AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿವೃತ್ತ ಲೆಫ್ಟಿನೆಂಟ್ ಜನರಲ್ ಎಸ್.ಸಿ. ಸರದೇಶಪಾಂಡೆ ನಿಧನ, ಅವರ ಇಚ್ಛೆಯಂತೆ ದೇಹ ದಾನ

ಭಾರತೀಯ ಸೇನೆಯ ಉಪ ಮಹಾದಂಡನಾಯಕರಾಗಿ ಸೇವೆ ಸಲ್ಲಿಸಿದ್ದ ಧಾರವಾಡ ಮೂಲದ ಸರದೇಶಪಾಂಡೆ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ನಿವೃತ್ತ ಲೆಫ್ಟಿನೆಂಟ್ ಜನರಲ್ ಎಸ್.ಸಿ. ಸರದೇಶಪಾಂಡೆ ನಿಧನ, ಅವರ ಇಚ್ಛೆಯಂತೆ ದೇಹ ದಾನ
ಎಸ್.ಸಿ. ಸರದೇಶಪಾಂಡೆ
ಆಯೇಷಾ ಬಾನು
|

Updated on:Mar 09, 2023 | 9:28 AM

Share

ಧಾರವಾಡ: ನಿವೃತ್ತ ಲೆಫ್ಟಿನೆಂಟ್ ಜನರಲ್ ಎಸ್.ಸಿ. ಸರದೇಶಪಾಂಡೆ(90) ಅವರು ಬೆಂಗಳೂರು ನಿವಾಸದಲ್ಲಿ‌ ನಿಧನರಾಗಿದ್ದಾರೆ. ಭಾರತೀಯ ಸೇನೆಯ ಉಪ ಮಹಾದಂಡನಾಯಕರಾಗಿ ಸೇವೆ ಸಲ್ಲಿಸಿದ್ದ ಧಾರವಾಡ ಮೂಲದ ಸರದೇಶಪಾಂಡೆ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಎಸ್.ಸಿ. ಸರದೇಶಪಾಂಡೆ ಅವರು ಭಾರತೀಯ ಸೇನೆಯಲ್ಲಿ 35 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿ ಬಳಿಕ ಧಾರವಾಡದಲ್ಲಿ ನೆಲೆಸಿದ್ದ ಸರದೇಶಪಾಂಡೆ ಅವರು ಇತ್ತೀಚೆಗೆ ಬೆಂಗಳೂರು ನಿವಾಸದಲ್ಲಿ ವಿಶ್ರಾಂತಿಯಲ್ಲಿದ್ದರು. ಇವರು ಇಚ್ಛೆಯಂತೆ ಅವರ ದೇಹವನ್ನು ದಾನ ಮಾಡಲಾಗಿದೆ.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ಜನಿಸಿದ ಎಸ್.ಸಿ. ಸರ್‌ದೇಶಪಾಂಡೆ ಅವರು ಪ್ರಾಥಮಿಕ ಹಾಗೂ ಮಾಧ್ಯಮ ಶಿಕ್ಷಣವನ್ನು ಧಾರವಾಡದ ಕೆ.ಇ. ಬೋರ್ಡ್ಸ್ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಕಾಲೇಜು ಶಿಕ್ಷಣವನ್ನು ಧಾರವಾಡದಲ್ಲಿ ಪೂರೈಸಿದ್ದಾರೆ. ಮಗ ಸೇನೆಗೆ ಸೇರಬೇಕೆಂಬುದು ಅವರ ತಂದೆಯ ಇಚ್ಛೆಯಾಗಿತ್ತು. ಅದರಂತೆ ಸೇನೆಯಲ್ಲಿ ದೇಶ ಸೇವೆ ಮಾಡಿ ನಿವೃತ್ತಿ ಹೊಂದಿದ್ದರು. ಕರ್ನಾಟಕದಿಂದ ಗಣರಾಜ್ಯೋತ್ಸವ ಪರೇಡ್‌ಗೆ ಹೋದ ಮೊದಲ ಕೆಡೆಟ್ ಎಂಬುದು ಸರ್‌ದೇಶಪಾಂಡೆ ಅವರ ಹೆಗ್ಗಳಿಕೆ.

ಇದನ್ನೂ ಓದಿ: Prof Maleyur Guruswamy: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ವಿದ್ವಾಂಸ ಪ್ರೊ.ಮಲೆಯೂರು ಗುರುಸ್ವಾಮಿ ನಿಧನ

ಯುದ್ಧಗಳ ಬಗ್ಗೆ ಪುಸ್ತಕ ಬರೆದಿದ್ದ ಸರದೇಶಪಾಂಡೆ

ಕುಮಾವೋ ರೆಜಿಮೆಂಟ್ ಮೂಲಕ ಸೈನ್ಯಕ್ಕೆ ಸೇರ್ಪಡೆಯಾದ ಇವರು ಅದೇ ರೆಜಿಮೆಂಟ್‌ಗೆ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ. ಬ್ರಿಗೇಡಿಯರ್, ಮೇಜರ್ ಜನರಲ್ ಹುದ್ದೆ ಸಹ ನಿರ್ವಹಿಸಿದ್ದಾರೆ. ಶ್ರೀಲಂಕಾದಲ್ಲಿ ಶಾಂತಿ ಪಾಲನಾ ಸಮಿತಿಗೆ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಸಮರ್ಥವಾಗಿ ನಿರ್ವಹಿಸಿ ಪ್ರಶಂಸೆಗೆ ಪಾತ್ರರಾಗಿದ್ದರು. ‘ಶಾಂತಿ ಯುದ್ಧ ಸೇವಾ ಮೆಡಲ್’ ಪಡೆದಿದ್ದ ಅಧಿಕಾರಿ ಸರದೇಶಪಾಂಡೆ, ನಿವೃತ್ತಿ ಬಳಿಕ ಅನೇಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಯುದ್ಧಗಳ ಬಗ್ಗೆ ಅನೇಕ ಪುಸ್ತಕ ಬರೆದಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:27 am, Thu, 9 March 23