Viral Video: ಇದು ಆಮೆ ಅಂತ ನೀವು ತಪ್ಪು ತಿಳ್ಕೋಬೇಡಿ, ಇದು ಬೇರೆನೇ..

| Updated By: Rakesh Nayak Manchi

Updated on: Sep 04, 2022 | 10:52 AM

ಇದು ಪಕ್ಕಕ್ಕೆ ನೋಡಿದರೆ ನಿಮಗೆ ಆಮೆ ನಡೆದುಕೊಂಡು ಬಂದಹಾಗೆ ಕಾಣಬಹುದು. ಆದರೆ ಇದು ಆಮೆಯಲ್ಲ, ಇದು ಸಣ್ಣ ಕುಂಯ್ ಕುಂಯ್ ಅಂತ ಕೂಗುವ ನಾಯಿ ಮರಿ.

Viral Video: ಇದು ಆಮೆ ಅಂತ ನೀವು ತಪ್ಪು ತಿಳ್ಕೋಬೇಡಿ, ಇದು ಬೇರೆನೇ..
ಇದು ಆಮೆ ಅಂತ ನೀವು ತಪ್ಪು ತಿಳ್ಕೋಬೇಡಿ, ಇದು ಕುಂಯ್ ಕುಂಯ್ ನಾಯಿ ಮರಿ
Follow us on

ಇತ್ತೀಚಿನ ದಿನಗಳಲ್ಲಿ ಸಾಕು ಪ್ರಾಣಿಗಳನ್ನು ಮನೆಯೊಳಗೆ ಬಿಟ್ಟುಕೊಳ್ಳುವಷ್ಟು ಪ್ರೀತಿಯಿಂದ ಸಾಕುವ ಪ್ರವೃತ್ತಿ ಬೆಳೆಯುತ್ತಿದೆ. ಇನ್ನೂ ಕೆಲವರು ಮನುಷ್ಯರು ಯಾವೆಲ್ಲಾ ಸೌಲಭ್ಯಗಳನ್ನು ಉಪಯೋಗಿಸುತ್ತಾರೋ ಆ ಎಲ್ಲಾ ಸೌಲಭ್ಯಗಳನ್ನೂ ತಮ್ಮ ಸಾಕು ಪ್ರಾಣಿಗಳಿಗೂ ಕಲ್ಪಿಸುವುದನ್ನು ನೋಡುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿರುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ (Viral Video) ಆಗುತ್ತಿದ್ದು, ವಿಡಿಯೋ ನೋಡಿದ ಕ್ಷಣದಲ್ಲೇ ಇದು ಆಮೆ ಎಂದು ನೀವು ತಿಳಿದುಕೊಳ್ಳಬಹುದು. ಏಕೆಂದರೆ ಅದು ಕೊಂಚ ನೋಡಲು ಆಮೆಯ ಆಕಾರದಲ್ಲೇ ಇದೆ. ಆದರೆ ಇದು ಆಮೆಯಲ್ಲ, ಬದಲಾಗಿ ಕುಂಯ್ ಕುಂಯ್ ಎಂಬ ಹೇಳುವ ಮುದ್ದಾದ ಸಣ್ಣ ನಾಯಿ.

ವೈರಲ್ ವಿಡಿಯೋದಲ್ಲಿ ಇರುವಂತೆ, ಸಣ್ಣ ನಾಯಿಮರಿಯೊಂದು ಮಳೆ ಬರುತ್ತಿದ್ದ ಸಂದರ್ಭದಲ್ಲಿ ರೈನ್ ಕೋಟ್ ಧರಿಸಿ ಮನೆ ಸುತ್ತ ಓಡಾಡುತ್ತಾ ಕೊನೆಯಲ್ಲಿ ಮೈ ಕೊಡವುತ್ತದೆ. ಈ ವಿಡಿಯೋವನ್ನು ಡಾಗ್ಸ್ ಆಫ್ ಇನ್ಸ್ಟಾಗ್ರಾಮ್ ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ನಿಮ್ಮ ನಾಯಿಗೆ ಮಳೆ ಇಷ್ಟವಾಗಿದೆಯೇ?” ಎಂಬ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಅದರಲ್ಲೂ ಪೆಟ್ ಲವರ್ಸ್ ಆಶ್ಚರ್ಯಗೊಂಡಿದ್ದು, ಇದುವರೆಗೆ ಸುಮಾರು 1.6 ಮಿಲಿಯನ್ ವೀಕ್ಷಣೆಗಳನ್ನು ಮತ್ತು 98,000 ಕ್ಕೂ ಹೆಚ್ಚು ಲೈಕ್​ಗಳನ್ನು ಸಂಗ್ರಹಿಸಿದೆ. ಒಂದಷ್ಟು ಮಂದಿ ವಿಡಿಯೋಗೆ ಕಾಮೆಂಟ್​ಗಳನ್ನು ಹಾಕುತ್ತಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಮತ್ತಷ್ಟು ಟ್ರೆಂಡಿಂಗ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ

Published On - 10:00 am, Sun, 4 September 22