WhatsApp Web: ನೀವು ವಾಟ್ಸ್​ಆ್ಯಪ್ ವೆಬ್ ಬಳಸುತ್ತಿದ್ದೀರಾ?: ಬರುತ್ತಿದೆ ಅಚ್ಚರಿ ಗೊಳಿಸುವ ಹೊಸ ಫೀಚರ್

WhatsApp Web New Feature: ಹೆಚ್ಚಾಗಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಅಪ್ಡೇಟ್​ಗಳನ್ನು ನೀಡುತ್ತಿದ್ದ ವಾಟ್ಸ್​ಆ್ಯಪ್ ಈಗ ವೆಬ್ ಬಳಕೆದಾರರಿಗೆ ನೂತನ ಪೀಚರ್​ವೊಂದನ್ನು ನೀಡಲು ಮುಂದಾಗಿದೆ. ವಾಟ್ಸ್​ಆ್ಯಪ್ ವೆಬ್​ನಲ್ಲಿ ಫೋಟೋ ಸೆಂಡ್‌ ಮಾಡುವಾಗ ವಿಶೇಷವಾದ ಆಯ್ಕೆಯೊಂದು ಕಾಣಿಸಲಿದೆ.

WhatsApp Web: ನೀವು ವಾಟ್ಸ್​ಆ್ಯಪ್ ವೆಬ್ ಬಳಸುತ್ತಿದ್ದೀರಾ?: ಬರುತ್ತಿದೆ ಅಚ್ಚರಿ ಗೊಳಿಸುವ ಹೊಸ ಫೀಚರ್
WhatsApp Web
Follow us
Vinay Bhat
|

Updated on:Feb 13, 2023 | 12:25 PM

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಕಳೆದ ವರ್ಷ ಸಾಕಷ್ಟು ಅಭಿವೃದ್ದಿ ಕಂಡಿತು. ಹೀಗಾಗಿಯೇ ದಿನದಿಂದ ದಿನಕ್ಕೆ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುತ್ತಿರುವ ವಾಟ್ಸ್​ಆ್ಯಪ್ (WhatsApp) ಅನ್ನು ಇಂದು ಕೇವಲ ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. 2023 ವರ್ಷದ ಮೊದಲ ತಿಂಗಳಲ್ಲೇ ಕೆಲ ಅಪ್ಡೇಟ್​ಗಳನ್ನು ನೀಡಿರುವ ವಾಟ್ಸ್​ಆ್ಯಪ್​ನಲ್ಲಿ ಈ ತಿಂಗಳು ಕೆಲ ಹೊಸ ಫೀಚರ್​ಗಳು ಬರುತ್ತಿದೆ. ಹೆಚ್ಚಾಗಿ ಆಂಡ್ರಾಯ್ಡ್ (Android) ಮತ್ತು ಐಒಎಸ್ ಬಳಕೆದಾರರಿಗೆ ಅಪ್ಡೇಟ್​ಗಳನ್ನು ನೀಡುತ್ತಿದ್ದ ಕಂಪನಿ ಈಗ ವೆಬ್ ಬಳಕೆದಾರರಿಗೆ ನೂತನ ಪೀಚರ್​ವೊಂದನ್ನು ನೀಡಲು ಮುಂದಾಗಿದೆ. ವಾಟ್ಸ್​ಆ್ಯಪ್ ವೆಬ್​ನಲ್ಲಿ ಫೋಟೋ ಸೆಂಡ್‌ ಮಾಡುವಾಗ ವಿಶೇಷವಾದ ಆಯ್ಕೆಯೊಂದು ಕಾಣಿಸಲಿದ್ದು, ಇದರ ಮೂಲಕ ಮೂಲ ಗುಣಮಟ್ಟದಲ್ಲೇ ಆ ಫೋಟೋ ಸೆಂಡ್ ಆಗಲಿದೆ.

ಈ ಆಯ್ಕೆ ಸದ್ಯದಲ್ಲೇ ವಾಟ್ಸ್​ಆ್ಯಪ್ ತನ್ನ ವೆಬ್​ ಬಳಕೆದಾರರಿಗೆ ನೀಡುತ್ತಿದೆ. ಈ ಮೂಲಕ ಉತ್ತಮ ಕ್ವಾಲಿಟಿ ಇರುವ ಫೋಟೋ ಅಥವಾ ಫೈಲ್‌ಗಳನ್ನು ಅದೇ ಗುಣಮಟ್ಟದಲ್ಲಿ ಸೆಂಡ್‌ ಮಾಡಬಹುದು. ಈಗಾಗಲೇ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಬಳಕೆದಾರರಿಗೆ ಈ ಆಯ್ಕೆ ನೀಡಲಾಗಿದೆ. ವಾಟ್ಸ್​ಆ್ಯಪ್​ ವೆಬ್​ನಲ್ಲಿ ಈಗ ಒಂದು ಫೋಟೋ ಕಳುಹಿಸಿದರೆ ಅದು ರಿಸೀವ್ ಮಾಡಿಕೊಂಡ ಬಳಕೆದಾರನಿಗೆ ಒರಿಜಿನಲ್ ಕ್ವಾಲಿಟಿಯಲ್ಲಿ ಸಿಗುವುದಿಲ್ಲ. ಇದಕ್ಕಾಗಿ ವಾಟ್ಸ್​ಆ್ಯಪ್​ ತನ್ನ ಡೆಸ್ಕ್​ಟಾಪ್ ಪ್ಲಾಟ್‌ಫಾರ್ಮ್‌ನಲ್ಲಿ ಮೂಲ ಗುಣಮಟ್ಟದ ಫೋಟೋಗಳನ್ನು ಸೆಂಡ್‌ ಮಾಡಲು ಅನುಮತಿಸುವ ಹೊಸ ಫೀಚರ್ಸ್‌ ಪರಿಚಯಿಸುವುದಕ್ಕೆ ತಯಾರಿ ನಡೆಸಿದೆ. ಈ ಫೀಚರ್ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ.

Whatsapp New Feature: ವಾಟ್ಸ್​ಆ್ಯಪ್ ಪರಿಚಯಿಸುತ್ತಿರುವ ಹೊಸ ಅಪ್ಡೇಟ್ ಕಂಡು ಸ್ಮಾರ್ಟ್​ಫೋನ್ ಕಂಪನಿಗಳು ಶಾಕ್: ಯಾಕೆ ಗೊತ್ತೇ?

ಇದನ್ನೂ ಓದಿ
Image
Google Maps: ಭಾರತದ ಬಳಕೆದಾರರಿಗಿಲ್ಲ ಗೂಗಲ್ ಮ್ಯಾಪ್​ನ ಈ ಅದ್ಭುತ ಫೀಚರ್​ಗಳು: ಯಾವುವು ನೋಡಿ
Image
Poco X5 Pro: 108MP ಕ್ಯಾಮೆರಾದ ಹೊಸ ಪೋಕೋ ಸ್ಮಾರ್ಟ್​ಫೋನ್ ಇಂದಿನಿಂದ ಖರೀದಿಗೆ ಲಭ್ಯ: ಬೆಲೆ ಎಷ್ಟು?
Image
Valentine’s Day: ವಾಲೆಂಟೈನ್ಸ್​ ಡೇಗೆ ಈ ಸ್ಮಾರ್ಟ್​ಫೋನ್ ಗಿಫ್ಟ್ ಕೊಡಿ: ನಥಿಂಗ್ ಫೋನ್ 1 ಮೇಲೆ ಬಂಪರ್ ಡಿಸ್ಕೌಂಟ್
Image
Tech Tips: ನಿಮ್ಮ ಇಂಟರ್ನೆಟ್ ಹೈ-ಸ್ಪೀಡ್ ಆಗಬೇಕಾ?: ಮೊಬೈಲ್​ಗೆ ಸಿಮ್ ಕಾರ್ಡ್ ಹಾಕುವಾಗ ಹೀಗೆ ಮಾಡಿ

ವಾಟ್ಸ್​ಆ್ಯಪ್ ಕರೆಯನ್ನು ಶೆಡ್ಯುಲ್‌ ಮಾಡಿ:

ವಾಟ್ಸ್​ಆ್ಯಪ್ ಕರೆಯನ್ನು ಶೆಡ್ಯುಲ್‌ ಮಾಡಿಕೊಳ್ಳಬಹುದಾದ ಉಪಯುಕ್ತ ಫೀಚರ್ ನೀಡಲು ಮುಂದಾಗಿದೆ. ಹೌದು, ಯಾವುದೇ ಸ್ಮಾರ್ಟ್​ಫೋನ್​ನಲ್ಲೂ ಈರೀತಿಯ ಆಯ್ಕೆ ಇಲ್ಲ. ಆದರೆ, ವಾಟ್ಸ್​ಆ್ಯಪ್ ಇದೇ ಮೊದಲ ಬಾರಿಗೆ ತನ್ನ ಕರೆಗಳನ್ನು ಶೆಡ್ಯುಲ್‌ ಮಾಡುವ ಆಯ್ಕೆ ನೀಡುತ್ತಿದೆ. ಅಂದರೆ ವಾಟ್ಸ್​ಆ್ಯಪ್​ನಲ್ಲಿ ಬಳಕೆದಾರರು ಮುಂಚಿತವಾಗಿಯೇ ಕರೆಯನ್ನು ನಿಗದಿಪಡಿಸುವ ಸಮಯಕ್ಕೆ ಮಾಡಬಹುದಾಗಿದೆ. ಈ ಮೂಲಕ ಪ್ರಮುಖ ಸಂಭಾಷಣೆಯನ್ನು ಯಾರೂ ಸಹ ಮಿಸ್‌ ಮಾಡಿಕೊಳ್ಳುವ ಸಂಭವ ಇರುವುದಿಲ್ಲ ಎಂದು ಸಂಸ್ಥೆ ಹೇಳಿದೆ. ಅಷ್ಟೇ ಅಲ್ಲದೆ ಯಾರನ್ನಾದರೂ ಕೆಲಸಕ್ಕೆ ನೇಮಿಸಿಕೊಳ್ಳಲು ಸಂದರ್ಶನ ಮಾಡಬೇಕು ಎಂದಿದ್ದರೆ, ಈ ವೇಳೆ ಸಂದರ್ಶಕರು ಸಂದರ್ಶನಕ್ಕೆ ಹಾಜರಾಗುವ ವ್ಯಕ್ತಿ ಜೊತೆ ಯಾವ ಸಮಯದಲ್ಲಿ ಮಾತನಾಡಬೇಕು ಎಂಬುದನ್ನು ಶೆಡ್ಯುಲ್‌ ಮಾಡಬಹುದು.

ಸ್ಟೇಟಸ್​ನಲ್ಲಿ ವಾಯ್ಸ್ ಮೆಸೇಜ್:

ಸದ್ಯದಲ್ಲೇ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ವಾಯ್ಸ್ ಮೆಸೇಜ್ ಅನ್ನು ಹಂಚಿಕೊಳ್ಳಬಹುದು. ವಾಯ್ಸ್ ನೋಟ್ ಅನ್ನು ಸ್ಟೇಟಸ್​ನಲ್ಲಿ ಹಂಚಿಕೊಳ್ಳಬಹುದಾದ ಆಯ್ಕೆ ಮೊದಲಿಗೆ ಆಂಡ್ರಾಯ್ಡ್ ಬಳಕೆದಾರರಿಗೆ ಸಿಗಲಿದೆ. ಈಗಾಗಲೇ ಇದು ಆಂಡ್ರಾಯ್ಡ್ ಬೇಟಾ ವರ್ಷನ್​ನಲ್ಲಿ ಲಭ್ಯವಾಗಿದೆ. ಈವರೆಗೆ ಸ್ಟೇಟಸ್​ನಲ್ಲಿ ವಿಡಿಯೋ, ಫೋಟೋ, ಲಿಂಕ್​ ಮತ್ತು ಬರಹಗಳನ್ನು ಮಾತ್ರ ಹಂಚಿಕೊಳ್ಳಬಹುದಿತ್ತು. ಇದೀಗ ವಾಯ್ಸ್ ನೋಟ್ ಎಂಬ ಹೊಸ ಫೀಚರ್ ಬಳಕೆದಾರರು ಸ್ಟೇಟಸ್​ನಲ್ಲಿ ವಾಯ್ಸ್ ನೋಟ್ ಅಥವಾ ವಾಯ್ಸ್ ಕ್ಲಿಪ್​ಗಳನ್ನು ಶೇರ್ ಮಾಡಬಹುದಾಗಿದೆ. 30 ಸೆಕೆಂಡ್​ಗಳ ಕಾಲ ಇದು ಇರಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:25 pm, Mon, 13 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ