Viral: ಉರಿ ಬಿಸಿಲಿನ ನಡುವೆ ಹೂ ಮಾರುತ್ತಿರುವವರಿಗೆ ನೀರನ್ನು ವಿತರಿಸಿದ ಬಾಲಕ; ನೆಟ್ಟಿಗರ ಮನಗೆದ್ದ ವಿಡಿಯೋ ಇಲ್ಲಿದೆ

Viral Video: ಕೊರೊನಾ ಕಾಲಘಟ್ಟದ ನಂತರ ಸಣ್ಣ ವ್ಯಾಪಾರಸ್ಥರಿಗೆ ಸಮಸ್ಯೆ ಹೆಚ್ಚಾಗಿದೆ. ಈಗಂತೂ ಅದಕ್ಕೆ ಬಿಸಿಲಿನ ಝಳವೂ ಜತೆಯಾಗಿದೆ. ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಮಾಡಲು ಸಾಧ್ಯವಾಗದೇ ಕಷ್ಟಪಡುತ್ತಿದ್ದಾರೆ. ಅಂತಹ ವ್ಯಾಪಾರಸ್ಥರಿಗೆ ಪುಟ್ಟ ಬಾಲಕನೊಬ್ಬ ಸಹಾಯ ಮಾಡುವ ವಿಡಿಯೋವೊಂದು ವೈರಲ್ ಆಗಿದೆ. ಇದನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಹಂಚಿಕೊಂಡಿದ್ದಾರೆ.

Viral: ಉರಿ ಬಿಸಿಲಿನ ನಡುವೆ ಹೂ ಮಾರುತ್ತಿರುವವರಿಗೆ ನೀರನ್ನು ವಿತರಿಸಿದ ಬಾಲಕ; ನೆಟ್ಟಿಗರ ಮನಗೆದ್ದ ವಿಡಿಯೋ ಇಲ್ಲಿದೆ
ವಿಡಿಯೋದಿಂದ ಸೆರೆಹಿಡಿಯಲಾದ ಚಿತ್ರ
Follow us
TV9 Web
| Updated By: shivaprasad.hs

Updated on: May 01, 2022 | 12:32 PM

ಪರೋಪಕಾರದ ಗುಣಗಳು ಈಗಿನ ಕಾಲದಲ್ಲಿ ತುಸು ತಗ್ಗಿದೆ ಎಂದೇ ಹೇಳಬೇಕು. ಇದಕ್ಕೆ ಕಾರಣಗಳೇನೇ ಇರಬಹುದು. ಇರಲಿ, ಆದರೆ ಮತ್ತೊಬ್ಬರಿಗೆ ನಿಸ್ವಾರ್ಥ ರೀತಿಯಿಂದ ಸಹಾಯ ಮಾಡುವುದು ಅತ್ಯಂತ ದೊಡ್ಡ ಮಾನವ ಗುಣಗಳಲ್ಲಿ ಒಂದು. ಹೀಗಾಗಿಯೇ ಕಷ್ಟದಿಂದ ಬಳಲುತ್ತಿರುವವರಿಗೆ ಸಹಾಯ ಮಾಡಿದ ದಾನಿಗಳ ವಿಚಾರಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತವೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಹಲವರಿಗೆ ಸಹಾಯ ಮಾಡಿದ ಪುಟಾಣಿ ಬಾಲಕನೊಬ್ಬನ ವಿಡಿಯೋ ಸದ್ಯ ಸಖತ್ ಸುದ್ದಿಯಾಗುತ್ತಿದೆ. ಪ್ರಸ್ತುತ ಜನರು ಹಲವು ಘಟನೆಗಳಿಂದ ತತ್ತರಿಸಿದ್ದಾರೆ. ಕೊರೊನಾ ಕಾಲಘಟ್ಟದ ನಂತರ ಸಣ್ಣ ವ್ಯಾಪಾರಸ್ಥರಿಗೆ ಸಮಸ್ಯೆ ಹೆಚ್ಚಾಗಿದೆ. ಈಗಂತೂ ಅದಕ್ಕೆ ಬಿಸಿಲಿನ ಝಳವೂ ಜತೆಯಾಗಿದೆ. ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಮಾಡಲು ಸಾಧ್ಯವಾಗದೇ ಕಷ್ಟಪಡುತ್ತಿದ್ದಾರೆ. ಅಂತಹ ವ್ಯಾಪಾರಸ್ಥರಿಗೆ ಪುಟ್ಟ ಬಾಲಕನೊಬ್ಬ ಸಹಾಯ ಮಾಡುವ ವಿಡಿಯೋವೊಂದು ವೈರಲ್ (Viral Video) ಆಗಿದೆ. ಇದನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಹಂಚಿಕೊಂಡಿದ್ದಾರೆ.

ಸ್ಪೋರ್ಟ್ಸ್ ದಿರಿಸಿನಲ್ಲಿರುವ ಈ ಪುಟ್ಟ ಬಾಲಕನ ಹೆಸರು ಅಯಾನ್. ರಸ್ತೆಬದಿಯಲ್ಲಿ, ಬಿಸಿಲಿನ ನಡುವೆಯೇ ಕುಳಿತು ಹೂ ವ್ಯಾಪಾರ ಮಾಡುತ್ತಿರುವವರಿಗೆ ನೀರಿನ ಬಾಟಲ್​ಗಳನ್ನು ಆತ ನೀಡಿದ್ದಾನೆ. ಒಂದು ದೊಡ್ಡ ಪ್ಲಾಸ್ಟಿಕ್ ಬ್ಯಾಗ್​ನಲ್ಲಿ ನೀರಿನ ಬಾಟಲ್​ಗಳನ್ನು ತರುವ ಆತ ಅಗತ್ಯವಿರುವವರಿಗೆ ಹಂಚುತ್ತಾನೆ. ವೃದ್ಧೆಯೋರ್ವರು ಪುಟಾಣಿ ಬಾಲಕನಿಗೆ ಆಶೀರ್ವಾದ ಮಾಡುತ್ತಿರುವ ದೃಶ್ಯವೂ ಸೆರೆಯಾಗಿದೆ.

ಮಾನವೀಯ ಗುಣವನ್ನು ತಿಳಿಸಿಕೊಡುವ ಈ ಘಟನೆಯ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವೀಟ್ ಮೂಲಕ ವಿಡಿಯೋ ಹಂಚಿಕೊಂಡಿದ್ದು, ನೀವು ಮತ್ತೋರ್ವರಿಗೆ ಮಾಡುವ ಸಣ್ಣ ಸಹಾಯವೂ ಅವರ ದಿನವನ್ನು ವಿಶೇಷವಾಗಿಸುತ್ತದೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಸುಮಾರು 46,000ಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ವೈರಲ್ ಆಗಿದೆ.

ಅವನೀಶ್ ಶರಣ್ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:

ಅವನೀಶ್ ಅವರು ಟ್ವಿಟರ್​ನಲ್ಲಿ ಸಕ್ರಿಯರಾಗಿದ್ದಾರೆ. ಯಾವುದಾದರೂ ಒಂದು ವಿಚಾರದ ಬಗ್ಗೆ ಅವರು ಬರೆಯುತ್ತಿರುತ್ತಾರೆ. ಅಥವಾ ವಿಡಿಯೋ, ಫೋಟೋಗಳ ಮೂಲಕ ಜನರಿಗೆ ಅರಿವು ಮೂಡಿಸುತ್ತಿರುತ್ತಾರೆ. ಇತ್ತೀಚೆಗೆ ನೃತ್ಯದ ಬಗ್ಗೆ ಅವರು ಒಂದು ಸಣ್ಣ ತುಣುಕನ್ನು ಹಂಚಿಕೊಂಡಿದ್ದರು. ಅದರಲ್ಲಿ ಪುಟಾಣಿ ಬಾಲಕಿಯೊಬ್ಬಳು ಯಾರಿಗೂ ಕೇರ್ ಮಾಡದೇ ತನ್ನ ಪಾಡಿಗೆ ತಾನು ಹೆಜ್ಜೆ ಹಾಕುತ್ತಾ ಇರುವ ದೃಶ್ಯವಿತ್ತು. ಯಾರೋ ನೋಡುತ್ತಿಲ್ಲ ಎನ್ನುವಂತೆ ನೃತ್ಯ ಮಾಡಿ ಎಂದು ಅವರು ಶೀರ್ಷಿಕೆ ನೀಡಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು.

ಇನ್ನೂ ಹೆಚ್ಚಿನ ಕುತೂಹಲಕರ ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Viral Optical Illusion: ಬುದ್ಧಿಗೆ ಗುದ್ದು ನೀಡುವ ಈ ಚಿತ್ರದಲ್ಲಿ ಕರಡಿಯೊಂದು ಅಡಗಿದೆ; ನೀವು ಕಂಡುಹಿಡಿಯಬಲ್ಲಿರಾ? 

Radhika Pandit: ಪತ್ನಿ ರಾಧಿಕಾ ಪಂಡಿತ್ ಕೆನ್ನೆಗೆ ಮುತ್ತಿಟ್ಟ ಯಶ್; ಫೋಟೋ ವೈರಲ್

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್