ವಿಶ್ವದ 11ನೇ ಆಗರ್ಭ ಶ್ರೀಮಂತನೆನಿಸಿಕೊಂಡಿರುವ ಚಾನ್ಪೆನ್ ಜಾವ್ ಹಿಂದೆ ಮ್ಯಾಕ್ಡೊನಾಲ್ಡ್ ನಲ್ಲಿ ಬರ್ಗರ್ ತಯಾರಿಸುತ್ತಿದ್ದರು!
ಚೀನೀ-ಕೆನಡಿಯನ್ ಮೂಲದ ಚಾನ್ಪೆನ್ ಅವರ ಆಸ್ತಿಯಲ್ಲಿ ನಂಬಲಸದಳ ಹೆಚ್ಚಳವು ಕ್ಷಿಪ್ರಗತಿಯಲ್ಲಿ ಮುನ್ನುಗ್ಗುತ್ತಿರುವ ಜಗತ್ತಿನಲ್ಲಿ ಡಿಜಿಟಲ್ ಕರೆನ್ಸಿ ಸೃಷ್ಟಿಸಬಹುದಾದ ಗಳಿಕೆ ಆಯಾಮಕ್ಕೆ ಸಾಕ್ಷಿಯಾಗಿದೆ. ಕಳೆದ ವರ್ಷ, ಇತರ ಕ್ರಿಪ್ಟೋ ಸಂಸ್ಥಾಪಕರು ಸಹ ವರ್ಚುವಲ್ ನಾಣ್ಯಗಳ ಮೌಲ್ಯವನ್ನು ಒಟ್ಟುಗೂಡಿಸಿದಂತೆ ಭಾರಿ ಲಾಭವನ್ನು ಮಾಡಿಕೊಂಡಿದ್ದಾರೆ.
ಬ್ಲೂಮ್ಬರ್ಗ್ ಬಿಲ್ಲಿಯನ್ನೇರ್ಸ್ ಇಂಡೆಕ್ಸ್ (Bloomberg Billionaire’s Index) ಲೆಕ್ಕಾಚಾರ ಮಾಡಿ, ತಾಳೆ ಹಾಕಿರುವ ಪ್ರಕಾರ ಕ್ರಿಪ್ಟೋಕರೆನ್ಸಿ ಸಿಈಒ ಆಗಿ ಕೆಲಸ ಮಾಡುವ ಚಾನ್ಪೆನ್ ಜಾವ್ (Changpeng Zhao) ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬರೆನಿಸಿಕೊಳ್ಳುವಷ್ಟು ಸಂಪತ್ತು ಹೊಂದಿದ್ದಾರೆ. ಕ್ರಿಪ್ಟೋ ವಿನಿಮಯ ಕಂಪನಿ ಬೈನಾನ್ಸ್ನಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ (CEO) ಚಾನ್ಪೆನ್ ಅವರ ಒಟ್ಟು 715 ಲಕ್ಷ ಕೋಟಿ ರೂಪಾಯಿಗಳು!! ಚಾನ್ಪೆನ್ ಅವರ ಆಸ್ತಿಯನ್ನು ನಮಗೆ ಅರ್ಥವಾಗುವ ರೀತಿಯಲ್ಲಿ ನೋಡುವುದಾದರೆ ಏಷ್ಯಾದ ನಂಬರ್ ವನ್ ಶ್ರೀಮಂತ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ್ದಾರೆ ಮತ್ತು ಒಱಕಲ್ ಸಂಸ್ಥೆಯ ಸಂಸ್ಥಾಪಕ ಲ್ಯಾರಿ ಎಲ್ಲಿಸನ್ ಅವರಿಗಿರುವಷ್ಟು ಸಂಪತ್ತಿಗೆ ಬಹಳ ಹತ್ತಿರ ಬಂದಿದ್ದಾರೆ. ಮುಕೇಶ್ ಅಂಬಾನಿಯವರ ಆಸ್ತಿ ಕಳೆದೆರಡು ವರ್ಷಗಳಲ್ಲಿ ಅಗಾಧವಾಗಿ ಹೆಚ್ಚಿದ್ದರೂ ಚಾನ್ಪೆನ್ ಭಾರತೀಯ ಉದ್ಯಮಿಯನ್ನು ದಾಟಿ ಮುನ್ನಡೆದಿದ್ದಾರೆ.
ಚೀನೀ-ಕೆನಡಿಯನ್ ಮೂಲದ ಚಾನ್ಪೆನ್ ಅವರ ಆಸ್ತಿಯಲ್ಲಿ ನಂಬಲಸದಳ ಹೆಚ್ಚಳವು ಕ್ಷಿಪ್ರಗತಿಯಲ್ಲಿ ಮುನ್ನುಗ್ಗುತ್ತಿರುವ ಜಗತ್ತಿನಲ್ಲಿ ಡಿಜಿಟಲ್ ಕರೆನ್ಸಿ ಸೃಷ್ಟಿಸಬಹುದಾದ ಗಳಿಕೆ ಆಯಾಮಕ್ಕೆ ಸಾಕ್ಷಿಯಾಗಿದೆ. ಕಳೆದ ವರ್ಷ, ಇತರ ಕ್ರಿಪ್ಟೋ ಸಂಸ್ಥಾಪಕರು ಸಹ ವರ್ಚುವಲ್ ನಾಣ್ಯಗಳ ಮೌಲ್ಯವನ್ನು ಒಟ್ಟುಗೂಡಿಸಿದಂತೆ ಭಾರಿ ಲಾಭವನ್ನು ಮಾಡಿಕೊಂಡಿದ್ದಾರೆ. ಎಥೆರಿಯಮ್ ಸೃಷ್ಟಿಕರ್ತ ವಿಟಾಲಿಕ್ ಬುಟೆರಿನ್ ಮತ್ತು ಕಾಯಿನ್‌ಬೇಸ್ ಸಂಸ್ಥಾಪಕ ಬ್ರಿಯಾನ್ ಆರ್ಮ್‌ಸ್ಟ್ರಾಂಗ್ ಇಬ್ಬರೂ ಬಿಲಿಯನೇರ್‌ಗಳ ಪಟ್ಟಿ ಸೇರಿದ್ದಾರೆ.
ಬೈನಾನ್ಸ್ ಬೆಂಬಲಿತ ಎಫ್ ಟಿ ಎಕ್ಸ್ನ ಸಿಈಓ ಸ್ಯಾಮ್ ಬ್ಯಾಂಕ್ಮನ್-ಫ್ರೈಡ್ ಅವರು ಇತ್ತೀಚಿಗೆ ಸಿ ಎನ್ ಎನ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಕ್ರಿಪ್ಟೋ ಕರೆನ್ಸಿ ವ್ಯವಹಾರವು ಅಭೂತಪೂರ್ವ ಆಸ್ತಿಗಳಿಕೆಗೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದ್ದಾರೆ.
ಚೀನಾದ ಜಿಯಾಂಗ್ಸುನಲ್ಲಿ ಹುಟ್ಟಿದ ಚಾನ್ಪೆನ್ ಅವರ ತಂದೆತಾಯಿಗಳಿಬ್ಬರೂ ವೃತ್ತಿಯಲ್ಲಿ ಶಿಕ್ಷಕರಾಗಿದ್ದರು. 80 ರ ದಶಕದಲ್ಲಿ, ಪ್ರೊಫೆಸರ್ ಆಗಿದ್ದ ಅವರ ತಂದೆಯನ್ನು ಬೂರ್ಜಾ-ಪರ ಬುದ್ಧಿಜೀವಿ ಎಂಬ ಹಣೆಪಟ್ಟಿ ಕಟ್ಟಿ ಚೀನಾದಿಂದ ಬಹಿಷ್ಕರಿಸಲಾಗಿತ್ತು.
ಪತ್ನಿ ಮತ್ತು ಮಕ್ಕಳೊಂದಿಗೆ ಅವರು ಕೆನಡಾದ ವ್ಯಾಂಕ್ಯೂವರ್ ಗೆ ತೆರಳಿ ಅಲ್ಲಿಯೇ ನೆಲೆಸಿದರು. ವಿದ್ಯಾರ್ಥಿಯಾಗಿದ್ದಾಗಲೇ ಚಾನ್ಪೆನ್ ಮನೆಖರ್ಚು ಸರಿದೂಗಿಸಲು ಮ್ಯಾಕ್ಡೊನಾಲ್ಡ್ ನಲ್ಲಿ ಬರ್ಗರ್ ತಯಾರಿಸುವ ಕೆಲಸ ಮಾಡುತ್ತಿದ್ದರು ಮತ್ತು ರಾತ್ರಿ ಸಮಯ ಪೆಟ್ರೋಲ್ ಬಂಕ್ಗಳಲ್ಲಿ ದುಡಿಯುತ್ತಿದ್ದರು.
ಮಾಂಟ್ರಿಯಲ್ ಮ್ಯಾಕ್ಗಿಲ್ ಯೂನಿವರ್ಸಿಟಿಯಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ ಪಡೆದ ನಂತರ ಚಾನ್ಪೆನ್ ಟೊಕಿಯೊ ಮತ್ತು ನ್ಯೂ ಯಾರ್ಕ್ ನಗರಗಳಲ್ಲಿ ಕೆಲಸ ಮಾಡಿದರು.
ಟೋಕಿಯೊ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಟ್ರೇಡಿಂಗ್ ಗೆ ನೆರವಾಗುವ ಒಂದು ಸಾಫ್ಟ್ವೇರ್ ವಿನ್ಯಾಸಗೊಳಿಸಿದ ನಂತರ ಈ ಕೋಡಿಂಗ್ ತಜ್ಞನ ಪ್ರತಿಭೆಯನ್ನು ಗುರುತಿಸಿದ ನ್ಯೂ ಜೆರ್ಸಿ, ಲಂಡನ್ ಸ್ಟಾಕ್ ಎಕ್ಸ್ಚೇಂಜ್ಗಳು ಅವರಿಗೆ ಭಾರಿ ಮೊತ್ತದ ಸಂಬಳ ನೀಡಿ ಹೈರ್ ಮಾಡಿದವು. ಚಾನ್ಪೆನ್ ಅಲ್ಲಿಂದ ಹಿಂತಿರುಗಿ ನೋಡಿಲ್ಲ.
ಇದನ್ನೂ ಓದಿ: ಹಿಮದ ರಾಶಿಯ ನಡುವೆ ವಾಲಿಬಾಲ್ ಆಡಿದ ಭಾರತೀಯ ಯೋಧರು: ವಿಡಿಯೋ ವೈರಲ್