Viral Video: ಡಾನ್ಸ್ ಮಾಡುತ್ತಾ ಆಯಮ್ಮಾ ಹುಡುಗನ ಮೇಲೆ ಬಿದ್ಬಿಟ್ರು
ಮಹಿಳೆಯರ ಗುಂಪೊಂದು ಡಾನ್ಸ್ ಮಾಡುತ್ತಿದ್ದಾಗ ಡಾನ್ಸ್ ಮಾಡಲು ಬಂದ ಬಾಲಕ, ಸೂಕ್ತ ಸ್ಥಳಕ್ಕೆ ಹುಡುಕಾಡುತ್ತಿದ್ದಾಗ ಡಾನ್ಸ್ ಮಾಡುತ್ತಿದ್ದ ಆಯಮ್ಮ ಆತನ ಮೇಲೆ ಎಡವಿ ಬೀಳೋದೇ? ಪಾಪ ಬಾಲಕನಿಗೆ ಹೇಗೆ ಆಗಿರಬೇಡ? ವಿಡಿಯೋ ನೋಡಿ
ಇತ್ತೀಚಿನ ದಿನಗಳಲ್ಲಿ ಭಾರತೀಯ ಮದುವೆಗಳಲ್ಲಿ ಡಾನ್ಸ್ ಮಾಡುವುದು ಸಾಮನ್ಯ, ಯುವಕ ಯುವತಿಯರು ಆರಂಭದಲ್ಲಿ ಡಾನ್ಸ್ ಮಾಡುತ್ತಿದ್ದರು, ಆದರೀಗ ಹಿರಿಯರು ಕಿರಿಯರು ಎನ್ನದೆ ಎಲ್ಲರೂ ಕುಣಿದು ಕುಪ್ಪಳಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಅವಗಢಗಳು ಕೂಡ ಸಂಭವಿಸುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡಿದೆ. ಇದೀಗ ಒಂದು ವಿಡಿಯೋ ವೈರಲ್ ಆಗುತ್ತಿದೆ. ಬಾಲಕನೊಬ್ಬ ತಾನು ಡಾನ್ಸ್ ಮಾಡಬೇಕು ಎಂದು ಅಂದುಕೊಂಡು ಮಹಿಳೆಯರ ಗುಂಪಿಗೆ ಸೇರಿಕೊಂಡು ಡಾನ್ಸ್ ಮಾಡುತ್ತಿದ್ದಾಗ ಕೂದಲೆಳೆ ದೂರದಲ್ಲಿ ಡಾನ್ಸ್ ಮಾಡುತ್ತಿದ್ದ ಆಯಮ್ಮ ಆತನ ಮೇಲೆ ಎಡವಿ ಬೀಳೋದೇ? ಪಾಪ ಬಾಲಕನಿಗೆ ಹೇಗೆ ಆಗಿರಬೇಡ? ಕೂಗದೆ ಇರುವನೇ? ಭಾನುವಾರ ರಜಾ ದಿನದಂದು ಜಡ ಹಿಡಿಯುತ್ತಿದ್ದರೆ ಈ ಹಾಸ್ಯದ ವಿಡಿಯೋ ನೋಡಿ ಮನರಂಜಿಸಿ..
‘patiale_wale_chacha_ji’ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸಾವಿರಾರು ವೀಕ್ಷಣೆಗಳೊಂದಿಗೆ ವೈರಲ್ ಪಡೆದುಕೊಂಡಿದೆ. ನೂರಾರು ಲೈಕ್ಗಳು ಕೂಡ ಬಂದಿವೆ. ನೆಟಿಜನ್‌ಗಳು ಈ ವಿಡಿಯೋಗೆ ಹಾಸ್ಯವಾಗಿಯೇ ಕಾಮೆಂಟ್ ಮಾಡಿದ್ದು, ಒಬ್ಬರು “ಬಾಲಕ ಸೇಫ್ ಆಗಿದ್ದಾನಾ?” ಎಂದು ಕೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ “ಮಗು ಸುರಕ್ಷಿತವಾಗಿದೆ ದೇವರಿಗೆ ಧನ್ಯವಾದಗಳು” ಎಂದಿದ್ದಾರೆ.
View this post on Instagram
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ