Viral Video: ರಸ್ತೆ ಬದಿ ನಿಂತುಕೊಂಡು ಲಿಪ್​ಲಾಕ್ ಮಾಡಿದ ಯುವತಿಯರು; ಕೋಪಗೊಂಡ ಸನ್ಯಾಸಿನಿ ಮಾಡಿದ್ದೇನು ಗೊತ್ತಾ?

| Updated By: Rakesh Nayak Manchi

Updated on: Jul 19, 2022 | 1:21 PM

ಟಿವಿ ಶೋ ಶೂಟಿಂಗ್‌ಗಾಗಿ ಇಬ್ಬರು ಮಹಿಳಾ ಮಾಡೆಲ್‌ಗಳು ಬೀದಿಯಲ್ಲಿ ಚುಂಬಿಸುತ್ತಿರುವಾಗ ಸನ್ಯಾಸಿನಿ ಬಂದು ಬೇರ್ಪಡಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಮಾಡೆಲ್​ಗಳು ಚುಂಬಿಸುತ್ತಿರುವ ವೈರಲ್ ವಿಡಿಯೋ ಇಲ್ಲಿದೆ.

Viral Video: ರಸ್ತೆ ಬದಿ ನಿಂತುಕೊಂಡು ಲಿಪ್​ಲಾಕ್ ಮಾಡಿದ ಯುವತಿಯರು; ಕೋಪಗೊಂಡ ಸನ್ಯಾಸಿನಿ ಮಾಡಿದ್ದೇನು ಗೊತ್ತಾ?
ಟಿವಿ ಶೋ ಶೂಟ್​ಗಾಗಿ ಲಿಪ್​ಲಾಕ್ ಮಾಡುತ್ತಿದ್ದ ಮಾಡೆಲ್​ಗಳನ್ನು ಬೇರ್ಪಡಿಸಿದ ಸನ್ಯಾಸಿನಿ
Follow us on

ರಸ್ತೆ ಬದಿ ಇಬ್ಬರು ಯುವತಿಯರು ತಬ್ಬಿಕೊಂಡು ಲಿಪ್​ಲಾಕ್ ಮಾಡಲು ಆರಂಭಿಸಿದಾಗ ವೃದ್ಧೆ ಸನ್ಯಾಸಿನಿಯ ಎಂಟ್ರಿ ಆಗಿಬಿಡುತ್ತದೆ, ನೀವು ಏನು ಮಾಡುತ್ತಿದ್ದೀರಿ? ಏನು ಮಾಡುತ್ತಿದ್ದೀರಿ ಎಂದು ಗದಿರುಸುತ್ತಾ ಪರಪಸ್ಪರ ಚುಂಬಿಸುತ್ತಿದ್ದ ಯುವತಿಯರನ್ನು ದೂರದೂರ ಮಾಡಿಯೇ ಬಿಟ್ಟರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಈ ಸುದ್ದಿಯನ್ನು ಓದಿ.

ಅಷ್ಟಕ್ಕೂ ಆಗಿದ್ದು ಏನೆಂದರೆ, ಟಿವಿ ಶೋ ಶೂಟಿಂಗ್‌ಗಾಗಿ ಇಬ್ಬರು ಮಹಿಳಾ ಮಾಡೆಲ್‌ಗಳು ಬೀದಿಯಲ್ಲಿ ಚುಂಬಿಸುತ್ತಿರುವಾಗ ಸನ್ಯಾಸಿನಿ ಬಂದು ಬೇರ್ಪಡಿಸಿದ್ದಾರೆ. ನೇಪಲ್ಸ್‌ನ ಸ್ಪ್ಯಾನಿಷ್ ಕ್ವಾರ್ಟರ್‌ನಲ್ಲಿ ಮಾಡೆಲ್‌ಗಳಾದ ಸೆರೆನಾ ಡಿ ಫೆರಾರಿ ಮತ್ತು ಕಿಶನ್ ವಿಲ್ಸನ್ ಅವರು ನಟಿಸುತ್ತಿದ್ದ ಜಾಹೀರಾತಿನ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದ್ದು, ದೃಶ್ಯವನ್ನು ಸೆರೆಹಿಡಿಯಲಾಗಿದೆ.

ಇಟಾಲಿಯನ್ ಶೋ ಚಿತ್ರೀಕರಣ ಹಿನ್ನೆಲೆ ಮಾಡೆಲ್ಸ್​ಗಳಾದ ಸೆರೆನಾ ಡಿ ಫೆರಾರಿ ಮತ್ತು ಕಿಶನ್ ವಿಲ್ಸನ್ ರಸ್ತೆ ಪಕ್ಕದಲ್ಲಿ ನಿಂತುಕೊಂಡು ಲಿಪ್ ಲಾಕ್ ಮಾಡುತ್ತಿರುತ್ತಾರೆ.  ಈ ವೇಳೆ ರಸ್ತೆ ಮೂಲಕ ಬರುತ್ತಿದ್ದ ಬಿಳಿ ಬಟ್ಟೆ ಧರಿಸಿದ್ದ ವೃದ್ಧೆ ಸನ್ಯಾಸಿನಿಯೊಬ್ಬರು ಕೋಪಗೊಂಡು ನೀವು ಏನು ಮಾಡುತ್ತಿದ್ದೀರಿ? ನೀವು ಏನು ಮಾಡುತ್ತಿದ್ದೀರಿ ಎಂದು ಹೇಳುತ್ತಾ ಲಿಪ್​ಲಾಕ್ ಮಾಡುತ್ತಿದ್ದ ಯುವತಿಯರನ್ನು ಬೇರ್ಪಡಿಸಿ ಗದರಿಸಿದರು. ಈ ರೀತಿಯ ಸನ್ನಿವೇಶಗಳನ್ನು ಕಂಡು ಮಾಡೆಲ್​ಗಳು ನಗುತ್ತಾರೆ. ಈ ಎಲ್ಲಾ ದೃಶ್ಯಾವಳಿಗಳನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.

ಸಾರ್ವಜನಿಕವಾಗಿ ಗುಂಪು ಸೇರಿರುವುದನ್ನು ನೋಡಿದ ಸನ್ಯಾಸಿನಿ ಚಿತ್ರೀಕರಣದ ಗುಂಪನ್ನು ಕೊರೋನಾ ವೈರಸ್ ಮುಂದಿಟ್ಟುಕೊಂಡು ದೂಷಿಸುತ್ತಿದ್ದರು. ಅನಿರೀಕ್ಷಿತ ಹಸ್ತಕ್ಷೇಪದ ನಂತರ ಮೇಕಪ್ ಕಲಾವಿದರು ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. “ನಾವು ನಿಯತಕಾಲಿಕೆಗೆ ಶೂಟ್ ಮಾಡುತ್ತಿದ್ದೆವು. ಇದ್ದಕ್ಕಿದ್ದಂತೆ ಸನ್ಯಾಸಿನಿ ಬಂದು ಅಡ್ಡಿಪಡಿಸಿದರು, ಮಾಡೆಲ್​ಗಳು ಚುಂಬಿಸುತ್ತಿರುವುದನ್ನು ಗಮನಿಸಿ ಮಧ್ಯಪ್ರವೇಶಿಸಲು ಓಡಿಹೋದರು” ಎಂದು ರಾಬರ್ಟ್ಸ್ ಮಸ್ತಾಲಿಯಾ ಹೇಳಿದರು

ಶೂಟಿಂಗ್​ಗೆ ಸನ್ಯಾಸಿನಿ ಅಡ್ಡಿಪಡಿಸಿದ ಸನ್ನಿವೇಶದ ದೃಶ್ಯಾವಳಿಯನ್ನು Redditನಲ್ಲಿ ಪೋಸ್ಟ್ ಮಾಡಿದ ನಂತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿಯೂ ಅಪ್ಲೋಡ್ ಆಗಿ ವೈರಲ್ ಪಡೆದುಕೊಂಡಿದೆ.

Published On - 1:17 pm, Tue, 19 July 22