Viral Video: ಟೋಲ್​​ ಟ್ಯಾಕ್ಸ್​​ ಕಲೆಕ್ಟರ್​​​​ ಗಜರಾಜ, ಇಲ್ಲಿದೆ ನೋಡಿ ವೈರಲ್​​ ವಿಡಿಯೋ

ಕಬ್ಬು ತಿನ್ನಲು ಲಾರಿಯೊಂದನ್ನು ಅಡ್ಡಗಟ್ಟಿದ ಆನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ವಿಡಿಯೋ ಇಲ್ಲಿದೆ ನೋಡಿ.

Viral Video: ಟೋಲ್​​ ಟ್ಯಾಕ್ಸ್​​ ಕಲೆಕ್ಟರ್​​​​ ಗಜರಾಜ, ಇಲ್ಲಿದೆ ನೋಡಿ ವೈರಲ್​​ ವಿಡಿಯೋ
ಕಬ್ಬು ತಿನ್ನಲು ಲಾರಿಯೊಂದನ್ನು ಅಡ್ಡಗಟ್ಟಿದ ಆನೆ
Image Credit source: Twitter
Edited By:

Updated on: Mar 09, 2023 | 12:49 PM

ಕಬ್ಬು ತಿನ್ನಲು ಲಾರಿಯೊಂದನ್ನು ಅಡ್ಡಗಟ್ಟಿದ ಆನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ವಿಡಿಯೋ ಇಲ್ಲಿದೆ ನೋಡಿ. ಟೋಲ್​​​ ಟ್ಯಾಕ್ಸ್ ಕಲೆಕ್ಟರ್​​​ ಬರೀ ಕಬ್ಬು ತುಂಬಿರುವ ಲಾರಿಯನ್ನು ಮಾತ್ರ ಅಡ್ಡ ಗಟ್ಟಿ ಟೋಲ್​ ವಸೂಲಿ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುವ ಬೇರೆ ಯಾವುದೇ ಗಾಡಿಗಳಿಗೂ ತೊಂದರೆ ಇಲ್ಲ. ಹಾಗಿದ್ರೇ ಯಾರಪ್ಪ ಇಂತಹ ಟೋಲ್​​​ ಟ್ಯಾಕ್ಸ್ ಕಲೆಕ್ಟರ್ ಅಂತಾ ನೀವು ಅನ್ಕೊತ್ತೀದ್ದೀರಾ? ಮುದ್ದಾದ ಆನೆಯೊಂದರ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಬ್ಬು ತುಂಬಿಕೊಂಡು ಬಂದ ಲಾರಿಯನ್ನು ದೂರದಿಂದಲೇ ನೋಡಿದ ಆನೆಯೊಂದು ರಸ್ತೆಗೆ ಬಂದು ಲಾರಿಯನ್ನು ನಿಲ್ಲಿಸಿ ತನಗೆ ಬೇಕಾದಷ್ಟು ಕಬ್ಬನ್ನು ಸೊಂಡಿಲಿನಿಂದ ತೆಗೆದು, ತನ್ನ ಪಾಡಿಗೆ ರಸ್ತೆ ಬದಿಗೆ ಬಂದು ತಿನ್ನುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಈ ವಿಡಿಯೋವನ್ನು ಡಾ ಅಜಯಿತಾ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇತ್ತೀಚೆಗಷ್ಟೇ ಹಂಚಿಕೊಂಡಿದ್ದು, ಜೊತೆಗೆ ಟೋಲ್​​ ಟ್ಯಾಕ್ಸ್​​ ಕಲೆಕ್ಟರ್ ಅನ್ನು ಒಮ್ಮೆ ನೋಡಿ ಎಂದು ವಿಡಿಯೋಗೆ ಕ್ಯಾಪ್ಶನ್‌ ಬರೆದ್ದಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೀಕ್ಷಣೆ ಗಳಿಸಿದ್ದು, ಸಾಕಷ್ಟು ತಮಾಷೆಯ ಕಾಮೆಂಟ್​​ಗಳನ್ನು ಕೂಡ ಕಾಣಬಹುದು.

ಇದನ್ನೂ ಓದಿ: ಟಿಶ್ಯೂ ಪೇಪರ್​​​ನಿಂದ ಈ ರೀತಿ ಗುಲಾಬಿ ತಯಾರಿಸಿ, ಇಲ್ಲಿದೆ ನೋಡಿ ವೈರಲ್​​ ವಿಡಿಯೋ

ಮಾರ್ಚ್​ 6 ರಂದು ಪೋಸ್ಟ್​ ಮಾಡಲಾದ ಈ ವಿಡಿಯೋ ಇದೀಗಾಗಲೇ 2ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. 1000 ಕ್ಕೂ ಹೆಚ್ಚು ರಿಟ್ವೀಟ್‌ಗಳು ಮತ್ತು 6,000 ಕ್ಕೂ ಹೆಚ್ಚು ಲೈಕ್​ಗಳನ್ನು ಸಂಗ್ರಹಿಸಿದೆ. ವೀಡಿಯೊದ ನಿಖರವಾದ ಸ್ಥಳ ತಿಳಿದಿಲ್ಲವಾದರೂ, ಅಲ್ಲಿ ಹಾಕಲಾಗಿರುವ ಎಚ್ಚರಿಕೆ ಆನೆ ದಾಟುವ ಜಾಗ’ ಎಂಬ ಬೋರ್ಡ್​ನಿಂದ ಈ ಘಟನೆಯು ಥೈಲ್ಯಾಂಡ್‌ನಲ್ಲಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಮತ್ತಷ್ಟು ವೈರಲ್​​ ಸುದ್ದಿಗಳಿಗೆ ಇಲ್ಲಿ ಕ್ಲಿಕ್​ ಮಾಡಿ: 

Published On - 12:48 pm, Thu, 9 March 23

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us