Viral Video: ಲಿಫ್ಟ್ ಪ್ಲೀಸ್.. ಚಲಿಸುತ್ತಿರುವ ರೈಲನ್ನು ಕೈ ಹಿಡಿದು ನಿಲ್ಲಿಸಿದ ವೃದ್ಧ
ಲಿಫ್ಟ್ ಬೇಕಾದರೆ ಕಾರು, ಬಸ್, ಆಟೋ ರಿಕ್ಷಾಗಳಿಗೆ ಕೈ ಅಡ್ಡ ಹಿಡಿದು ನಿಲ್ಲಿಸುವುದನ್ನು ಕಂಡಿದ್ದೇವೆ. ಚಲಿಸುತ್ತಿರುವ ರೈಲಿಗೆ ಕೈ ಅಡ್ಡ ಹಿಡಿದು ನಿಲ್ಲಿಸಿದ್ದನ್ನು ಎಂದಾದರು ನೋಡಿದ್ದೀರಾ? ಹಾಗಿದ್ದರೆ ಈ ವಿಡಿಯೋ ನೋಡಿ..
ಕೆಂಪು ದೀಪ ಇಲ್ಲದಿರುವಾಗ ಅಥವಾ ಜೀಬ್ರಾ ಕ್ರಾಸಿಂಗ್‌ನಲ್ಲಿ ರಸ್ತೆ ದಾಟಲು ಚಲಿಸುತ್ತಿರುವ ವಾಹನಗಳಿಗೆ ಕೈ ಅಡ್ಡ ಹಿಡಿದು ನಿಲ್ಲಿಸುವುದನ್ನು ನೋಡಿದ್ದೇವೆ, ಲಿಫ್ಟ್ ಬೇಕಾದರೆ ಕಾರು, ಬಸ್, ಆಟೋ ರಿಕ್ಷಾಗಳಿಗೆ ಕೈ ಅಡ್ಡ ಹಿಡಿದು ನಿಲ್ಲಿಸುವುದನ್ನು ಕಂಡಿದ್ದೇವೆ. ಆದರೆ ಚಲಿಸುತ್ತಿರುವ ರೈಲಿಗೆ ಕೈ ಅಡ್ಡ ಹಿಡಿದು ನಿಲ್ಲಿಸಿದ್ದನ್ನು ಎಂದಾದರು ನೋಡಿದ್ದೀರಾ? ಇಲ್ಲವೆಂದರೆ ನಿಮಗಾಗಿ ಒಂದು ವಿಡಿಯೋ ಕಾಯುತ್ತಿದೆ. ವೃದ್ಧರೊಬ್ಬರು ಚಲಿಸುತ್ತಿದ್ದ ರೈಲಿಗೆ ಕೈ ಅಡ್ಡ ಹಿಡಿದಾ ಕ್ಷಣಾರ್ಧದಲ್ಲೇ ರೈಲು ನಿಲ್ಲುವುದನ್ನು ವಿಡಿಯೋದಲ್ಲಿ ಕಾಣಬಹುದು.
ವಿಡಿಯೋದಲ್ಲಿ ಇರುವಂತೆ, ರೈಲ್ವೇ ಸ್ಟೇಷನ್ನಿಂದ ರೈಲೊಂದು ಸಾದಾ ವೇಗವಾಗಿ ಬರುತ್ತಿರುತ್ತದೆ. ಈ ವೇಳೆ ರಸ್ತೆ ಹತ್ತಿರ ಇದ್ದ ವೃದ್ದರೊಬ್ಬರು ಕೈ ಅಡ್ಡ ಹಿಡಿದು ನಿಲ್ಲಿಸುವಂತೆ ಸೂಚಿಸಿದ್ದಾರೆ. ಅದರಂತೆ ಒಂದೆರಡು ಬೋಗಿ ವೃದ್ಧರನ್ನು ಸಾಗಿದ ತಕ್ಷಣ ರೈಲು ನಿಲ್ಲುತ್ತದೆ ಮತ್ತು ವೃದ್ಧ ರೈಲಿಗೆ ಹತ್ತುವುದನ್ನು ನೋಡಬಹುದು. ಇದೇ ವೇಳೆ ಓರ್ವ ಮಹಿಳೆ ಕೂಡ ರೈಲು ಹತ್ತುವುದನ್ನು ನೋಡಬಹುದು.
ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯೊಂದರಲ್ಲಿ ಹಂಚಿಕೊಳ್ಳಲಾಗಿದ್ದು, 34 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 1,900 ಲೈಕ್‌ಗಳೊಂದಿಗೆ ರೀಲ್ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ:
View this post on Instagram
ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ