್ತು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ನೋಡುವ ಕೋನ ಬದಲಾದಂತೆ ಬಣ್ಣಗಳು ಕೂಡ ಬದಲಾಗುತ್ತಿರುವುದನ್ನು ನೋಡಬಹುದು.
The stunning colors of the Anna's hummingbird are iridescence caused by light scattering from nanoscale structures within their feathers.pic.twitter.com/BZzXuFnHag
— Wonder of Science (@wonderofscience) July 21, 2022
ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, “ಊಸರವಳ್ಳಿಯ ನವೀಕರಿಸಿದ ಆವೃತ್ತಿಯಂತೆ ಕಾಣುತ್ತದೆ” ಎಂದು ಹೇಳಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ವಿಜ್ಞಾನವು ಅದಕ್ಕೆ ವಿಕಸನೀಯ ವಿವರಣೆಯನ್ನು ಹೊಂದಿದೆ ಎಂದು ನನಗೆ ಖಚಿತವಾಗಿದೆ” ಎಂದಿದ್ದಾರೆ.
ಸೈನ್ಸ್ ಡೈಲಿ ಪ್ರಕಾರ, ಹಮ್ಮಿಂಗ್ ಬರ್ಡ್ಸ್ ಪ್ರಪಂಚದ ಎಲ್ಲಾ ಪ್ರಾಣಿಗಳ ಪ್ರಕಾಶಮಾನವಾದ ಬಣ್ಣಗಳನ್ನು ಒಳಗೊಂಡಿರುತ್ತವೆ. ಪಕ್ಷಿಗಳು ಹೊಂದಿಕೆಯಾಗುವ ರೀತಿಯಲ್ಲಿ ಅವುಗಳ ಗರಿಗಳು ಬೆಳಕನ್ನು ಪ್ರತಿಫಲಿಸುವುದರಿಂದ ನೆರಳಿನಲ್ಲಿ ಬದಲಾವಣೆಯು ಸಂಭವಿಸುತ್ತದೆ. ಪಕ್ಷಿಗಳು ತಮ್ಮ ಗರಿಗಳಲ್ಲಿ ಪ್ಯಾನ್‌ಕೇಕ್-ಆಕಾರದ ರಚನೆಗಳನ್ನು ಹೊಂದಿದ್ದು, ಅವುಗಳು ತಮ್ಮ ತಲೆಯನ್ನು ತಿರುಗಿಸಿದಾಗ ಮಳೆಬಿಲ್ಲಿನ ಬಣ್ಣಗಳನ್ನು ಪ್ರತಿಬಿಂಬಿಸಲು ಕಾರಣವಾಗುತ್ತವೆ.
ಅನ್ನಾ ಹಮ್ಮಿಂಗ್ ಬರ್ಡ್ ಅಂದರೇನು?
ರಿವೋಲಿಯ ಡಚೆಸ್ ಅನ್ನಾ ಮಸೆನಾ ಎಂಬ ರಾಣಿಯ ಹೆಸರನ್ನು ಕೇಳಿದ್ದೀರಾ? ಈ ರಾಣಿಯ ಹೆಸರನ್ನೇ ಈ ಹಮ್ಮಿಂಗ್ ಬರ್ಡ್ಗೆ ಇಡಲಾಗಿದೆ. ಹೀಗಾಗಿ ಅನ್ನಾ ಹಮ್ಮಿಂಗ್ ಬರ್ಡ್ ಎಂದು ಕರೆಯಲಾಗುತ್ತದೆ. ಇದು ಉತ್ತರ ಅಮೆರಿಕಾದ ಪಶ್ಚಿಮ ಕರಾವಳಿ ಪ್ರದೇಶಗಳಿಗೆ ಸ್ಥಳೀಯವಾಗಿದೆ. 20 ನೇ ಶತಮಾನದ ಆರಂಭದಲ್ಲಿ, ಅನ್ನಾ ಹಮ್ಮಿಂಗ್ ಬರ್ಡ್‌ಗಳು ಉತ್ತರ ಬಾಜಾ ಕ್ಯಾಲಿಫೋರ್ನಿಯಾ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಮಾತ್ರ ಸಾಕಲಾಗುತ್ತಿದ್ದವು.
Published On - 1:48 pm, Fri, 22 July 22