Viral Video: ಕಾಡಿನ ಮಧ್ಯೆ ಸಂಚರಿಸುತ್ತಿದ್ದ ರೈಲನ್ನು ಸುತ್ತುವರಿದ ಕಾಡ್ಗಿಚ್ಚು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಝಮೊರಾ ವಾಯುವ್ಯ ಪ್ರಾಂತ್ಯದ ಟ್ರ್ಯಾಕ್ ಬಳಿ ಕಾಡಿಗೆ ಬೆಂಕಿ ಹತ್ತಿಕೊಂಡಿದ್ದು, ಮ್ಯಾಡ್ರಿಡ್‌ನಿಂದ ಫೆರೋಲ್‌ಗೆ ಹೋಗುತ್ತಿದ್ದ ರೈಲು ಕಾಡಿನ ಮಧ್ಯೆ ಸಿಲುಕಿಕೊಂಡಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Viral Video: ಕಾಡಿನ ಮಧ್ಯೆ ಸಂಚರಿಸುತ್ತಿದ್ದ ರೈಲನ್ನು ಸುತ್ತುವರಿದ ಕಾಡ್ಗಿಚ್ಚು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ರೈಲನ್ನು ಸುತ್ತುವರಿದ ಕಾಡ್ಗಿಚ್ಚು
Follow us
TV9 Web
| Updated By: Rakesh Nayak Manchi

Updated on:Jul 19, 2022 | 12:16 PM

ಜನರು ಅರಾಮವಾಗಿ ಪ್ರಯಾಣ ಮಾಡುತ್ತಿದ್ದ ರೈಲು ಅರಣ್ಯ ಪ್ರದೇಶವೊಂದರಲ್ಲಿ ನಿಲ್ಲಿಸಿದೆ. ಜನರು ಏನಾಯ್ತು ಎಂದು ಹೊರನೋಡಿದಾಗ ಇಡೀ ಕಾಡಿಗೇ ಕಾಡು ಧಗಧಗ ಎಂದು ಹೊತ್ತಿ ಉರಿಯುತ್ತಿತ್ತು. ಇದನ್ನು ಕಂಡ ಪ್ರಯಾಣಿಕರು ಗಾಬರಿಗೊಂದಿದ್ದಾರೆ. ಈ ದೃಶ್ಯಾವಳಿಯಲ್ಲಿ ಮೊಬೈಲ್​ ಕ್ಯಾಮರಾದ ಮೂಲಕ ಸೆರೆಹಿಡಿಯಲಾಗಿದ್ದು, ಸದ್ಯ ಕಾಡು ಬೆಂಕಿಗೆ ಆಹುತಿಯಾಗುತ್ತಿರುವ ವಿಡಿಯೋ ಸಾಮಾಜಿಕ ಜಾಳತಾಣದಲ್ಲಿ ವೈರಲ್ ಆಗುತ್ತಿದೆ. ರೈಲಿನ ಒಳಗಿಂದ ಜನರು ಕಾಡಿಗೆ ಬೆಂಕಿ ಹತ್ತಿಕೊಂಡಿರುವುದನ್ನು ನೋಡಿ ಗಾಬರಿಗೊಂಡಿರುವುದನ್ನು ವೈರಲ್ ವಿಡಿಯೋ (Viral Video) ತೋರಿಸುತ್ತದೆ.

ಝಮೊರಾ ವಾಯುವ್ಯ ಪ್ರಾಂತ್ಯದ ಟ್ರ್ಯಾಕ್ ಬಳಿ ಕಾಡಿಗೆ ಬೆಂಕಿ ಹತ್ತಿಕೊಂಡು ಬೆಂಕಿಯ ಜ್ವಾಲೆ ಮೇಲಕ್ಕೆ ಚಿಮ್ಮಿದೆ. ಈ ವೇಳೆ ಮ್ಯಾಡ್ರಿಡ್‌ನಿಂದ ಫೆರೋಲ್‌ಗೆ ಹೋಗುತ್ತಿದ್ದ ರೈಲು ಕಾಡಿನ ಮಧ್ಯೆ ಸಿಲುಕಿಕೊಂಡಿದ್ದು, ಕಾಡ್ಗಿಚ್ಚು ರೈಲನ್ನು ಸುತ್ತುವರಿದಿರುವುದನ್ನು ನೋಡಿ ಪ್ರಯಾಣಿಕರು ಗಾಬರಿಗೊಂಡರು. ಕೆಲವರು ಉದ್ವಿಗ್ನ ಕ್ಷಣದ ದೃಶ್ಯಾವಳಿಗಳನ್ನು ಮೊಬೈಲ್ ಮೂಲಕ ಸೆರೆಹಿಡಿದರು.

ವೈರಲ್ ವಿಡಿಯೋದಲ್ಲಿ ಇರುವಂತೆ, ಕ್ಯಾಮರಾವನ್ನು ಬಲಭಾಗಕ್ಕೆ ಕೊಂಡೊಯ್ದಾಗ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿದೆ. ಅದೇ ಕ್ಯಾಮರಾವನ್ನು ಎಡಭಾಗಕ್ಕೆ ಕೊಂಡೊಯ್ದಾಗಲೂ ಅದೇ ಮಾದರಿಯಲ್ಲಿ ಬೆಂಕಿ ಹತ್ತಿಕೊಂಡು ಹೊತ್ತಿ ಉರಿಯುವುದನ್ನು ಕಾಣಬಹುದು.

ಘಟನೆ ಬಗ್ಗೆ ಅರಿತ ರೈಲ್ವೇ ಇಲಾಖೆ, ಬೆಂಕಿಯ ಕುರಿತು ಎಚ್ಚರಿಕೆಯನ್ನು ನೀಡಿದ್ದಾರೆ. ಇದರ ಜೊತೆಗೆ ಒಟೆರೊ ಡಿ ಬೋಡಾಸ್ ಮತ್ತು ಝಮೊರಾ ನಡುವಿನ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸೂಚಿಸಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಎಲ್ಲಾ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮೂಲ ನಿಲ್ದಾಣಗಳಿಂದ ಈಗಾಗಲೇ ನಿರ್ಗಮಿಸಿದ ರೈಲು ಪ್ರಯಾಣಿಕರಿಗಾಗಿ ಝಮೊರಾ ಮತ್ತು ಸನಾಬ್ರಿಯಾ AV ನಿಲ್ದಾಣಗಳ ನಡುವೆ ಪರ್ಯಾಯ ರಸ್ತೆ ಸಾರಿಗೆ ಸೇವೆಯನ್ನು ಆಯೋಜಿಸಿದೆ ಎಂದು ರೆನ್ಫೆ ಟ್ವೀಟ್ ಮಾಡಿದೆ.

ಉತ್ತರ ಭಾರತ, ಪಾಕಿಸ್ತಾನವನ್ನು ಕಾಡಿದ್ದ ಶಾಖದ ಅಲೆ ಯುರೋಪ್​ಗೂ ಕಾಲಿಟ್ಟಿದ್ದು, ಫ್ರಾನ್ಸ್​, ಪೋರ್ಚುಗಲ್, ಸ್ಪೇನ್ ಮತ್ತು ಗ್ರೀಸ್​ನಲ್ಲಿ ಕಾಡಿಗೆ ಬೆಂಕಿ ಹತ್ತಿಕೊಂಡಿದೆ. ಕಾಡ್ಗಿಚ್ಚಿಗೆ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶಗಳು ನಾಶವಾಗಿವೆ. ಬೆಂಕಿ ನಂದಿಸುವ ವೇಳೆ ಅಗ್ನಿಶಾಮಕ ದಳದ ಹಲವು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಹವಾಮಾನ ಬದಲಾವಣೆಯೇ ಈ ದುರ್ಘಟನೆಗೆ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದು, ಪರಿಸ್ಥಿತಿ ಮತ್ತಷ್ಟು ಅಪಾಯಕಾರಿಯಾಗುವ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಸ್ಪೇನ್​ನಲ್ಲಿ 40 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚನ ತಾಪಮಾನ ದಾಖಲಾಗಿದ್ದು, ಶಾಖದ ಅಲೆಯಿಂದಾಗಿ ಕನಿಷ್ಠ 360 ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸರ್ಕಾರಿ ಕಾರ್ಲೋಸ್ ಹೆಲ್ತ್ ಇನ್ಸ್ಟಿಟ್ಯೂಟ್ ಅನ್ನು ಉಲ್ಲೇಖಿಸಿ ಲಾ ವ್ಯಾನ್​ಗಾರ್ಡಿಯಾ ಪತ್ರಿಕೆ ವರದಿ ಮಾಡಿದೆ.

Published On - 12:16 pm, Tue, 19 July 22

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ