Viral News: ದಿನವೂ ಮೂತ್ರ ಕುಡಿದರೆ ಸೌಂದರ್ಯ, ಯೌವನ ಹೆಚ್ಚಾಗುತ್ತಾ?; ಈ ಮಹರಾಯನ ಕತೆ ಕೇಳಿ
ಇಂಗ್ಲೆಂಡ್ನ ಈ ವ್ಯಕ್ತಿ ತನ್ನ ಮೂತ್ರವನ್ನು ಕುಡಿಯುವುದು ಮಾತ್ರವಲ್ಲದೆ ಮಾಯಿಶ್ಚರೈಸರ್ ಆಗಿ ದಿನವೂ ಮುಖಕ್ಕೆ ಮಸಾಜ್ ಮಾಡಿಕೊಳ್ಳುತ್ತಾರಂತೆ. ಇದರಿಂದ ಅವರ ಚರ್ಮ ಮೃದುವಾಗಿ, ಹೊಳೆಯುತ್ತಿದೆಯಂತೆ!
ಬ್ರಿಟನ್: ಯೌವನವನ್ನು ಕಾಪಾಡಿಕೊಳ್ಳಬೇಕು, ಸುಂದರವಾಗಿ ಕಾಣಬೇಕು ಎಂಬ ಆಸೆ ಯಾರಿಗೆ ತಾನೇ ಇರುವುದಿಲ್ಲ? ಆದರೆ, ಇಂದಿನ ಜೀವನಶೈಲಿಯಿಂದ (Lifestyle) ಜನರ ಆರೋಗ್ಯದ ಜೊತೆಗೆ ಸೌಂದರ್ಯ ಕೂಡ ಬಹಳ ಬೇಗ ನಶಿಸಿಹೋಗುತ್ತಿದೆ. ಸೌಂದರ್ಯವನ್ನು ಕಾಪಾಡಿಕೊಳ್ಳಲು ಜನರು ಏನೇನೋ ಪ್ರಯತ್ನ ಮಾಡುತ್ತಾರೆ, ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಆದರೆ, ನಾವು ವಿಸರ್ಜಿಸುವ ಮೂತ್ರವನ್ನು (Urine) ನಾವೇ ಕುಡಿಯುವುದರಿಂದ ಯೌವನ ಹೆಚ್ಚಾಗುತ್ತದೆ, ಆರೋಗ್ಯವೂ ಸುಧಾರಿಸುತ್ತದೆ ಎಂದರೆ ನೀವು ನಂಬುತ್ತೀರಾ? ಇಂಗ್ಲೆಂಡ್‌ನಲ್ಲಿ 34 ವರ್ಷದ ವ್ಯಕ್ತಿಯೊಬ್ಬರು ಪ್ರತಿನಿತ್ಯ ತಮ್ಮ ಮೂತ್ರವನ್ನು ತಾವೇ ಕುಡಿಯುತ್ತಾರಂತೆ! ಇದರಿಂದ ಅವರು 10 ವರ್ಷ ಚಿಕ್ಕವರಂತೆ ಕಾಣುತ್ತಿದ್ದಾರಂತೆ, ತಮ್ಮ ಮೂತ್ರವನ್ನು ತಾವೇ ಕುಡಿಯಲು ಶುರು ಮಾಡಿದ ನಂತರ ಅವರ ಖಿನ್ನತೆಯ (Depression) ಸಮಸ್ಯೆ ಕೂಡ ದೂರವಾಗಿದೆಯಂತೆ!
ಮೂತ್ರ ಕುಡಿದರೆ ಯೌವನ ಹೆಚ್ಚುತ್ತದಾ? ಎಂದು ಆಶ್ಚರ್ಯಪಡಬೇಡಿ. ಇದಕ್ಕೆ ಯಾವುದೇ ಸಾಕ್ಷಿಗಳೂ ಇಲ್ಲ. ಆದರೆ, ಆತ ಹೇಳಿಕೊಂಡಿರುವ ಈ ಸೌಂದರ್ಯ ರಹಸ್ಯ ವಿಶ್ವಾದ್ಯಂತ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಈತನ ಮಾತನ್ನು ನಂಬಿಕೊಂಡು ನೀವು ಕೂಡ ಮೂತ್ರವನ್ನು ಕುಡಿಯುವ ಪ್ರಯತ್ನ ಮಾಡಬೇಡಿ! ಏಕೆಂದರೆ, ಇದು ವೈದ್ಯಕೀಯವಾಗಿ ಇನ್ನೂ ಸಾಬೀತಾಗಿಲ್ಲ.
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಹ್ಯಾರಿ ಮಟಾಡೀನ್ ಎಂಬ 34 ವರ್ಷದ ವ್ಯಕ್ತಿ 2016ರಲ್ಲಿ ತನ್ನ ಮಾನಸಿಕ ಸಮಸ್ಯೆಯನ್ನು ಗುಣಪಡಿಸಿಕೊಳ್ಳಲಾಗದೆ ಹತಾಶನಾಗಿದ್ದ. ಇದರಿಂದ ಪಾರಾಗಲು ತನ್ನ ಮೂತ್ರವನ್ನು ತಾನೇ ಸೇವಿಸಲು ಪ್ರಾರಂಭಿಸಿದ. ಇಂಗ್ಲೆಂಡ್ನ ಹ್ಯಾಂಪ್‌ಶೈರ್‌ನ ನಿವಾಸಿಯಾದ ಮಾತದೀನ್ ಸಸ್ಯಾಹಾರಿಯಾಗಿದ್ದಾರೆ. ಅವರು ಪ್ರತಿದಿನ ಕನಿಷ್ಠ 200 ಮಿ.ಲೀ ಮೂತ್ರವನ್ನು ಕುಡಿಯುತ್ತಾರೆ. ‘ಮೂತ್ರ ಚಿಕಿತ್ಸೆ’ ಶಾಂತಿ, ಶಾಂತತೆ ಮತ್ತು ದೃಢಸಂಕಲ್ಪವನ್ನು ಅನುಭವಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.
34 ವರ್ಷದ ಆ ವ್ಯಕ್ತಿ ದಿನವೂ ತಾಜಾ ಮೂತ್ರವನ್ನು ಕುಡಿಯುವುದರಿಂದ ತಮಗೆ ಅನೇಕ ಪ್ರಯೋಜನಗಳಾಗಿವೆ ಎಂದು ಹೇಳಿಕೊಂಡಿದ್ದಾರೆ. ತಮ್ಮ ಮೂತ್ರವು “ಸೂಪರ್ ಕ್ಲೀನ್” ಎಂದು ಅವರು ಹೇಳಿದ್ದಾರೆ. ತಾಜಾ ಮೂತ್ರವು ತಟಸ್ಥ ವಾಸನೆಯನ್ನು ಹೊಂದಿರುತ್ತದೆ. ನನ್ನ ಮೂತ್ರವು “ಸೂಪರ್ ಕ್ಲೀನ್” ಆಗಿರುತ್ತದೆ. ವಯಸ್ಸಾದಂತೆ ಮೂತ್ರವು ಹೆಚ್ಚು ವಾಸನೆಯಿಂದ ಕೂಡಿರುತ್ತದೆ. ಆಗ ಅದನ್ನು ಕುಡಿಯಲು ಕಷ್ಟವಾಗಬಹುದು. ಸದ್ಯಕ್ಕೆ ನನ್ನ ಮೂತ್ರ ಕ್ಲೀನ್ ಆಗಿದ್ದು, ಅದರಲ್ಲಿ ಹೆಚ್ಚು ವಾಸನೆ ಇರದ ಕಾರಣ ನಾನು ದಿನವೂ ಸೇವಿಸುತ್ತಿದ್ದೇನ ಎಂದು ಆತ ಹೇಳಿದ್ದಾರೆ.
ಅಂದಹಾಗೆ, ಈ ಇಂಗ್ಲೆಂಡ್ನ ವ್ಯಕ್ತಿ ಕೇವಲ ತನ್ನ ಮೂತ್ರವನ್ನು ಕುಡಿಯುವುದು ಮಾತ್ರವಲ್ಲದೆ ಮಾಯಿಶ್ಚರೈಸರ್ ಆಗಿ ದಿನವೂ ಮುಖಕ್ಕೆ ಮಸಾಜ್ ಮಾಡಿಕೊಳ್ಳುತ್ತಾರಂತೆ. ದಿನವೂ ಮೂತ್ರ ಕುಡಿಯುವುದರಿಂದ ಅವರು 10 ವರ್ಷ ಚಿಕ್ಕರಂತೆ ಕಾಣುತ್ತಾರಂತೆ. ಮೂತ್ರವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ನನ್ನ ಚರ್ಮವು ಮೃದುವಾಗಿ, ಹೊಳೆಯುತ್ತಿದೆ. ನಾನು ಮೂತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಕ್ರೀಂ ಅಥವಾ ವಸ್ತುಗಳನ್ನು ಚರ್ಮದ ಆರೈಕೆಗೆ ಬಳಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸೌಂದರ್ಯ ಹೆಚ್ಚಿಸುವ ವಿಧಾನದ ಕುರಿತು ಹೆಚ್ಚಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಆದರೆ, ಹ್ಯಾರಿ ಮಟಾಡೀನ್ ಎಂಬ 34 ವರ್ಷದ ವ್ಯಕ್ತಿ ಈ ರೀತಿ ಮೂತ್ರ ಕುಡಿದು, ಮೂತ್ರದ ಮಸಾಜ್ ಮಾಡಿಕೊಳ್ಳುವುದನ್ನು ಕಂಡು ಅವರ ಮನೆಯವರು ಅಸಹ್ಯಪಟ್ಟು, ಆತನೊಂದಿಗೆ ಮಾತನಾಡುವುದನ್ನೇ ಬಿಟ್ಟಿದ್ದಾರಂತೆ.
Published On - 2:56 pm, Mon, 2 May 22