Realme 10 Pro Coca-Cola: ಕೋಕಾ-ಕೋಲಾ ಚೊಚ್ಚಲ ಸ್ಮಾರ್ಟ್​ಫೋನ್ ಈಗ ಭಾರತದಲ್ಲಿ ಖರೀದಿಗೆ ಲಭ್ಯ: ಬೆಲೆ ಎಷ್ಟು?, ಏನು ಫೀಚರ್ಸ್

ಪ್ರಸಿದ್ಧ ಪಾನೀಯ ಸಂಸ್ಥೆ ಕೋಕಾ-ಕೋಲಾ (Coca-Cola) ರಿಯಲ್ ಮಿ ಜೊತೆ ಕೈಜೋಡಿಸಿ ಕಳೆದ ವಾರವಷ್ಟೆ ರಿಯಲ್ ಮಿ 10 ಪ್ರೊ 5ಜಿ ಕೋಕಾ-ಕೋಲಾ ಎಡಿಷನ್ (Realme 10 Pro Coca-Cola Edition) ಅನ್ನು ಬಿಡುಗಡೆ ಮಾಡಿತ್ತು. ಇದೀಗ ಇಂದಿನಿಂದ ಈ ಫೋನ್ ದೇಶದಲ್ಲಿ ಖರೀದಿಗೆ ಸಿಗುತ್ತಿದೆ.

Realme 10 Pro Coca-Cola: ಕೋಕಾ-ಕೋಲಾ ಚೊಚ್ಚಲ ಸ್ಮಾರ್ಟ್​ಫೋನ್ ಈಗ ಭಾರತದಲ್ಲಿ ಖರೀದಿಗೆ ಲಭ್ಯ: ಬೆಲೆ ಎಷ್ಟು?, ಏನು ಫೀಚರ್ಸ್
Realme 10 Pro Coca-Cola Edition
Follow us
TV9 Web
| Updated By: Vinay Bhat

Updated on: Feb 14, 2023 | 2:14 PM

ಭಾರತದಲ್ಲಿ ಇಂದು ವಾರಕ್ಕೆ ಕನಿಷ್ಠ ಎಂದರೂ ಮೂರರಿಂದ- ನಾಲ್ಕು ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಯಲ್ಲಿ ಬಿಡುಗಡೆ ಆಗುತ್ತದೆ. ಇದರ ಜೊತೆಗೆ ಹೊಸ ಹೊಸ ಕಂಪನಿಗಳು ಕೂಡ ಹುಟ್ಟಿಗೊಳ್ಳುತ್ತಿದೆ. ಕಳೆದ ವರ್ಷ ನಥಿಂಗ್ ಎಂಬ ಕಂಪನಿ ತನ್ನ ಮೊಟ್ಟ ಮೊದಲ ನಥಿಂಗ್ ಫೋನ್ 1 (Nothing Phone 1) ಸ್ಮಾರ್ಟ್​ಫೋನ್ ಪರಿಚಯಿಸಿ ಮೋಡಿ ಮಾಡಿತ್ತು. ಇದೀಗ ಪ್ರಸಿದ್ಧ ಪಾನೀಯ ಸಂಸ್ಥೆ ಕೋಕಾ-ಕೋಲಾ (Coca-Cola) ತನ್ನ ಚೊಚ್ಚಲ ಮೊಬೈಲ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿ ಭರ್ಜರಿ ಸೌಂಡ್ ಮಾಡುತ್ತಿದೆ. ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆ ರಿಯಲ್ ಮಿ ಜೊತೆ ಕೈಜೋಡಿಸಿರುವ ಕೋಲಾ ಕಳೆದ ವಾರವಷ್ಟೆ ರಿಯಲ್ ಮಿ 10 ಪ್ರೊ 5ಜಿ ಕೋಕಾ-ಕೋಲಾ ಎಡಿಷನ್ (Realme 10 Pro Coca-Cola Edition) ಅನ್ನು ಬಿಡುಗಡೆ ಮಾಡಿತ್ತು. ಇದೀಗ ಇಂದಿನಿಂದ ಈ ಫೋನ್ ದೇಶದಲ್ಲಿ ಖರೀದಿಗೆ ಸಿಗುತ್ತಿದೆ. ಇದರ ಬೆಲೆ, ಫೀಚರ್ಸ್, ಲಭ್ಯತೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಲೆ ಎಷ್ಟು?:

ರಿಯಲ್ ಮಿ 10 ಪ್ರೊ 5G ಕೋಕಾ-ಕೋಲಾ ಎಡಿಷನ್ ಸ್ಮಾರ್ಟ್​ಫೋನ್ ಭಾರತದಲ್ಲಿ ಒಂದು ಮಾದರಿಯಲ್ಲಷ್ಟೆ ಅನಾವರಣಗೊಂಡಿತ್ತು. ಇದರ 8GB RAM + 128GB ಸ್ಟೋರೇಜ್ ಸಾಮರ್ಥ್ಯಕ್ಕೆ 20,999 ರೂ. ನಿಗದಿ ಮಾಡಲಾಗಿದೆ. ಕಪ್ಪು ಬಣ್ಣದಲ್ಲಿ ರಿಲೀಸ್ ಆಗಿರುವ ಈ ಸ್ಮಾರ್ಟ್​ಫೋನ್​ನ ಹಿಂಭಾಗ ಕೋಕಾ-ಕೋಲಾದ ಲೋಗೋ ಅಳವಡಿಸಲಾಗಿದೆ. ಈ ಫೋನ್ ಇಂದು ಫೆಬ್ರವರಿ 14 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್​ಕಾರ್ಟ್ ಮೂಲಕ ಖರೀದಿಗೆ ಸಿಗುತ್ತಿದೆ.

ಇದನ್ನೂ ಓದಿ
Image
Jio Valentine’s Day Offer: ವ್ಯಾಲೆಂಟೈನ್ಸ್​ ಡೇಗೆ ಜಿಯೋದಿಂದ ಧಮಕಾ ಆಫರ್ ಘೋಷಣೆ: ಕೂಡಲೇ ರಿಚಾರ್ಜ್ ಮಾಡಿರಿ
Image
OnePlus 11 5G: ಒನ್​ಪ್ಲಸ್​ನ 2023ರ ಮೊದಲ ಸ್ಮಾರ್ಟ್​ಫೋನ್ ಇಂದಿನಿಂದ ಖರೀದಿಗೆ ಲಭ್ಯ: ಯಾವುದು?, ಏನು ಫೀಚರ್ಸ್?
Image
Tech Tips: ನಿಮ್ಮ ಫೇಸ್​ಬುಕ್ ಪ್ರೊಫೈಲ್ ಯಾರು ನೋಡುತ್ತಿದ್ದಾರೆಂದು ತಿಳಿಯಬೇಕೆ?: ಇಲ್ಲಿದೆ ಸಿಂಪಲ್ ಟ್ರಿಕ್
Image
WhatsApp Web: ನೀವು ವಾಟ್ಸ್​ಆ್ಯಪ್ ವೆಬ್ ಬಳಸುತ್ತಿದ್ದೀರಾ?: ಬರುತ್ತಿದೆ ಅಚ್ಚರಿ ಗೊಳಿಸುವ ಹೊಸ ಫೀಚರ್

Google Maps: ಭಾರತದ ಬಳಕೆದಾರರಿಗಿಲ್ಲ ಗೂಗಲ್ ಮ್ಯಾಪ್​ನ ಈ ಅದ್ಭುತ ಫೀಚರ್​ಗಳು: ಯಾವುವು ನೋಡಿ

ಫೀಚರ್ಸ್ ಏನು?:

ರಿಯಲ್ ಮಿ 10 ಪ್ರೊ ಕೋಕಾ-ಕೋಲಾ ಎಡಿಷನ್ ಸ್ಮಾರ್ಟ್​ಫೋನ್ 1080*2400 ಪಿಕ್ಸೆಲ್ ರೆಸಲೋಷನ್ ಸಾಮರ್ಥ್ಯದ 6.72 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಇದು 120Hz ರಿಫ್ರೆಶ್ ರೇಟ್‌ ನೀಡಲಿದ್ದು, ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಕೋಕಾ-ಕೋಲಾ ಥೀಮ್ ಹೊಂದಿರುವ ಆಂಡ್ರಾಯ್ಡ್ 13 OS ಮೂಲಕ ರನ್ ಆಗುತ್ತದೆ.

ಹಾಗೆಯೇ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದ್ದು, 108 ಮೆಗಾಪಿಕ್ಸೆಲ್ ಸ್ಯಾಮ್​ಸಂಗ್ HM6 ಪ್ರೈಮರಿ ಸೆನ್ಸಾರ್​ನ ಮುಖ್ಯ ಕ್ಯಾಮೆರಾ ಅಳವಡಿಸಲಾಗಿದೆ. 2 ಮೆಗಾಪಿಕ್ಸೆಲ್ ಸಾಮರ್ಥ್ಯದ ಮ್ಯಾಕ್ರೋ ಸೆನ್ಸರ್‌ ಆಯ್ಕೆ ಇದೆ. ಮುಂಭಾಗ ಸೆಲ್ಫೀಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಇದರಲ್ಲಿರುವ ಕ್ಯಾಮೆರಾ ಅದ್ಭುತವಾಗಿದ್ದು ಉತ್ತಮ ಕ್ವಾಲಿಟಿಯಲ್ಲಿ ಫೋಟೋಗಳನ್ನು ಸೆರೆ ಹಿಡಿಯುತ್ತದೆ.

ರಿಯಲ್ ಮಿ 10 ಪ್ರೊ ಕೋಕಾ-ಕೋಲಾ ಎಡಿಷನ್ ಸ್ಮಾರ್ಟ್​ಫೋನಿನ ಬ್ಯಾಟರಿ ವಿಚಾರಕ್ಕೆ ಬರುವುದಾದರೆ 5000mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿದ್ದು, ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸೈಡ್ ಮೌಂಟೆಡ್ ಫಿಂಗರ್​ಪ್ರಿಂಟ್ ನೀಡಲಾಗಿದೆ. ಮೈಕ್ರೊ ಎಸ್​ಡಿ ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದು ಎಂದು ಕಂಪನಿ ಹೇಳಿದೆ. ಕನೆಕ್ಟಿವಿಟಿ ಆಯ್ಕೆಯಲ್ಲಿ 5G ಬೆಂಬಲ ಪಡೆದುಕೊಂಡಿದೆ. ಉಳಿದಂತೆ 4G, Wi-Fi 6, ಬ್ಲೂಟೂತ್ 5.2, GPS ಮತ್ತು USB ಟೈಪ್-ಸಿ ಸೇರಿದಂತೆ ಇತ್ತೀಚೆಗಿನ ಎಲ್ಲ ಆಯ್ಕೆ ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್