ಬೋರ್ಡ್​ಗೆ ಬೆನ್ನು ಹಾಕಿ ಕುಳಿತು ಏಕಕಾಲದಲ್ಲಿ ಎರಡೂ ಕೈಗಳಿಂದ ಚಿತ್ರ ಬಿಡಿಸಿದ ವ್ಯಕ್ತಿ, ಅದ್ಭುತ ಚಿತ್ರದ ಫೋಟೋಗಳು ಇಲ್ಲಿವೆ

ಬೆನ್ನು ತಿರುಗಿಸಿ ಬೋರ್ಡ್ ನೋಡದೆ ಏಕಕಾಲದಲ್ಲಿ ಎರಡೂ ಕೈಗಳಿಂದ ಚಿತ್ರ ಬಿಡಿಸುವುದನ್ನು ನೋಡಿದ್ದೀರಾ? ಇಂತಹ ಅಪರೂಪದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬೋರ್ಡ್​ಗೆ ಬೆನ್ನು ಹಾಕಿ ಕುಳಿತು ಏಕಕಾಲದಲ್ಲಿ ಎರಡೂ ಕೈಗಳಿಂದ ಚಿತ್ರ ಬಿಡಿಸಿದ ವ್ಯಕ್ತಿ, ಅದ್ಭುತ ಚಿತ್ರದ ಫೋಟೋಗಳು ಇಲ್ಲಿವೆ
ಎರಡು ಕೈಗಳಿಂದ ಏಕಕಾಲದಲ್ಲಿ ಚಿತ್ರ ಬಿಡಿಸಿದ ವ್ಯಕ್ತಿ
Follow us
TV9 Web
| Updated By: Rakesh Nayak Manchi

Updated on:Jul 22, 2022 | 4:47 PM

ಕೆಲವು ಎಡಪಂಥೀಯರು ಅವರು ಬರವಣಿಗೆಯಂತಹ ಕೆಲಸ ಕಾರ್ಯಗಳನ್ನು ಎಡಗೈಯಲ್ಲಿ ಮಾಡುತ್ತಾರೆ. ಬಲಗೈಯಲ್ಲಿ ಬರೆಯುವವರು ಬಲಗೈಯಲ್ಲಿ ಬರೆಯುತ್ತಾರೆ. ಇದು ಸಾಮಾನ್ಯವಾಗಿದೆ. ಆದರೆ 3 ಈಡಿಯಟ್ಸ್ ಸಿನಿಮಾದಲ್ಲಿ ಎರಡೂ ಕೈಯಿಂದ ಬರೆಯುವ ಬೋಮನ್ ಇರಾನಿ ಪಾತ್ರವನ್ನು ನೀವು ನೋಡಿಯೇ ಇರುತ್ತೀರಿ. ಇದನ್ನು ನೋಡಿದಾಗ ನಿಜ ಜೀವನದಲ್ಲಿ ಇದು ಸಾಧ್ಯವಾ ಎಂದು ಪ್ರಶ್ನಿಸಬಹುದು. ಸದ್ಯದ ಕಾಲದಲ್ಲಿ ಎರಡು ಕೈಗಳಲ್ಲಿ ಬರೆಯುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಕಂಡುಬರುತ್ತವೆ. ಆದರೆ ನೀವು ಎಂದಿಗಾದರೂ ಬೆನ್ನು ತಿರುಗಿಸಿ ಬೋರ್ಡ್ ನೋಡದೆ ಏಕಕಾಲದಲ್ಲಿ ಎರಡೂ ಕೈಗಳಿಂದ ಚಿತ್ರ ಬಿಡಿಸುವುದನ್ನು ನೋಡಿದ್ದೀರಾ? ಇಂತಹ ಅಪರೂಪದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ ಕಾಣುವಂತೆ, ಶಿಕ್ಷನಂತೆ ಕಾಣುವ ವ್ಯಕ್ತಿಯೊಬ್ಬರು ಬೋರ್ಡ್​ಗೆ ಬೆನ್ನು ಹಾಕಿ ಕುರ್ಚಿಯಲ್ಲಿ ಕುಳಿತುಕೊಂಡು ಎರಡೂ ಕೈಗಳಿಂದ ಶಿವಾಜಿ ಮತ್ತು ಎದುರಾಳಿಯ ಚಿತ್ರವನ್ನು ಬಿಡಿಸಿದ್ದಾರೆ. ಆ ವ್ಯಕ್ತಿ ಚಿತ್ರ ಬಿಡಿಸುವಾಗ ಒಂದು ಸ್ವಲ್ಪವೂ ತಪ್ಪಾಗದಂತೆ ಅಚ್ಚುಕಟ್ಟಾಗಿ ಬಹಳ ಸುಲಭವಾಗಿ ಚಿತ್ರವನ್ನು ಬಿಡಿಸಿರುವುದು ವಿಶೇಷವಾಗಿದೆ.

ಹಿಂದೂಸ್ತಾನ್ ನೌ ಗ್ಲೋಬಲ್ ಪ್ರೆಸ್ ಈ ವಿಡಿಯೋವನ್ನು ಫೇಸ್​ಬುಕ್​​ನಲ್ಲಿ ಹಂಚಿಕೊಂಡಿದ್ದು, 1.5 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ ಮತ್ತು 2ಸಾವಿರಕ್ಕೂ ಹೆಚ್ಚು ಕಾಮೆಂಟ್​ಗಳ ಜೊತೆಗೆ 1.49 ಲಕ್ಷ ಲೈಕ್​ಗಳು ಬಂದಿವೆ. ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಗರು ಕಾಮೆಂಟ್ ಮಾಡಿ ಕಲೆಯನ್ನು ಮೆಚ್ಚಿಕೊಂಡಿದ್ದಾರೆ, ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರೊಬ್ಬರು ವ್ಯಕ್ತಿಯ ಮುಖಭಾವವನ್ನು ಗಮನಿಸಿ ಮಾಡಿದ ಕಾಮೆಂಟ್​ನಂತೆ ತೋರುತ್ತದೆ. “ಅವರ ಮುಂದೆ ಕನ್ನಡಿ ಇದೆ” ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇವರ ಕಾಮೆಂಟ್​ಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, “ಆದರೂ ದೊಡ್ಡ ಪ್ರಯತ್ನ” ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, ಮಹಾನ್ ಕಲಾವಿದ, “ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ಮೂಕನಾಗಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.

Published On - 4:47 pm, Fri, 22 July 22

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ