ಕ್ರಿಕೆಟ್ ಮೈದಾನದಲ್ಲಿ ಗಂಭೀರವಾಗಿ ಅಟದ ಮೇಲೆ ಗಮನ ಕೇಂದ್ರೀಕರಿಸುವ ಹಾರ್ದಿಕ್ ಪಾಂಡ್ಯ ಹೊರಗಡೆ ಮಾತ್ರ ಭಾರಿ ಶೋಕಿಲಾಲ!

ಹಾರ್ದಿಕ್ ಮತ್ತು ಅವರ ಸಹೋದರ ಕೃಣಾಲ್ ಪಾಂಡ್ಯ ಸೇರಿ ವಡೋದರನಲ್ಲಿ 6,000 ಚದರ ಅಡಿ ವಿಸ್ತೀರ್ಣದ ಒಂದು ಪೆಂಟ್ಹೌಸ್ ಖರೀದಿಸಿದ್ದಾರೆ. ಅವರ ಕುಟುಂಬದ ಎಲ್ಲ ಸದಸ್ಯರು ಅಲ್ಲೇ ನೆಲೆಸಿದರೆ, ಹಾರ್ದಿಕ್ ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಮುಂಬೈನ ಫ್ಲ್ಯಾಟೊಂದರಲ್ಲಿ ಇರುತ್ತಾರೆ.

ಹಾರ್ದಿಕ್ ಪಾಂಡ್ಯ (Hardik Pandya) ಕ್ರಿಕೆಟ್ ಮೈದಾನದಲ್ಲಿರುವಾಗ ಮತ್ತು ಮೈದಾನದಾಚೆ ಇರುವಾಗಲೂ ಸುದ್ದಿಯಲ್ಲಿರುತ್ತಾರೆ. ಅವರು ಯೂಥ್ ಐಕಾನ್ ಅನ್ನೋದರಲ್ಲಿ ಅನುಮಾನವಿಲ್ಲ ಮಾರಾಯ್ರೇ. ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಹಣ ಸಂಪಾದಿಸಿದ್ದಾರೆ ಮತ್ತು ಅದಕ್ಕೆ ತಕ್ಕನಾದ ಐಷಾರಾಮಿ ಜೀವನಶೈಲಿಯನ್ನು (Lavish Lifestyle) ಅಳವಡಿಸಿಕೊಂಡಿದ್ದಾರೆ. ಕ್ರಿಕೆಟ್ ಲೋಕದ ಪ್ಲೇ ಬಾಯ್ ಅಂತಲೂ ಹಾರ್ದಿಕ್ ರನ್ನು ಉಲ್ಲೇಖಿಸಲಾಗುತ್ತದೆ. ಮೊದಲು ಇವರ ಸಂಪಾದನೆ ಎಷ್ಟಿರಬಹುದೆಂದು ತಿಳಿದುಕೊಳ್ಳೋಣ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) (BCCI) ಹಾರ್ದಿಕ್ ಗೆ ಬಿ ಗ್ರೇಡ್ ಒಪ್ಪಂದ ನೀಡಿದೆ. ಅಂದರೆ ಬಿಸಿಸಿಐ ನಿಂದ ಪ್ರತಿವರ್ಷ ಹಾರ್ದಿಕ್ ರೂ. 3 ಕೋಟಿ ಸಂದಾಯವಾಗುತ್ತದೆ. ಪಂದ್ಯಗಳು ನಡೆಯುವಾಗ ಸಿಗುವ ಮ್ಯಾಚ್ ಫೀ, ದಿನಭತ್ಯೆ, ಸಾರಿಗೆ ಭತ್ಯೆ ಮತ್ತು ಇತರ ಭತ್ಯೆಗಳು ಪ್ರತ್ಯೇಕ. ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಹಾರ್ದಿಕ್​ಗೆ ಪ್ರತಿ ಸೀಸನ್ ರೂ. 11 ಕೋಟಿ ಸಿಗುತ್ತದೆ. ಇದಲ್ಲದೆ, ಹಲವು ಉತ್ಪಾದನೆಗಳನ್ನು ಇವರು ಎಂಡಾರ್ಸ್ ಮಾಡುತ್ತಾರೆ.

ಹಾರ್ದಿಕ್ ಪತ್ನಿ ನತಾಷಾ ಸ್ಯಾಂಕೊವಿಚ್ ಸೆರ್ಬಿಯದವರಾದರೂ ಹಲವು ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದಾರೆ. ನತಾಷಾ ಬಹುಮುಖ ಪ್ರತಿಭೆಯ ಮಹಿಳೆ. ಅವರು ಡ್ಯಾನ್ಸರ್, ಬಾಲಿವುಡ್ ನಟಿ ಮತ್ತು ರೂಪದರ್ಶಿಯೂ ಆಗಿದ್ದಾರೆ. ದಂಪತಿಗೆ ಒಂದು ಮಗುವಿದೆ.

ಹಾರ್ದಿಕ್ ಮತ್ತು ಅವರ ಸಹೋದರ ಕೃಣಾಲ್ ಪಾಂಡ್ಯ ಸೇರಿ ವಡೋದರನಲ್ಲಿ 6,000 ಚದರ ಅಡಿ ವಿಸ್ತೀರ್ಣದ ಒಂದು ಪೆಂಟ್ಹೌಸ್ ಖರೀದಿಸಿದ್ದಾರೆ. ಅವರ ಕುಟುಂಬದ ಎಲ್ಲ ಸದಸ್ಯರು ಅಲ್ಲೇ ನೆಲೆಸಿದರೆ, ಹಾರ್ದಿಕ್ ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಮುಂಬೈನ ಫ್ಲ್ಯಾಟೊಂದರಲ್ಲಿ ಇರುತ್ತಾರೆ.

ಹಾರ್ದಿಕ್ ಗೆ ಕಾರುಗಳ ಶೋಕಿ ಬಹಳ ಇದೆ ಮಾರಾಯ್ರೇ. ಲ್ಯಾಂಡ್ ರೋವರ್, ರೇಂಜ್ ರೋವರ್ ವೋಗ್, ಮರ್ಸಿಡಿಸ್ ಎಎಮ್ ಜಿ ಜಿ63 ಎಸ್ ಯು ವಿ ದುಬಾರಿ ಕಾರುಗಳು ಆವರಲ್ಲಿದ್ದು ಮರ್ಸಿಡಿಸ್ ಕಾರಿನ ಬೆಲೆಎ ರೂ. 2.25 ಕೋಟಿಯಂತೆ!!

ಹಾರ್ದಿಕ್ ಗೆ ಕೈಗಡಿಯಾರಗಳ ಹುಚ್ಚು ಸಹ ಇದೆ. ಇತ್ತೀಚಿಗೆ ಅವರ ಮಣಿಕಟ್ಟಿನಲ್ಲಿ 18-ಕ್ಯಾರಟ್ ಹೊನ್ನಿನ ಹೊದಿಕೆಯ ರೋಲೆಕ್ಸ್ ಡೇಟೋನಾ ಯೆಲ್ಲೋ ಗೋಲ್ಡ್ ಕಾಸ್ಮೊಗ್ರಾಫ್ 40 ವಾಚ್ ಮಿರಮಿರ ಮಿಂಚುತಿತ್ತು. ಇದರ ಬೆಲೆ ರೂ. 1 ಕೋಟಿ!

ಈ ಮಹಾಶಯನಿಗೆ ದುಬಾರಿ ಆಭರಣ ಮತ್ತು ಬೆಲೆಬಾಳುವ ಮತ್ತು ಅಂತರರಾಷ್ಟ್ರೀಯ ಬ್ರ್ಯಾಂಡ್ ಬಟ್ಟೆ ಧರಿಸುವ ಶೋಕಿಯೂ ಇದೆ.

ಇದನ್ನೂ ಓದಿ:   ಹಿಮದ ರಾಶಿಯ ನಡುವೆ ವಾಲಿಬಾಲ್​ ಆಡಿದ ಭಾರತೀಯ ಯೋಧರು: ವಿಡಿಯೋ ವೈರಲ್​

Click on your DTH Provider to Add TV9 Kannada