Viral Video: ವಿದ್ಯುತ್ ಇಲ್ಲದಿದ್ದರೂ ಫ್ಯಾನ್ ತಿರುಗುವಂತೆ ಮಾಡೋದು ಹೇಗೆ? ಮಜವಾದ ವಿಡಿಯೋ ಇಲ್ಲಿದೆ

Power Crisis | Trending Video: ಮಧ್ಯಮ ವರ್ಗದವರಿಗೆ ಕೂಲರ್, ಎಸಿಯ ಸೌಲಭ್ಯ ಇರುವುದಿಲ್ಲ. ಜತೆಗೆ ನಿರಂತರ ವಿದ್ಯುತ್ ಪೂರೈಸಲು ಸಹಾಯ ಮಾಡುವ ಯುಪಿಎಸ್​ಗಳೂ ಇರುವುದಿಲ್ಲ. ಹೀಗಾಗಿ ಅವರು ನಂಬಿರುವುದು ವಿದ್ಯುತ್ ಹಾಗೂ ಫ್ಯಾನ್. ಒಂದರೆಕ್ಷಣ ಕರೆಂಟ್ ಹೋದಾಗ ಮನೆಯೊಳಗೆ ಕೂರುವುದೇ ಕಷ್ಟ ಎನಿಸುತ್ತದೆ. ಒಬ್ಬ ವ್ಯಕ್ತಿಗೆ ಅಂಥದ್ದೇ ಫಜೀತಿಯಾಗಿದೆ.

Viral Video: ವಿದ್ಯುತ್ ಇಲ್ಲದಿದ್ದರೂ ಫ್ಯಾನ್ ತಿರುಗುವಂತೆ ಮಾಡೋದು ಹೇಗೆ? ಮಜವಾದ ವಿಡಿಯೋ ಇಲ್ಲಿದೆ
ಫ್ಯಾನನ್ನು ತಾನೇ ತಿರುಗಿಸಿದ ವ್ಯಕ್ತಿ
Follow us
TV9 Web
| Updated By: shivaprasad.hs

Updated on: Apr 30, 2022 | 4:42 PM

ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ವೈರಲ್ (Viral Video) ಆಗುತ್ತಿರುತ್ತವೆ. ಭಾರತದಲ್ಲಿ ಸಾಮಾನ್ಯ ಜನರು ತಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ಕ್ರಿಯಾತ್ಮಕ ವಿಧಾನದ ಮೂಲಕ, ಜನರ ಮುಖದಲ್ಲಿ ನಗು ಮೂಡಿಸುತ್ತಲೇ ಹೇಳಲು ಪ್ರಯತ್ನಿಸುತ್ತಾರೆ. ಈಗ ಅದಕ್ಕೆ ತಂತ್ರಜ್ಞಾನವೂ ಜತೆಯಾಗಿದೆ. ಅರ್ಥಾತ್ ಜನರು ವಿಡಿಯೋ, ಫೋಟೋಗಳ ಮೂಲಕ ತಮಗೆ ಅನಿಸಿದ್ದನ್ನು ಅಭಿವ್ಯಕ್ತಿಸುತ್ತಾರೆ. ಪ್ರಸ್ತುತ ದೇಶದಲ್ಲಿ ಬಿಸಿಲಿನ ತಾಪ ಜೋರಾಗಿದೆ. ಹಲವೆಡೆ ಬಿಸಿ ಗಾಳಿ ಬೀಸುತ್ತಿದ್ದು, ಜನರು ತತ್ತರಿಸಿದ್ದಾರೆ. ಸಾಮಾನ್ಯವಾಗಿ ತಂಪಿರುವ ಪ್ರದೇಶಗಳೂ ಈಗ ಬಿಸಿಲಿನ ಝಳಕ್ಕೆ ನಲುಗುತ್ತಿವೆ. ಇದಕ್ಕೆ ವಿದ್ಯುತ್ ಕೊರತೆಯ ಸಮಸ್ಯೆಯೂ ಜತೆಯಾಗಿದೆ. ಹೀಗಾಗಿ ಜನರ ಬದುಕು ಹೈರಾಣಾಗಿದೆ. ಇದೀಗ ಈ ಎಲ್ಲವನ್ನೂ ಬಿಂಬಿಸುವ ತಮಾಷೆಯ ಒಂದು ವಿಡಿಯೋ ನೆಟ್ಟಿಗರ ಮುಖದಲ್ಲಿ ನಗು ಮೂಡಿಸಿದೆ.

ಮಧ್ಯಮ ವರ್ಗದವರಿಗೆ ಕೂಲರ್, ಎಸಿಯ ಸೌಲಭ್ಯ ಇರುವುದಿಲ್ಲ. ಜತೆಗೆ ನಿರಂತರ ವಿದ್ಯುತ್ ಪೂರೈಸಲು ಸಹಾಯ ಮಾಡುವ ಯುಪಿಎಸ್​ಗಳೂ ಇರುವುದಿಲ್ಲ. ಹೀಗಾಗಿ ಅವರು ನಂಬಿರುವುದು ವಿದ್ಯುತ್ ಹಾಗೂ ಫ್ಯಾನ್. ಒಂದರೆಕ್ಷಣ ಕರೆಂಟ್ ಹೋದಾಗ ಮನೆಯೊಳಗೆ ಕೂರುವುದೇ ಕಷ್ಟ ಎನಿಸುತ್ತದೆ. ಒಬ್ಬ ವ್ಯಕ್ತಿಗೆ ಅಂಥದ್ದೇ ಫಜೀತಿಯಾಗಿದೆ.

ವಿದ್ಯುತ್ ಇಲ್ಲ, ಫ್ಯಾನ್ ಇಲ್ಲ, ಬಿಸಿಲಿನ ಧಗೆ, ಇದರಿಂದ ಪಾರಾಗೋದು ಹೇಗೆ? ಅದನ್ನೇ ಒಂದು ಮಜವಾದ ವಿಡಿಯೋ ಮಾಡಿ ಹರಿಬಿಡಲಾಗಿದೆ. ಅದರಲ್ಲಿ ಯುವಕನೊಬ್ಬ ಫ್ಯಾನ್​ಅನ್ನು ತಾನೇ ತಿರುಗಿಸಿ, ಅದು ತಿರುಗುವ ಕೆಲವೇ ಕ್ಷಣಗಳ ಕಾಲ ಹಾಸಿಗೆಯಲ್ಲಿ ಮಲಗುತ್ತಾನೆ. ನಂತರ ಅದನ್ನೇ ಮುಂದುವರೆಸುತ್ತಾನೆ. ಹೀಗೆ ಸೆಖೆ, ವಿದ್ಯುತ್ ಸಮಸ್ಯೆ ಎಲ್ಲವನ್ನೂ ಒಣದೇ ವಿಡಿಯೋದಲ್ಲಿ ಮಜವಾಗಿ ತೋರಿಸಿಕೊಟ್ಟಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ:

ಐಎಎಸ್ ಅಧಿಕಾರಿ ಅವನೀಶ್ ಶರಣ್ ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 5.1 ಲಕ್ಷ ಜನರು ವೀಕ್ಷಿಸಿದ್ದು, 16,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಈ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ವಿಡಿಯೋ ನೋಡಿದ ನಿಮಗೇನನ್ನಿಸಿತು?

ಇದನ್ನೂ ಓದಿ: Radhika Pandit: ನಾಚಿ ನೀರಾದ ರಾಧಿಕಾ ಪಂಡಿತ್; ವೈರಲ್ ಆಯ್ತು ಫೋಟೋ

Shocking Video: ನಡುರಸ್ತೆಯಲ್ಲೇ ಹೆಂಡತಿ, ಮಗಳನ್ನು ಕೊಂದು, ತಾನೂ ಶೂಟ್ ಮಾಡಿಕೊಂಡ ವ್ಯಕ್ತಿ; ಶಾಕಿಂಗ್ ವಿಡಿಯೋ ವೈರಲ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ