ಕೆಲವೊಂದು ವಿಡಿಯೋಗಳು ಸಖತ್ ವೈರಲ್ ಆಗುತ್ತದೆ, ಭಾರತದಲ್ಲಿಯೇ ನಡೆಯುವ ಘಟನೆಗಳು ವೈರಲ್ ಆಗುತ್ತಿದೆ. ಅದು ಯಾವುದೇ ರೀತಿಯ ವಿಡಿಯೋಗಳು ಆಗಿದ್ದರು ನಮ್ಮನ್ನು ಹೆಚ್ಚು ಖುಷಿಪಡಿಸುತ್ತದೆ. ಇದೀಗ ಹಿಂದಿ ಸಾಂಗ್ ಗಳಿಗೆ ಜನ ದಟ್ಟಣೆ ಇರುವ ಪ್ರದೇಶಗಳಲ್ಲಿ ಡ್ಯಾನ್ಸ್ ಮಾಡುವುದು ಹೆಚ್ಚಾಗಿದೆ. ಇದೀಗ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಹಿಂದಿ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ಕಲೆ ಹೆಚ್ಚಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಭಾರತೀಯ ಮೂಲದ ಹುಡುಗಿಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ತನ್ನ ‘ನೃತ್ಯ ಮತ್ತು ಸಂಗೀತದ ಮೂಲಕ ವಿದೇಶಿ ಜನರು ಕೂಡ ಡ್ಯಾನ್ಸ್ ಮಾಡುವಂತೆ ಮಾಡಿ ಈಕೆಯ ನೃತ್ಯ.
ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಫ್ಯಾಶನ್ ಬ್ಲಾಗರ್ ಪೂಜಾ ಜೈಸ್ವಾಲ್ ಅವರು ಪೋಸ್ಟ್ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ, ಭಾರತೀಯ ಮಹಿಳೆ ಬಿಳಿ ವಸ್ತ್ರವನ್ನು ಧರಿಸಿ ಟೈಮ್ಸ್ ಸ್ಕ್ವೇರ್‌ನಲ್ಲಿ ಬಾದ್‌ಶಾ ಮತ್ತು ಸುನಂದಾ ಶರ್ಮಾ ಅವರ ‘ತೇರೆ ನಾಲ್ ನಾಚ್ನಾ’ ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು. ವೀಡಿಯೊದ ವಿಶೇಷತೆ ಏನೆಂದರೆ, ಕೆಲವು ನಿಮಿಷಗಳ ನಂತರ ದಾರಿಯಲ್ಲಿ ಹೋಗುತ್ತಿದ್ದ ಸೇರಿಕೊಂಡು ಹಾಡಿಗೆ ಗ್ರೂವ್ ಮಾಡಲು ಪ್ರಾರಂಭಿಸುತ್ತಾರೆ.
ವಿದೇಶಿಗರ ಜೊತೆಗೆ ಯಾವುದೇ ಪೂರ್ವಸಿದ್ಧತೆಯಿಲ್ಲದ ನೃತ್ಯವು ಅಮೋಘವಾಗಿದೆ. “ಟೈಮ್ಸ್ ಸ್ಕ್ವೇರ್‌ನಲ್ಲಿ ಕೆಲವು ಬಾಲಿವುಡ್ ತುಮ್ಕಾ ಅಪರಿಚಿತರೊಂದಿಗೆ (ಮುದ್ದಾದವರು) ಹೀರೋಯಿನ್ ಹೂನ್ ಮೈ ವಾಲಿ ಫೀಲ್ ಲಾಲ್” ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಈ ವಿಡಿಯೋ ಅಪ್ಲೋಡ್ ಆಗಿದ್ದು, ನೆಟ್ಟಿಗರಿಗೆ ಈ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ . ಇದು ಇಲ್ಲಿಯವರೆಗೆ 2.3 ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿದೆ.