ಇತ್ತೀಚೆಗೆ ಗಂಡ-ಹೆಂಡತಿಯ ಸಂಬಂಧಗಳು ಸಣ್ಣ ಪುಟ್ಟ ಕಾರಣಗಳಿಂದಾಗಿ ಅಂತ್ಯಗೊಳ್ಳುತ್ತವೆ, ಜೀವನಪೂರ್ತಿ ಜತೆಗಿರುತ್ತೇವೆ ಎಂದು ಎಲ್ಲರಂತೆಯೇ ಪ್ರಮಾಣ ಮಾಡಿ ಸಪ್ತಪದಿ ತುಳಿದಿದ್ದರೂ, ಯಾವುದ್ಯಾವುದೋ ಕಾರಣಗಳಿಂದಾಗಿ ಇಬ್ಬರೂ ನೀಡಿದ್ದ ಮಾತನ್ನು ಮರೆತೇಬಿಡುವ ಈ ಹೊತ್ತಿನಲ್ಲಿ ವೃದ್ಧರೊಬ್ಬರು ತಮ್ಮೊಂದಿಗೆ ಇಲ್ಲದಿದ್ದರೂ ಮೃತ ಪತ್ನಿಯ ಫೋಟೊಗೆ ಜ್ಯೂಸ್ ಕುಡಿಸಿ ಬಳಿಕ ತಾವು ಕುಡಿಯುವ ವಿಡಿಯೋ ನೋಡಿ ಮನತುಂಬಿ ಬಂತು.
ಸಾಮಾಜಿಕ ಜಾಲತಾಣಗಳ ಹಲವು ವೇದಿಕೆಗಳಲ್ಲಿ ವಿಡಿಯೋ ಶೇರ್ ಆಗುತ್ತಿದೆ. ಗುರ್ಪಿಂದರ್ ಸಂಧು ಎಂಬ ಬಳಕೆದಾರರು ಈ ವೀಡಿಯೊವನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ವೃದ್ಧರೊಬ್ಬರು ರಸ್ತೆ ಬದಿಯ ಅಂಗಡಿಯಿಂದ ಜ್ಯೂಸ್ ಸೇವಿಸುತ್ತಿರುವುದನ್ನು ಕಾಣಬಹುದು.
ವೀಡಿಯೊದಲ್ಲಿ, ಬೈಸಿಕಲ್ ಮೇಲೆ ಕುಳಿತಿರುವ ವ್ಯಕ್ತಿ ತನ್ನ ದಿವಂಗತ ಹೆಂಡತಿಯ ಚಿತ್ರಕ್ಕೆ ಸಿರಪ್ ನೀಡುತ್ತಾನೆ. ಅದರ ನಂತರ ಅವನು ಶರಬತ್ತು ಕುಡಿಯುತ್ತಾನೆ. ಇದನ್ನು ನೋಡಿ ಬಳಕೆದಾರರ ಹೃದಯ ಕರಗಿದೆ.ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ಮತ್ತಷ್ಟು ಓದಿ: Viral video: 6 ತಿಂಗಳ ಮುದ್ದಾದ ಫಿಟ್ನೆಸ್ ಗುರು ನೋಡಿ; ಪುಟ್ಟ ದೇಹ ದೊಡ್ಡ ಶಕ್ತಿ!
ಈ ಸುದ್ದಿಯನ್ನು ಬರೆಯುವ ಸಮಯದವರೆಗೆ, ಸಾಮಾಜಿಕ ಮಾಧ್ಯಮದಲ್ಲಿ 11 ಲಕ್ಷದ 57 ಸಾವಿರಕ್ಕೂ ಹೆಚ್ಚು ಬಳಕೆದಾರರು ಇದನ್ನು ಲೈಕ್ ಮಾಡಿದ್ದಾರೆ ಮತ್ತು 16 ದಶಲಕ್ಷಕ್ಕೂ ಹೆಚ್ಚು, ಸುಮಾರು ಒಂದು ಕೋಟಿ 60 ಲಕ್ಷ ಬಳಕೆದಾರರು ಇದನ್ನು ವೀಕ್ಷಿಸಿದ್ದಾರೆ. ವೀಡಿಯೊವನ್ನು ನೋಡಿದ ಬಳಕೆದಾರರು ಇದನ್ನು ನಿಜವಾದ ಪ್ರೀತಿ ಎಂದು ಕರೆಯುತ್ತಿದ್ದಾರೆ. ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ, ಯಾರಿಗೂ ಈ ಪ್ರೀತಿಯನ್ನು ವರ್ಣಿಸಲು ಪದೇಗಳೇ ಇಲ್ಲ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ