AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಿಮಾನ ಭೂಮಿಗೆ ಅಪ್ಪಳಿಸಿದರೂ ಪೈಲಟ್ ಬದುಕಿ ಬಂದದ್ದು ಹೇಗೆ ಗೊತ್ತಾ?

ವಿಮಾನ ಅಪಘಾತದಲ್ಲಿ ಬದುಕುಳಿಯುವುದೇ ಅನುಮವಾನವಾಗಿರುತ್ತದೆ. ಹೀಗಿದ್ದಾಗ ವಿಮಾನ ಭೂಮಿಗೆ ಅಪ್ಪಳಿಸಿದರೂ ಪೈಲಟ್ ಬದುಕುಳಿದು ವಿಮಾನದಿಂದ ಹೊರಬರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Viral Video: ವಿಮಾನ ಭೂಮಿಗೆ ಅಪ್ಪಳಿಸಿದರೂ ಪೈಲಟ್ ಬದುಕಿ ಬಂದದ್ದು ಹೇಗೆ ಗೊತ್ತಾ?
ನೆಲಕ್ಕೆ ಅಪ್ಪಳಿಸಿದ ವಿಮಾನ
Follow us
TV9 Web
| Updated By: Rakesh Nayak Manchi

Updated on:Jul 19, 2022 | 3:06 PM

ಸಾಮಾನ್ಯವಾಗಿ ವಿಮಾನ ಅಪಘಾತ ಆದಾಗ ಅದರಲ್ಲಿದ್ದವರು ಬದುಕುಳಿಯುವುದು ತೀರಾ ಅಪರೂಪ. ಅದಾಗ್ಯೂ ಕೆಲವರು ಬದುಕುಳಿಯುತ್ತಾರೆ. ಇದೀಗ ಅಂತಹ ಒಂದು ಘಟನೆ ಬೆಲ್ಜಿಯಂನಲ್ಲಿ ನಡೆದಿದೆ. ವಿಮಾನ ಬಂದು ಭೂಮಿಗೆ ಅಪ್ಪಳಿಸಿದರೂ ಪೈಲಟ್ ಬದುಕುಳಿದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ. ತಿಂಗಳ ಆರಂಭದಲ್ಲಿ ಯುಎಸ್​ನಲ್ಲಿ ಪೈಲಟ್ ಒಬ್ಬರು ಹೆದ್ದಾರಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ ಬೆನ್ನಲ್ಲೇ ಈ ವಿಡಿಯೋ ಬಂದಿದೆ.

ವೈರಲ್ ವಿಡಿಯೋದಲ್ಲಿ ಇರುವಂತೆ, ಬಹು ಎತ್ತರದಲ್ಲಿ ಪ್ಯಾರಚೂಟ್​ನಲ್ಲಿ ಯಾರೋ ಬರುತ್ತಿರುವ ಹಾಗೆ ಕಣಿಸುತ್ತದೆ. ಅದು ಭೂಮಿಗೆ ಸಮೀಪವಾಗುತ್ತಿದ್ದಂತೆ ಸಮಸ್ಯೆಗೆ ಈಡಾದ ವಿಮಾನವೊಂದು ಬೀಳುತ್ತಿರುವುದು ತಿಳಿದುಬರುತ್ತದೆ. ವಿಡಿಯೋವನ್ನು ಸರಿಯಾಗಿ ಗಮನಿಸಿದಾಗ ವಿಮಾನದ ಹಿಂದೆ ಪ್ಯಾರಚೂಟ್ ಇರುತ್ತದೆ. ಇದರ ಸಹಾಯದಿಂದ ವಿಮಾನ ನಿಧಾನವಾಗಿ ಕೆಳಗೆ ಬಂದಿದೆ. ಆದರೂ ಭೂಮಿಗೆ ಸಮೀಪಿಸುತ್ತಿದ್ದಂತೆ ಬ್ರೂಗ್ಸ್‌ನ ಸಿಂಟ್-ಆಂಡ್ರೀಸ್‌ನಲ್ಲಿನ ರಸ್ತೆಯ ಬದಿ ವೇಗವಾಗಿಯೇ ಮುಖ ಕೆಳಗಾಗಿ ಹಿಂಬದಿ ಮೇಲ್ಮುಖವಾಗಿ ಅಪ್ಪಳಿಸಿದೆ. ವಿಡಿಯೋದ ಕೊನೆಯಲ್ಲಿ ಪೈಲಟ್ ಯಾವುದೇ ಅಪಾಯವಿಲ್ಲದೆ ವಿಮಾನದ ಬಾಗಿಲು ತೆಗೆದು ಹೊರಬರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಸ್ಕೈ ನ್ಯೂಸ್ ಪ್ರಕಾರ, ಎರಡು ಆಸನಗಳ ವಿಮಾನ ಬಿದ್ದ ಪ್ರದೇಶದಲ್ಲಿನ ಸೂಚನಾ ಫಲಕ ಮತ್ತು ತಡೆಗೋಡೆಗೆ ಕನಿಷ್ಠ ಹಾನಿಯುಂಟಾಗಿದೆ ಎಂದು ಬ್ರೂಗ್ಸ್ ಪೊಲೀಸರು ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿದ್ದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೈಲಟ್​ನ ಅನುಭವವನ್ನು ಹೊಗಳಿದ ಅಧಿಕಾರಿಗಳು, ಧುಮುಕು ಕೊಡೆಯನ್ನು ಬಿಡಿಸುವ ವಿಮಾನದ ಬ್ಯಾಲಿಸ್ಟಿಕ್ ರಿಕವರಿ ಸಿಸ್ಟಮ್​ನಿಂದಾಗಿ ಪೈಲಟ್​ನ ಜೀವ ಉಳಿದಿದೆ ಎಂದಿದ್ದಾರೆ. ಸದ್ಯ ವಿಮಾನ ಪತನದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಪತನವಾದ ವಿಮಾನ DynAero MCRO1 ಎಂದು ನ್ಯೂಜಿಲೆಂಡ್ ಹೆರಾಲ್ಡ್ ಪ್ರತ್ಯೇಕವಾಗಿ ವರದಿ ಮಾಡಿದೆ. ಇದು ಕಾರ್ಬನ್ ಫೈಬರ್‌ನಿಂದ ನಿರ್ಮಿಸಲಾದ ಎರಡು ಆಸನಗಳ ಹಗುರವಾದ ವಿಮಾನವಾಗಿದೆ.

ಜುಲೈ 3 ರಂದು, ಪೈಲಟ್ ವಿಸೆಂಟ್ ಫ್ರೇಸರ್ ತನ್ನ ಮಾವನೊಂದಿಗೆ ಏಕ-ಎಂಜಿನ್ ವಿಮಾನವನ್ನು ಹಾರಿಸುತ್ತಿದ್ದಾಗ ವಿಮಾನದ ಎಂಜಿನ್ ವಿಫಲಗೊಂಡಿದೆ. ಪರಿಣಾಮವಾಗಿ ಉತ್ತರ ಕೆರೊಲಿನಾದ ಚಥುಷ್ಪಥ ಹೆದ್ದಾರಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ವಿಡಿಯೋ ಕ್ಲಿಪ್‌ನಲ್ಲಿ, ವಿಮಾನವು ನೆಲಕ್ಕೆ ಬೀಳುತ್ತಿದ್ದಂತೆ ಕಾಣುತ್ತದೆ, ರಸ್ತೆಯೊಂದಿಗೆ ಸಂಪರ್ಕ ಸಾಧಿಸುವಾಗ ರಸ್ತೆಯಲ್ಲಿ ಹಲವಾರು ಕಾರುಗಳ ಮೇಲಿಂದ ಹಾದುಹೋಗುತ್ತದೆ. ನಂತರ ಯಾವುದೇ ಅಪಘಾತವಾಗದಂತೆ ಎಚ್ಚರಿಕೆಯಿಂದ ಲ್ಯಾಂಡಿಂಗ್ ಮಾಡಿ ಸ್ವಲ್ಪ ದೂರದಲ್ಲೇ ವಿಮಾನವನ್ನು ನಿಲ್ಲಿಸಲಾಗಿದೆ. ಇದರ ವಿಡಿಯೋ ಕೂಡ ವೈರಲ್ ಆಗಿತ್ತು.

Published On - 3:06 pm, Tue, 19 July 22

ಬ್ಲ್ಯಾಂಕ್ ಲೆಟರ್ ಹೆಡ್ ಯತ್ನಾಳ್​ಗೆ ಕೊಡುತ್ತೇನೆ, ಅವರೇ ಬರೆಯಲಿ: ಶಿವಾನಂದ
ಬ್ಲ್ಯಾಂಕ್ ಲೆಟರ್ ಹೆಡ್ ಯತ್ನಾಳ್​ಗೆ ಕೊಡುತ್ತೇನೆ, ಅವರೇ ಬರೆಯಲಿ: ಶಿವಾನಂದ
ಭಾರತದ ಯುದ್ಧ ತಯಾರಿ ಕಂಡು ಪತರುಗುಟ್ಟಿದೆ ಪಾಕಿಸ್ತಾನ
ಭಾರತದ ಯುದ್ಧ ತಯಾರಿ ಕಂಡು ಪತರುಗುಟ್ಟಿದೆ ಪಾಕಿಸ್ತಾನ
ಹೇಗಿರಲಿದೆ ಯುದ್ಧದ ಅಣಕು ಕಾರ್ಯಾಚರಣೆ? ಸಾರ್ವಜನಿಕರ ಜವಾಬ್ದಾರಿ ಏನು?
ಹೇಗಿರಲಿದೆ ಯುದ್ಧದ ಅಣಕು ಕಾರ್ಯಾಚರಣೆ? ಸಾರ್ವಜನಿಕರ ಜವಾಬ್ದಾರಿ ಏನು?
ಡ್ರೋನ್ ಪ್ರತಾಪ್ ಸಹಾಯ ಮನೋಭಾವ ಎಂಥದ್ದು ನೋಡಿ; ಒಂದು ಚಪ್ಪಾಳೆ ಬರಲೇಬೇಕು
ಡ್ರೋನ್ ಪ್ರತಾಪ್ ಸಹಾಯ ಮನೋಭಾವ ಎಂಥದ್ದು ನೋಡಿ; ಒಂದು ಚಪ್ಪಾಳೆ ಬರಲೇಬೇಕು
ದಾಖಲಾತಿ ಅರ್ಜಿಗಾಗಿ ರಾತ್ರಿ ಶಾಲಾ ಆವರಣದಲ್ಲಿ ಮಲಗುತ್ತಿದ್ದರಂತೆ ಪೋಷಕರು
ದಾಖಲಾತಿ ಅರ್ಜಿಗಾಗಿ ರಾತ್ರಿ ಶಾಲಾ ಆವರಣದಲ್ಲಿ ಮಲಗುತ್ತಿದ್ದರಂತೆ ಪೋಷಕರು
ವಿರಾಟ್ ಕೊಹ್ಲಿ ಕಟೌಟ್ ಎದುರು ಮೇಕೆ ಬಲಿ: ಆರ್​ಸಿಬಿ ಫ್ಯಾನ್ಸ್ ಹುಚ್ಚಾಟ
ವಿರಾಟ್ ಕೊಹ್ಲಿ ಕಟೌಟ್ ಎದುರು ಮೇಕೆ ಬಲಿ: ಆರ್​ಸಿಬಿ ಫ್ಯಾನ್ಸ್ ಹುಚ್ಚಾಟ
ದಂಪತಿಗೆ ಮದುವೆಯಾಗಿ ಕೇವಲ ಎರಡು ವರ್ಷವಾಗಿತ್ತು
ದಂಪತಿಗೆ ಮದುವೆಯಾಗಿ ಕೇವಲ ಎರಡು ವರ್ಷವಾಗಿತ್ತು
ಮೊಹಮ್ಮದ್ ಸಿರಾಜ್​ಗೆ ವಜ್ರದ ಉಂಗುರ ನೀಡಿದ ರೋಹಿತ್ ಶರ್ಮಾ
ಮೊಹಮ್ಮದ್ ಸಿರಾಜ್​ಗೆ ವಜ್ರದ ಉಂಗುರ ನೀಡಿದ ರೋಹಿತ್ ಶರ್ಮಾ
VIDEO: ಔಟ್ ಮಾಡು... ಔಟ್ ಮಾಡು... ಪಂದ್ಯದ ನಡುವೆ ಕಾವ್ಯ ಮಾರನ್ ರಿಯಾಕ್ಷನ್
VIDEO: ಔಟ್ ಮಾಡು... ಔಟ್ ಮಾಡು... ಪಂದ್ಯದ ನಡುವೆ ಕಾವ್ಯ ಮಾರನ್ ರಿಯಾಕ್ಷನ್
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ