2000 ವರ್ಷಗಳ ಹಿಂದಿನ ಮಮ್ಮಿ ದೇಹ ನೋಡಿ ಅಚ್ಚರಿಗೊಂಡ ತಜ್ಞರು; ದೇಹದೊಳಗೆ 100 ಕಲ್ಲಂಗಡಿ ಬೀಜಗಳು ಪತ್ತೆ!

1971 ರಲ್ಲಿ ಸಿಕ್ಕ 2000 ವರ್ಷಗಳ ಹಿಂದಿನ ಮಮ್ಮಿ, ಲೇಡಿ ಆಫ್ ಡೈ ರಕ್ಷಿತ ಅವಶೇಷಗಳಲ್ಲಿ ಆಕೆಯ ಎಲ್ಲ ಅಂಗಾಂಗಗಳು ಸುರಕ್ಷಿತವಾಗಿ ಕೆಲವು ದಿನಗಳ ಹಿಂದೆ ಸತ್ತಿರುವ ಶವದ ರೀತಿಯಲ್ಲಿ ಸಿಕ್ಕಿತ್ತು.

2000 ವರ್ಷಗಳ ಹಿಂದಿನ ಮಮ್ಮಿ ದೇಹ ನೋಡಿ ಅಚ್ಚರಿಗೊಂಡ ತಜ್ಞರು; ದೇಹದೊಳಗೆ 100 ಕಲ್ಲಂಗಡಿ ಬೀಜಗಳು ಪತ್ತೆ!
ಲೇಡಿ ಆಫ್ ಡೈ
Follow us
ನಯನಾ ಎಸ್​ಪಿ
|

Updated on: May 28, 2023 | 5:10 PM

ಪುರಾತನ ಮುಮ್ಮಿಗಳು (Ancient Mummy) (ರಕ್ಷಿತ ಶವಗಳು) ಎಂದಾಕ್ಷಣ ಒಣಗಿದ ದೇಹಗಳ ಚಿತ್ರಗಳನ್ನು ನೀವು ನೋಡಿರುತ್ತೀರಿ ಅಥವಾ ಊಹಿಸುತ್ತೀರಿ ಆದರೆ ಇಲ್ಲೊಂದು ಯಾರು ಊಹಿಸದ ಘಟನೆಯೊಂದು ನಡೆದಿದೆ. 1971 ರಲ್ಲಿ ಸಿಕ್ಕ 2000 ವರ್ಷಗಳ ಹಿಂದಿನ ಮಮ್ಮಿ (200 years old Mummy) , ಲೇಡಿ ಆಫ್ ಡೈ (Lay of Dai) ರಕ್ಷಿತ ಅವಶೇಷಗಳಲ್ಲಿ ಆಕೆಯ ಎಲ್ಲ ಅಂಗಾಂಗಗಳು ಸುರಕ್ಷಿತವಾಗಿ ಕೆಲವು ದಿನಗಳ ಹಿಂದೆ ಸತ್ತಿರುವ ಶವದ ರೀತಿಯಲ್ಲಿ ಸಿಕ್ಕಿತ್ತು.

ಕ್ಸಿನ್ ಝುಯಿ ಎಂದು ಕರೆಯಲ್ಪಡುವ ಲೇಡಿ ಆಫ್ ಡೈ ಕ್ರಿಸ್ತ ಪೂರ್ವ 178 ಮತ್ತು 145 ಯ ನಡುವೆ ನಿಧನರಾದರು, ಮತ್ತು 1971 ರಲ್ಲಿ ಅವರ ಸಮಾಧಿಯ ಆಕಸ್ಮಿಕ ಆವಿಷ್ಕಾರವು ಇದ್ದ ಸ್ಥಿತಿಯನ್ನು ಕಂಡು ರೋಗಶಾಸ್ತ್ರಜ್ಞರು ಬೆರಗಾದರು. ಲೇಡಿ ಆಫ್ ಡೈ ಸಮಾಧಿಯಲ್ಲಿ ಸಿಕ್ಕ ಕಲಾಕೃತಿಗಳು ಅವಳ ಜೀವಿತಾವಧಿಯಲ್ಲಿ ಅವಳ ಸಂಪತ್ತು ಮತ್ತು ಸ್ಥಾನಮಾನಕ್ಕೆ ಸಾಕ್ಷಿಯಾಗಿದೆ. ಅವಳ ಆರ್ದ್ರ ಚರ್ಮ, ಅಖಂಡ ರೆಪ್ಪೆಗೂದಲುಗಳು ಮತ್ತು ಸಂರಕ್ಷಿಸಲ್ಪಟ್ಟ ರಕ್ತವು ನುರಿತ ಎಂಬಾಮರ್‌ಗಳ ಪರಿಣತಿಯನ್ನು ಸೂಚಿಸಿತು.

ಪರೀಕ್ಷೆಯ ಸಮಯದಲ್ಲಿ, ತಜ್ಞರು ಕಂಡ ಆಶ್ಚರ್ಯಕರ ಸಂಗತಿ:

ಪರೀಕ್ಷೆಯ ಸಮಯದಲ್ಲಿ ರೋಗಶಾಸ್ತ್ರಜ್ಞರು ಲೇಡಿ ಆಫ್ ಡೈ ದೇಹದಲ್ಲಿ 100 ಕ್ಕೂ ಹೆಚ್ಚು ಜೀರ್ಣವಾಗದ ಕಲ್ಲಂಗಡಿ ಬೀಜಗಳು ಅವಳ ಜಠರಗರುಳಿನ ವ್ಯವಸ್ಥೆಯಲ್ಲಿ ಕಂಡುಬಂದಿದೆ. ಬೀಜಗಳು ಅನ್ನನಾಳದಿಂದ ಕರುಳಿನವರೆಗೆ ತುಂಬಿತ್ತು. ಇದು ಆಕೆಯ ಮರಣದ ಸ್ವಲ್ಪ ಮೊದಲು ಕಲ್ಲಂಗಡಿ ಸೇವಿಸಿರುವುದನ್ನು ಸೂಚಿಸುತ್ತದೆ ಎಂದು ವರದಿಗಳು ತಿಳಿಸಿವೆ.

ಐಷಾರಾಮಿ ರೇಷ್ಮೆ ಮತ್ತು ಲಿನಿನ್ ವಸ್ತ್ರಗಳ 18 ಪದರಗಳಲ್ಲಿ ಅವಳ ದೇಹವನ್ನು ಸುತ್ತುವರೆದಿರುವ ಕಾರಣ ಆಕೆಯ ದೇಹ 2000 ವರ್ಷಗಳ ನಂತರವೂ ಸುರಕ್ಷಿತವಾಗಿರಲು ಕಾರಣವಾಗಿರಬಹುದು ಎಂದು ತಜ್ಞರು ಭಾವಿಸಿದ್ದಾರೆ. ಇದಲ್ಲದೆ, ಆಕೆಯ ಶವಪೆಟ್ಟಿಗೆಯು ವಿಚಿತ್ರವಾದ ಸ್ಪಷ್ಟ ದ್ರವವನ್ನು ಹೊಂದಿದ್ದು ಅದು ಆಮ್ಲಜನಕಕ್ಕೆ ಒಡ್ಡಿಕೊಂಡಾಗ ಕಂದು ಬಣ್ಣಕ್ಕೆ ತಿರುಗಿತು.

ಇದನ್ನೂ ಓದಿ: ಬೆಂಕಿಗೆ ಸಿಲುಕಿದ ಕುಟುಂಬವನ್ನು ಕಾಪಾಡಿದ ನಿರಾಶ್ರಿತ; ಧೈರ್ಯ ಮತ್ತು ನಿಸ್ವಾರ್ಥತೆಯ ಪ್ರತಿರೂಪ!

ದ್ರವದ ಸ್ವರೂಪದ ಬಗ್ಗೆ ಚರ್ಚೆಗಳು ಮುಂದುವರಿದಾಗ, ಕೆಲವರು ಇದನ್ನು ಸಾಂಪ್ರದಾಯಿಕ ಗಿಡಮೂಲಿಕೆ ಚಿಕಿತ್ಸೆಯಾಗಿ ದೇಹದ ಸಂರಕ್ಷಣೆಗೆ ಸಹಾಯ ಮಾಡಿದೆ ಎಂದು ತಿಳಿಸಿದರೆ, ಕೆಲವರು ಇದು ಆಕೆಯ ದೇಹದ ದ್ರವ ಎಂದು ಹೇಳಿದರು. ಗಮನಾರ್ಹವಾಗಿ, ಆಕೆಯ ಶ್ರೀಮಂತಿಕೆಯ ಹೊರತಾಗಿಯೂ, ಆಕೆಯ ಆರೋಗ್ಯವು ಕಳಪೆಯಾಗಿತ್ತು, ಇದು ಮಾರಣಾಂತಿಕ ಹೃದಯಾಘಾತವನ್ನು ಸೂಚಿಸುವ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಸ್ಪಷ್ಟವಾಗಿದೆ.

ಸುಮಾರು 50 ವರ್ಷಗಳ ಕಾಲ ಬದುಕಿದ್ದಾರೆಂದು ನಂಬಲಾಗಿದೆ, ಲೇಡಿ ಆಫ್ ಡೈ ಅವರ ಅಸಾಧಾರಣ ಸ್ಥಿತಿಯು ಪ್ರಾಚೀನ ಸಮಾಧಿ ಅಭ್ಯಾಸಗಳು ಮತ್ತು ಸಮಯದ ಆರೋಗ್ಯ ಸ್ಥಿತಿಗಳ ಬಗ್ಗೆ ಮೌಲ್ಯಯುತವಾದ ಒಳನೋಟಗಳನ್ನು ಒದಗಿಸುತ್ತದೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ