ಸ್ನೇಹಿತನ ಮಗಳ ಅರಿಶಿಣ ಶಾಸ್ತ್ರದಲ್ಲಿ ಫುಲ್ ಡ್ಯಾನ್ಸ್, ನರ್ತಕಿ ಮೇಲೆ ಹಣ ತೂರಿದ ಕಾಂಗ್ರೆಸ್ ಮುಖಂಡನ ವಿಡಿಯೋ ವೈರಲ್
ನರ್ತಕಿ ಮೇಲೆ ಹಣ ತೂರಿದ್ದ ಕಾಂಗ್ರೆಸ್ ಮುಖಂಡನ ವಿಡಿಯೋ ಬೆಳಗಾಗುವಷ್ಟರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ಧಾರವಾಡ: ಕಾಂಗ್ರೆಸ್ ಮುಖಂಡರೊಬ್ಬರು(Congress Leader) ತಮ್ಮ ಸ್ನೇಹಿತನ ಮಗಳ ಮದುವೆಯ ಅರಿಶಿಣ ಕಾರ್ಯಕ್ರಮದಲ್ಲಿ ಡ್ಯಾನ್ಸರ್ (Dancer) ಮೇಲೆ ಹಣ ತೂರಿದ್ದು, ಇದೀಗ ಈ ವಿಡಿಯೋ ಸಖತ್ ವೈರಲ್(Video Viral) ಆಗಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿ(Vinay Kulkarni) ಪರಮಾಪ್ತರಾಗಿರುವ ಧಾರವಾಡದ(Dharwad) ಕಾಂಗ್ರೆಸ್ ಮುಖಂಡ ಶಿವಶಂಕರ್ ಎನ್ನುವರು ನರ್ತಕಿ ಮೇಲೆ ಹಣ ತೂರಿದಿದ್ದಾರೆ. ಇದೀಗ ಬೆಳಗಾಗುವಷ್ಟರಲ್ಲಿ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪರ-ವಿರೋಧದ ಚರ್ಚೆಗಳು ಶುರುವಾಗಿವೆ.
ಶಿವಶಂಕರ ಹಂಪಣ್ಣವರ್ ನಿನ್ನೆ (ಮಾ.008) ತಮ್ಮ ಗೆಳಯನ ಪುತ್ರಿಯ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲೇ ನೃತ್ಯ ಕಾರ್ಯಕ್ರಮವೂ ನಡೆಯುತ್ತಿತ್ತು. ಈ ವೇಳೆ ಶಿವಶಂಕರ ಹಂಪಣ್ಣವರ್ ನೃತ್ಯಗಾರ್ತಿ ಮೇಲೆ ಹಣ ತೂರಿ ಕುಣಿದಿದ್ದಾರೆ. ಕೌಟುಂಬಿಕ ಕಾರ್ಯಕ್ರಮದಲ್ಲಿ ಹಣ ತೂರಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದ್ದು ವಿಡಿಯೋ ಮಾತ್ರ ರಾಷ್ಟ್ರಮಟ್ಟದಲ್ಲಿ ವೈರಲ್ ಆಗಿದೆ. ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ಗೆ ಒಂದು ರೀತಿಯಾಗಿ ಮುಜುಗರ ತಂದಿಟ್ಟಿದೆ.
ಡ್ಯಾನರ್ ಮೇಲೆ ಗರಿ ಗರಿ ನೋಟುಗಳನ್ನು ತೂರುತ್ತ ಆಕೆಯೊಂದಿಗೆ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿ ಟೀಕಿಸಿದ್ದು, ಇದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದೆ.
ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಇದು ನಾಚಿಕೆಗೇಡಿನ ಸಂಗತಿ. ಹುಡುಗಿಯೊಬ್ಬಳು ಹಣವನ್ನು ಎಸೆಯಲಾಗಿದೆ. ಇವರಿಗೆ ಹಣದ ಬೆಲೆ ಗೊತ್ತಿಲ್ಲ. ಇದು ಕಾಂಗ್ರೆಸ್ನ ಸಂಸ್ಕೃತಿ ಏನೆಂದು ತೋರಿಸುತ್ತದೆ. ಮತ್ತು ನಾವು ಅದನ್ನು ಹಲವಾರು ಬಾರಿ ನೋಡಿದ್ದೇವೆ. ನಾನು ಇದನ್ನು ಖಂಡಿಸುತ್ತೇನೆ. ಕಾಂಗ್ರೆಸ್ ಈ ಬಗ್ಗೆ ಗಮನಹರಿಸಬೇಕು ಎಂದಿದ್ದಾರೆ.
ಗ್ರಾಮದೇವತೆ ಹಬ್ಬದಲ್ಲಿ ಅಶ್ಲೀಲ ನೃತ್ಯ
ಇತ್ತೀಚೆಗಷ್ಟೇ ಮಂಡ್ಯದ ನಾಗಮಂಗಲ ತಾಲೂಕಿನ ತೋಳಸಿ ಕೊಬ್ಬರಿ ಗ್ರಾಮದೇವತೆ ಹಬ್ಬದಲ್ಲಿ ರಸಮಂಜನರಿ ಕಾರ್ಯಕ್ರಮದಲ್ಲಿ ಅಶ್ಲೀಲ ನೃತ್ಯ ಮಾಡಿರುವ ಘಟನೆ ನಡೆದಿತ್ತು. ಗ್ರಾಮದೇವತೆ ಹಬ್ಬದಲ್ಲಿ ರಸಮಂಜನರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಮಹಿಳಾ ನೃತ್ಯಗಾರರು ಅಶ್ಲೀಲವಾಗಿ ಡ್ಯಾನ್ಸ್ ಮಾಡಿದ್ದರು. ಡ್ಯಾನ್ಸರ್ ಬಾಲಕನೊಬ್ಬನನ್ನ ವೇದಿಕೆಗೆ ಕರೆದುಕೊಂಡು ಆತನಿಗೆ ಮುತ್ತಿಟ್ಟು ಅಸಭ್ಯವಾಗಿ ವರ್ತಿಸಿದ್ದಳು. ನೃತ್ಯದ ಬಗ್ಗೆ ಸಾರ್ವಜನಿಕರು ವಿರೋಧ ವ್ಯಕ್ತವಾಗಿತ್ತು. ಇನ್ನು ಇದೇ ಕಾರ್ಯಕ್ರಮದಲ್ಲಿ ನಾಗಮಂಗಲ ಶಾಸಕ ಸುರೇಶ್ ಗೌಡ ಹಾಗೂ ಮಾಜಿ ಶಾಸಕ ಚಲುವರಾಯಸ್ವಾಮಿ ಭಾಗಿಯಾಗಿದ್ದರು.
ಇನ್ನುಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:56 am, Thu, 9 March 23