Viral Video: ನಕಲಿ ಕೋಕಾ ಕೋಲಾ ಡ್ರಿಂಕ್ಸ್‌ ಹೇಗೆ ತಯಾರಾಗುತ್ತೇ ನೋಡಿ; ವಿಡಿಯೋ ವೈರಲ್​​

|

Updated on: Mar 30, 2024 | 3:17 PM

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಂತೆ ಸಾಕಷ್ಟು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ. ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

Viral Video: ನಕಲಿ ಕೋಕಾ ಕೋಲಾ ಡ್ರಿಂಕ್ಸ್‌ ಹೇಗೆ ತಯಾರಾಗುತ್ತೇ ನೋಡಿ; ವಿಡಿಯೋ ವೈರಲ್​​
ನಕಲಿ ಕೋಕಾ ಕೋಲಾ ಡ್ರಿಂಕ್ಸ್‌
Follow us on

ವಿಶ್ವದ ಅತ್ಯಂತ ಜನಪ್ರಿಯ ತಂಪು ಪಾನೀಯಗಳಲ್ಲಿ ಒಂದಾದ ಕೋಕಾ- ಕೋಲಾ (Coca-Cola) ವನ್ನೇ ಹೋಲುವ ನಕಲಿ ಕೋಲಾದ ತಯಾರಿಕೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​​ ಆಗಿದೆ. ಅತ್ಯಂತ ಕೊಳಕು ಪ್ರದೇಶದಲ್ಲಿ ಕೋಕಾ- ಕೋಲಾ ರೀತಿಯ ಪಾನೀಯವನ್ನೇ ಕೋಕಾ- ಕೋಲಾದ ಲೇಬಲ್​​ ಇರುವ ಬಾಟಲಿಯೊಳಗೆ ತುಂಬಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ವೀಡಿಯೋ ನೋಡಿದ ನೆಟ್ಟಿಗರು ಹತ್ತು ರೂಪಾಯಿ ಕಡಿಮೆಯಾದ್ದರಿಂದ ಸಣ್ಣ ವ್ಯಾಪಾರಿಗಳು ಇವರಿಂದ ಈ ನಕಲಿ ಡ್ರಿಂಕ್ಸ್​​ ಖರೀದಿಸುತ್ತಾರೆ. ಅಂಥವರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಪ್ರಸ್ತುತ ಬೇಸಿಗೆ ಕಾಲವಾದ್ದರಿಂದ ಈ ನಕಲಿ ತಂಪು ಪಾನೀಯಗಳ ಮಾರಾಟ ಜೋರಾಗಿ ನಡೆಯುತ್ತಿದೆ. ಸುಡು ಬಿಸಿಲಿನಲ್ಲಿ ಕೂಲ್ ಡ್ರಿಂಕ್ಸ್ ಕುಡಿಯುವ ಮುನ್ನ ಯೋಚಿಸಿ ಎಂದು ವಿಡಿಯೋದಲ್ಲಿ ಬರೆಯಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗುತ್ತಿರುವ ನಕಲಿ ಕೋಕಾ- ಕೋಲಾದ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಚಿಕಿತ್ಸೆಗೆಂದು ಬರುವ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ವೈದ್ಯನ ಬಂಧನ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಂತೆ ಸಾಕಷ್ಟು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ. ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:15 pm, Sat, 30 March 24