AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಡ್ರಗ್ಸ್ ಖರೀದಿಸಲು ಹಣ ಕೊಡದ ತಾಯಿ ಮೇಲೆ ಸಣ್ಣ ಬಾಲಕನಿಂದ ಹಲ್ಲೆ

ಒಂದು ಕಾಲದಲ್ಲಿ ಅತಿ ಹೆಚ್ಚು ಮದ್ಯದ ಗ್ರಾಹಕವಾಗಿದ್ದ ಕೇರಳ ಈಗ ಭಾರತದ ಡ್ರಗ್ ಕ್ಯಾಪಿಟಲ್ ಆಗಿ ಮಾರ್ಪಟ್ಟಿದೆ. ಡ್ರಗ್ಸ್ ಖರೀದಿಸಲು ಹಣ ಕೊಡಲಿಲ್ಲ ಎಂದು ತನ್ನ ತಾಯಿಯ ಮೇಲೆ ಸಣ್ಣ ಬಾಲಕನೊಬ್ಬ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗುತ್ತಿದೆ.

Viral Video: ಡ್ರಗ್ಸ್ ಖರೀದಿಸಲು ಹಣ ಕೊಡದ ತಾಯಿ ಮೇಲೆ ಸಣ್ಣ ಬಾಲಕನಿಂದ ಹಲ್ಲೆ
ಡ್ರಗ್ಸ್​ ಖರೀದಿಸಲು ಹಣ ಕೊಡದಿದ್ದಕ್ಕೆ ತಾಯಿ ಮೇಲೆ ಮಗನಿಂದ ಹಲ್ಲೆ
TV9 Web
| Edited By: |

Updated on:Sep 04, 2022 | 1:11 PM

Share

ಕೇರಳದಲ್ಲಿ ಮಾದಕ ವಸ್ತುಗಳ ಮಾರಾಟ ಹೆಚ್ಚಾಗುತ್ತಿದ್ದು, ವ್ಯಸನಿಗಳ ಸಂಖ್ಯೆಯೂ ಹೆಚ್ಚುತ್ತಿದೆ. 2022 ರಲ್ಲಿ ಇಲ್ಲಿಯವರೆಗೆ 16,000 ಕ್ಕೂ ಹೆಚ್ಚು ಮಾದಕವಸ್ತು ಪ್ರಕರಣಗಳು ವರದಿಯಾಗಿವೆ. ಬಾಳಿ ಬದುಕಬೇಕಾದ ಯುವಕರು, ಮಕ್ಕಳು ಹೇಗೆ ದುಶ್ಚಟಕ್ಕೆ ಬಲಿಯಾಗಿದ್ದರೆ ಎಂದರೆ, ಬಾಲಕನೊಬ್ಬ ಡ್ರಗ್ಸ್ ಖರೀದಿಸಲು ಹಣ ಕೊಡದ ತನ್ನ ತಾಯಿಯ ಮೇಲೆಯೇ ಹಲ್ಲೆ ನಡೆಸಿದ್ದಾನೆ. ತಾಯಿಗೇನಾದರೂ ಏನೆಂತೆ, ತನಗೆ ಡ್ರಗ್ಸ್ ಖರೀದಿಸಲು ಹಣ ಬೇಕು ಅಷ್ಟೇ ಎಂಬ ಮನಸ್ಥಿತಿ ಅತನಲ್ಲಿ ಬೆಳೆದಂತಿದೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬಡತನದಲ್ಲಿ ಜೀವನ ಸಾಗಿಸುತ್ತಿರುವ ಮಹಿಳೆಯೊಬ್ಬಳ ಮಗ ದುಶ್ಚಟಕ್ಕೆ ಬಲಿಯಾಗಿದ್ದಾನೆ. ತನ್ನ ದುಶ್ಚಟದ ದಾಹ ತೀರಿಸಿಕೊಳ್ಳಲು ಮಗ ತನ್ನ ತಾಯಿಯ ಬಳಿಯೇ ಹಣಕ್ಕಾಗಿ ಪೀಡಿಸುತ್ತಾನೆ. ಹಣ ಕೊಡಲ್ಲ ಎಂದಿದ್ದಕ್ಕೆ ತಾಯಿಯ ಮೇಲೆಯೇ ಹಲ್ಲೆ ಕೈ, ಕಾಲಿನಿಂದ ಹಲ್ಲೆ ನಡೆಸಿದ್ದಾನೆ. ಮಗನ ಕಾಟವನ್ನು ಎಷ್ಟು ಅಂತಾ ಸಹಿಸುವುದು? ಮಗನ ಕಿರುಚಾಟದ ನಡುವೆ ಕೊಡಪಾನ ಹಿಡಿದುಕೊಂಡು ಮಗನನ್ನು ಥಳಿಸಲು ಮುಂದಾಗುವ ಮೂಲಕ ಪ್ರತಿರೋಧ ಒಡ್ಡುತ್ತಾಳೆ. ಈ ವೇಳೆ ಆ ಬಾಲಕ ಕೊಂಚ ಹಿಂದೇಟು ಹಾಕಿದರೂ ಹಣಕ್ಕಾಗಿ ಪೀಡಿಸುವುದನ್ನು ನಿಲ್ಲಿಸುವುದಿಲ್ಲ. ಬಾಲಕನ ಕಿರುಚಾಟ ಕೇಳಿ ಆಗಮನಿಸಿದ ಮತ್ತೊಬ್ಬ ಮಹಿಳೆಗೆ ಚಪ್ಪಲಿ ಎಸೆದಿರುವುದನ್ನು ಕೂಡ ವೈರಲ್ ವಿಡಿಯೋದಲ್ಲಿ ನೋಡಬಹುದು.

ಕೇರಳದಲ್ಲಿ ಮಾದಕ ವಸ್ತುಗಳ ವಿರುದ್ಧ ಸಮರ ಸಾರಿದ ಆಡಳಿತಾರೂಢ ಎಲ್‌ಡಿಎಫ್ ಮತ್ತು ವಿಪಕ್ಷ ಯುಡಿಎಫ್ ರಾಜ್ಯದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಹಾವಳಿ ತಡೆಯಲು ಜಂಟಿಯಾಗಿ ಕಣಕ್ಕಿಳಿದಿವೆ. ದುಶ್ಚಟಗಳನ್ನು ತಡೆಯಲು ವಿಧಾನಸಭೆಯಲ್ಲಿ ಸಿಎಂ ಪಿಣರಾಯ್ ವಿಜಯನ್ ಕಠಿಣ ಕ್ರಮಗಳನ್ನು ಘೋಷಿಸಿದ್ದಾರೆ. ಇದರಲ್ಲಿ, ನಿತ್ಯದ ಅಪರಾಧಿಗಳನ್ನು ವಿಚಾರಣೆಯಿಲ್ಲದೆ ಎರಡು ವರ್ಷಗಳ ಕಾಲ ಬಂಧನದಲ್ಲಿಡುವುದು, ಎನ್‌ಡಿಪಿಎಸ್ ಕಾಯ್ದೆಯಡಿ ಶಿಕ್ಷೆಗೆ ಒಳಗಾದವರ ಡೇಟಾ ಬ್ಯಾಂಕ್ ಸಿದ್ಧಪಡಿಸುವುದು ಮತ್ತು ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳು ಸೇರಿವೆ.

ವಿಡಿಯೋವನ್ನು ನಚಿಕೇತಸ್ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಒಂದು ಕಾಲದಲ್ಲಿ ಅತಿ ಹೆಚ್ಚು ಮದ್ಯದ ಗ್ರಾಹಕವಾಗಿದ್ದ ಕೇರಳ ಈಗ ಭಾರತದ ಡ್ರಗ್ ಕ್ಯಾಪಿಟಲ್ ಆಗಿ ಮಾರ್ಪಟ್ಟಿದೆ. ಎಲ್ಲಾ ರೀತಿಯ ನೈಸರ್ಗಿಕ ಮತ್ತು ಸಂಶ್ಲೇಷಿತ ಔಷಧಗಳು ಕೇರಳದಲ್ಲಿ ಸುಲಭವಾಗಿ ಲಭ್ಯವಿವೆ ಮತ್ತು ಹೆಚ್ಚಿನ ಸಂಖ್ಯೆಯ ಯುವಕರು ಇದಕ್ಕೆ ವ್ಯಸನಿಯಾಗಿದ್ದಾರೆ. ಡ್ರಗ್ಸ್ ಖರೀದಿಸಲು ಹಣಕ್ಕಾಗಿ ತಾಯಿಯೊಂದಿಗೆ ಜಗಳವಾಡಿದ ಬಾಲಕನ ವಿಡಿಯೋ” ಎಂದು ಶೀರ್ಷಿಕೆ ಬರೆಯಲಾಗಿದೆ.

ಮತ್ತಷ್ಟು ವೈರಲ್ ವಿಡಿಯೋ ವೀಕ್ಷಿಸುಲು ಇಲ್ಲಿ ಕ್ಲಿಕ್ ಮಾಡಿ

Published On - 1:11 pm, Sun, 4 September 22