Football: ಈಕೆ ಫುಟ್ಬಾಲ್ ಪ್ರಿಯೆ ಬಿಪಾಶಾ (Bipasha). ನನ್ನ ಜೀವನವೇ ಫುಟ್ಬಾಲ್, ನನ್ನ ಪ್ಯಾಷನ್ ಫುಟ್ಬಾಲ್. ಫುಟ್ಬಾಲ್ ಇಲ್ಲದೆ ನಾ ಬದುಕಿರಲಾರೆ. ಫುಟ್ಬಾಲ್ ನನ್ನ ಪ್ರೀತಿ, ನಾನು ಹುಟ್ಟಿರುವುದೇ ಪುಟ್ಬಾಲ್ಗಾಗಿ ಅಂತೆಲ್ಲ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಪರಿಚಯಿಸಿಕೊಂಡಿದ್ದಾರೆ ಅಥ್ಲೀಟ್ ಬಿಪಾಶಾ. ಇವರು ಫುಟ್ಬಾಲ್ಗಳ ಮೇಲೆ ನಡೆಯುತ್ತಾರೆ. ಒಂದೇ ಫುಟ್ಬಾಲ್ ಮೇಲೆ ಡ್ಯಾನ್ಸ್ ಮಾಡುತ್ತಾರೆ. ಒಂಟಿಗಾಲಿನಲ್ಲಿ ಫುಟ್ಬಾಲ್ ಮೇಲೆ ನಿಲ್ಲುತ್ತಾರೆ. ಒಂದೇ ಫುಟ್ಬಾಲ್ ಮೇಲೆ ನಿಂತು ಹಗ್ಗವನ್ನೂ ಆಡುತ್ತಾರೆ. ಹಣೆಯಿಂದ ಫುಟ್ಬಾಲ್ ಆಡುತ್ತಾರೆ. ಬೆರಳಿನಲ್ಲಿ ಫುಟ್ಬಾಲ್ ತಿರುಗಿಸುತ್ತಾರೆ. ಫುಟ್ಬಾಲ್ ಮೇಲೆ ನಿಂತು ಹೆಗಲಮೇಲೆ ಹತ್ತು ವರ್ಷದ ಮಗುವನ್ನೂ ಕೂರಿಸಿಕೊಂಡು ಹಗ್ಗವನ್ನು ಆಡುತ್ತಾರೆ. ಉದ್ದುದ್ದ ಇಟ್ಟಿಗೆಯನ್ನು ನಿಲ್ಲಿಸಿ ಅದರ ಮೇಲೆ ಫುಟ್ಬಾಲ್ ಇಟ್ಟು ಬ್ಯಾಲೆನ್ಸ್ ಮಾಡುತ್ತಾರೆ. ಇನ್ನೂ ಏನೇನೆಲ್ಲ!
ಇದನ್ನೂ ಓದಿ : Viral Video: ಅಲೋಪೇಸಿಯಾನೇ ಆಶೀರ್ವಾದ: ‘ಬಾಲ್ಡ್ ಈಸ್ ಬ್ಯೂಟಿಫುಲ್’ ನೀಹಾರ್ ಸಚದೇವ್
ಅಥ್ಲೀಟ್ ಬಿಪಾಶಾ ಆಗಸ್ಟ್ 25ರಂದು ಇನ್ಸ್ಟಾಗ್ರಾಂನಲ್ಲಿ ಈ ಕೆಳಗಿನ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇವರ ಈ ಬ್ಯಾಲೆನ್ಸಿಂಗ್ ಟೆಕ್ನಿಕ್ ಸಾಮಾನ್ಯರಿಗೆ ಸಾಧ್ಯವೇ ಆಗದು. ನಿಮ್ಮ ಕೌಶಲ ಮತ್ತು ಪ್ರತಿಭೆ ಅಗಾಧ ಎಂದು ನೆಟ್ಟಿಗರು ಬೆರಗಿನಿಂದ ಬೆನ್ನು ತಟ್ಟುತ್ತಿದ್ಧಾರೆ. ಈ ವಿಡಿಯೋ ಅನ್ನು ಈಗಾಗಲೇ ಸುಮಾರು 15 ಮಿಲಿಯನ್ ಜನರು ನೋಡಿದ್ದಾರೆ. 8.2 ಲಕ್ಷ ಜನರು ಲೈಕ್ ಮಾಡಿದ್ದಾರೆ.
ಮಹಿಳೆಯನ್ನು ಗೌರವಿಸಿ. ಕೇರಳದಿಂದ ರೆಸ್ಪೆಕ್ಟ್ ಬಟನ್. ನಿಮ್ಮ ಕೌಶಲ ಬೇರೆಯದೇ ಸ್ತರದಲ್ಲಿದೆ. ಮೆಸ್ಸಿ ರೋನಾಲ್ಡೋ ಕೂಡ ಇದನ್ನು ಮಾಡಲಾರರು. ನಿಮ್ಮ ಏಕಾಗ್ರತೆ ಅತ್ಯದ್ಭುತ. ನಿಮ್ಮ ಸ್ಥಿರತೆ ಮತ್ತು ಸಾಮರ್ಥ್ಯ ಇತರರು ಅನುಕರಿಸಿ ಅಭ್ಯಾಸ ಮಾಡಿದರೂ ಬಾರದು. ದಿಗ್ಗಜರು ಯಾವತ್ತೂ ತಮ್ಮ ಗುರಿಯ ಕಡೆ ಗಮನವಿಟ್ಟಿರುತ್ತಾರೆ… ಅಂತೆಲ್ಲ ನೆಟ್ಟಿಗರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.
ಇದೆಲ್ಲ ಹೇಗೆ ಸಾಧ್ಯ, ಕೌಶಲದೊಂದಿಗೆ ಸಾಹಸವೂ? ದೇವರು ನಿಮಗೆ ಒಳ್ಳೆಯದನ್ನು ಮಾಡಲಿ. ನಿಮ್ಮ ಈ ಸಾಧನೆಗೆ ತಕ್ಕ ಮಾನ್ಯತೆ ಸಿಗಲಿ ಎಂದು ಅನೇಕರು ಹಾರೈಸಿದ್ದಾರೆ. ಫುಟ್ಬಾಲ್ ಇಲ್ಲದೆ ಬದುಕಲಾರೆ ಎಂದು ಹೇಳಲು ಎಂಥ ಗಟ್ಟಿ ಎದೆ ಬೇಕು! ನೋಡಿದಿರಲ್ಲ…
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:47 pm, Thu, 14 September 23