ಸಾಮಾಜಿಕ ಮಾಧ್ಯಮವು ವಿಸ್ಮಯವಾದ ವಿಡಿಯೋಗಳಿಗೆ ಹಾಟ್ಸ್ಪಾಟ್ ಆಗಿವೆ. ನೆಟ್ಟಿಗರನ್ನು ಅಚ್ಚರಿಗೊಳಿಸುವ ಇಂತಹ ವಿಡಿಯೋಗಳು ಆಗಾಗ್ಗೆ ವೈರಲ್ ಪಡೆಯುತ್ತಲೇ ಇರುತ್ತದೆ. ಈ ಹಿಂದೆ ಹದ್ದು ಒಂದು ಕಾಗೆಯ ಮೇಲೆ ದಾಳಿ ನಡೆಸಿದ ವೈರಲ್ ಆಗಿತ್ತು. ಇದೀಗ ತನಗಿಂತಲೂ ದೊಡ್ಡ ಗಾತ್ರವನ್ನು ಹೊಂದಿರುವ ಮೇಕೆಯೊಂದರ ಮೇಲೆ ಭೀಕರವಾಗಿ ದಾಳಿ ನಡೆಸಿದ ವಿಡಿಯೋ ವೈರಲ್ ಆಗುತ್ತಿದೆ. ಆಕಾಶದಿಂದ ಹಾರಿಕೊಂಡು ಬಂದ ಹದ್ದು ಮೇಕೆಯ ಮೇಲೆ ದಾಳಿ ನಡೆಸಿ ಬೆನ್ನನ್ನು ತನ್ನ ಕೈಗಳಿಂದ ಬಲವಾಗಿ ಹಿಡಿದುಕೊಂಡಿದೆ. ಹದ್ದಿನ ದಾಳಿಯಿಂದ ತಪ್ಪಿಸಿಕೊಳ್ಳಲು ಮೇಕೆ ಬೆಟ್ಟದ ಮೇಲಿಂದ ಕೆಳಗೆ ಓಡಿದರೂ, ಹತ್ತಾರು ಬಾರಿ ಪಲ್ಟಿ ಹೊಡೆದರೂ, ಬಂಡೆಗಲ್ಲಿಗೆ ಹೊಡೆದರೂ ಹದ್ದಿನ ಹಿಡಿತವನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಆದರೆ ಒಂದಷ್ಟು ದೂರದಲ್ಲಿ ಹೊಡೆದ ಪಲ್ಟಿಯು ಹದ್ದಿನ ಬಿಗಿಯಾದ ಹಿಡಿತವನ್ನು ತಪ್ಪಿತು. ಕ್ಷಣಾರ್ಧದಲ್ಲೇ ದಾಳಿಗೊಳಗಾದ ಮೇಕೆ ಓಡಿಹೋಗುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ಈ ಮೇಕೆಯನ್ನ ರಕ್ಷಿಸಲು ಮತ್ತೊಂದು ಮೇಕೆಯೂ ಅದರ ಹಿಂದೆ ಓಡುವುದನ್ನು ವಿಡಿಯೋದಲ್ಲಿ ಕಾಣಬಹುದು.
57 ಸೆಕೆಂಡ್‌ಗಳ ವೀಡಿಯೊವನ್ನು ‘Damnthatsinteresting’ ಸಬ್-ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಸುಮಾರು 7,000 ಅಪ್‌ವೋಟ್‌ಗಳನ್ನು ಪಡೆದುಕೊಂಡಿದೆ. ವೀಡಿಯೊವನ್ನು ವೀಕ್ಷಿಸಿದ ನಂತರ ಬಳಕೆದಾರರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:47 am, Sat, 20 August 22