ಬಹ್ರೈಚ್: ಮದ್ಯದ ಅಮಲಿನಲ್ಲಿ ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿದ ಮಹಿಳಾ ಅಧಿಕಾರಿಯ ವಿರುದ್ಧ ಉತ್ತರ ಪ್ರದೇಶದ (Uttar Pradesh) ಆಡಳಿತವು ತನಿಖೆಗೆ ಆದೇಶಿಸಿದೆ. ದೇವಿಪತನ್ ಮಂಡಲ್‌ನ ಉಪ ಕಾರ್ಮಿಕ ಆಯುಕ್ತೆ ರಚನಾ ಕೇಸರ್ವಾನಿ ಎಂದು ಗುರುತಿಸಲಾದ ಮಹಿಳಾ ಅಧಿಕಾರಿ ಕುಡಿದು ಬಹ್ರೈಚ್ ಪೊಲೀಸರಿಗೆ ‘ಬೆದರಿಕೆ’ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ನಾನು ಬೀಳೋದಿಲ್ಲ ಎನ್ನುತ್ತಾ ತೂರಾಡುತ್ತಾ ಮಾತಾಡುತ್ತಿರುವ ಮಹಿಳಾ ಅಧಿಕಾರಿಯನ್ನು ಈ ವಿಡಿಯೋದಲ್ಲಿ (Viral Video) ನೋಡಬಹುದು.
ರಚನಾ ಕೇಸರ್ವಾನಿ ಕುಡಿದು ಪೊಲೀಸ್ ಅಧಿಕಾರಿಗಳೊಂದಿಗೆ ಜಗಳವಾಡುತ್ತಿರುವುದನ್ನು ಬಹ್ರೈಚ್ ಜಿಲ್ಲೆಯ ಪೋಲಿಸ್ ಸ್ಟೇಷನ್ ಜರ್ವಾಲ್ ರಸ್ತೆಯಲ್ಲಿ ನಡೆದ ಘಟನೆಯ ವಿಡಿಯೋದಲ್ಲಿ ಕಾಣಬಹುದು. ‘ನಾನು ಜಿಲ್ಲಾ ಮಟ್ಟದ ಅಧಿಕಾರಿಯಲ್ಲ, ನಾನು ವಿಭಾಗೀಯ ಮಟ್ಟದ ಅಧಿಕಾರಿ. ನಾನು ಕಮಿಷನರ್ ಜೊತೆ ಮಾತನಾಡುತ್ತೇನೆ’ ಎಂದು ಅಧಿಕಾರಿಯು ಬಹ್ರೈಚ್ ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ. ಮದ್ಯ ಕುಡಿದು ರಸ್ತೆಯಲ್ಲಿ ಗಲಾಟೆ ಮಾಡುವುದನ್ನು ಕಾಣಬಹುದು. ಇದರ ಮಧ್ಯೆ, ಓರ್ವ ಮಹಿಳಾ ಕಾನ್ಸ್‌ಟೇಬಲ್ ಆ ಮಹಿಳಾ ಅಧಿಕಾರಿಯನ್ನು ತನ್ನ ಕಾರಿನಲ್ಲಿ ಕೂರಿಸಲು ಪ್ರಯತ್ನಿಸುತ್ತಿರುವುದನ್ನು ನೋಡಲಾಗುತ್ತದೆ. ಆದರೆ, ಆ ಮಹಿಳಾ ಅಧಿಕಾರಿ ರಚನಾ ಕುಡಿದ ಮತ್ತಿನಲ್ಲಿ ಪದೇ ಪದೇ ಹೊರಬರಲು ಪ್ರಯತ್ನಿಸಿ, ನಾನು ಬೀಳೋದಿಲ್ಲ ಎನ್ನುತ್ತ ಮತ್ತೆ ಡ್ರೈವಿಂಗ್ ಸೀಟಿನಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಈ ಘಟನೆಯ ನಂತರ, ಪೊಲೀಸರು ಭಾನುವಾರ ವೈರಲ್ ಆಗಿರುವ ಈ ವಿಡಿಯೋವನ್ನು ಉತ್ತರ ಪ್ರದೇಶದ ಕಾರ್ಮಿಕ ಇಲಾಖೆಗೆ ಉಲ್ಲೇಖಿಸಿ ಅಧಿಕಾರಿಯ ವಿರುದ್ಧ ತನಿಖೆಗೆ ವಿನಂತಿಸಿದ್ದಾರೆ.
She is Rachna Kesarwani, Asst Labour Commissioner of Bahraich, UP celebrating #LabourDay .
Anyways guess how would have these Police Men would had acted if it was a Drunken Man.#LabourDay2022 #happylabourday pic.twitter.com/mXWCiI8dUE— NCMIndia Council For Men Affairs (@NCMIndiaa) May 1, 2022
ಈ ಬಗ್ಗೆ ಜರ್ವಾಲ್ ರೋಡ್ ಪೊಲೀಸ್ ಠಾಣೆಯ ಪ್ರಭಾರಿ ರಾಜೇಶ್ ಕುಮಾರ್ ಸಿಂಗ್ ಮಾತನಾಡಿ, ಏಪ್ರಿಲ್ 27ರಂದು ಮಹಿಳಾ ಅಧಿಕಾರಿ ರಚನಾ ಲಕ್ನೋದಿಂದ ಗೊಂಡಾದಲ್ಲಿರುವ ತನ್ನ ಕಚೇರಿಗೆ ತನ್ನದೇ ಆದ ಕಾರನ್ನು ಚಲಾಯಿಸಿಕೊಂಡು ಪ್ರಯಾಣಿಸುತ್ತಿದ್ದರು. ಆ ವೇಳೆ ಕುಡಿದ ಮತ್ತಿನಲ್ಲಿದ್ದ ಅವರ ಕಾರು ಬಹ್ರೈಚ್ ಕಡೆಗೆ ತಿರುಗಿ ಬಹ್ರೈಚ್ ರಸ್ತೆಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ.
ಈ ಘರ್ಷಣೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪೊಲೀಸರೊಂದಿಗೆ ಸ್ಥಳಕ್ಕೆ ತಲುಪಿದಾಗ, ಕುಡಿದು ಮಹಿಳೆ ಸ್ವತಃ ವಾಹನ ಚಲಾಯಿಸಲು ಪ್ರಯತ್ನಿಸುತ್ತಿರುವುದು ಗೊತ್ತಾಯಿತು. ನಾನು ದೇವಿಪತನ್ ಮಂಡಲದ ಉಪ ಕಾರ್ಮಿಕ ಆಯುಕ್ತೆ ರಚನಾ ಕೇಸರ್ವಾನಿ ಎಂದು ಪೊಲೀಸರಿಗೆ ‘ಬೆದರಿಕೆ’ ಹಾಕಿ ಆಕೆ ಮತ್ತೆ ವಾಹನ ಚಲಾಯಿಸುತ್ತೇನೆ ಎಂದು ಕಾರಿನೊಳಗೆ ಹೋಗಿ ಕುಳಿತರು ಎಂದು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಳಿಕ, ಮಹಿಳಾ ಪೊಲೀಸ್ ಪಡೆ, ಪೊಲೀಸ್ ಅಧಿಕಾರಿಗಳು ಮತ್ತು ಆಕೆಯ ಪತಿಯ ಸಮ್ಮುಖದಲ್ಲಿ ವಿಚಾರಣೆ ನಡೆಸಿ, ಮಹಿಳಾ ಅಧಿಕಾರಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಆಕೆಯ ಪತಿಗೆ ಒಪ್ಪಿಸಲಾಗಿದೆ ಎಂದು ಎಸ್‌ಎಚ್‌ಒ ಹೇಳಿದ್ದಾರೆ. ಆಕೆಯ ವೈದ್ಯಕೀಯ ಪರೀಕ್ಷೆಯ ವರದಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಮೂಲಕ ಇಲಾಖಾ ಉನ್ನತಾಧಿಕಾರಿಗಳಿಗೆ ರವಾನಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Published On - 4:32 pm, Mon, 2 May 22