
Honesty : ಮಹಿಳೆಯೊಬ್ಬಳು ತನ್ನ ಮೇಕೆಯೊಂದಿಗೆ (Goat) ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಳೆ. ಅಲ್ಲಿಗೆ ಬಂದ ಟಿಕೆಟ್ ಪರಿವೀಕ್ಷಕರು ಮೇಕೆಗೂ ಟಿಕೆಟ್ ಖರೀದಿಸಿದ್ದೀರಾ? ಎಂದು ಕೇಳುತ್ತಾರೆ. ಆಕೆ ನಗುತ್ತ, ಆತ್ಮವಿಶ್ವಾಸದಿಂದ ಮತ್ತು ಹೆಮ್ಮೆಯಿಂದ ಹೌದು, ಮೇಕೆಗೂ ಟಿಕೆಟ್ ಖರೀದಿಸಿದ್ದೇನೆ ಎಂದು ಹೇಳುತ್ತಾಳೆ. ಬೆಂಗಾಲಿಯಲ್ಲಿ ನಡೆದ ಈ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರ ಮನಸ್ಸನ್ನು ಗೆಲ್ಲುತ್ತಿದೆ. ಪಶ್ಚಿಮ ಬಂಗಾಳದ (West Bengal) ರೈಲಿನಲ್ಲಿ ಈ ವಿಡಿಯೋ ಸೆರೆಹಿಡಿಯಲಾಗಿದೆ. ನೆಟ್ಟಿಗರು ಹೃದಯಸ್ಪರ್ಶಿಯಾದ ವಿಡಿಯೋಗೆ ಪ್ರತಿಕ್ರಿಯಿಸಿ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ :Viral Video: 23 ಶಸ್ತ್ರಚಿಕಿತ್ಸೆಗಳ ನಂತರ ನನ್ನನ್ನು ನಾನೇ ಅಪ್ಪಿಕೊಂಡೆ, ಒಪ್ಪಿಕೊಂಡೆ
‘ಈಕೆ ತನ್ನ ಮೇಕೆಗೂ ರೈಲು ಟಿಕೆಟ್ ಖರೀದಿಸಿದ್ದಾಳೆ, ಈ ವಿಷಯವನ್ನು ಟಿಕೆಟ್ ಪರಿವೀಕ್ಷಕರಿಗೆ ಹೆಮ್ಮೆಯಿಂದ ಹೇಳುವಾಗ ಆಕೆಯ ಮುಖದಲ್ಲಿ ಅರಳಿದ ನಗುವನ್ನು ನೋಡಿ, ಅದ್ಭುತವಾಗಿದೆಯಲ್ಲ’ ಎಂದು X ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ ಐಎಎಸ್ ಅಧಿಕಾರಿ ಅವನೀಶ್ ಶರಣ.
ಸೆ. 6ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 80,000 ಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. 2,900 ಜನರು ಲೈಕ್ ಮಾಡಿದ್ದಾರೆ. ಸುಮಾರು 400 ಜನರು ರೀಪೋಸ್ಟ್ ಮಾಡಿದ್ದಾರೆ. ಅವಳ ನಗುವೇ ಅವಳ ಮನಸ್ಸನ್ನು ಹೇಳುತ್ತಿದೆ ಎಂದಿದ್ದಾರೆ ಒಬ್ಬರು. ನಿಜಕ್ಕೂ ನಮ್ಮ ದೇಶಕ್ಕೆ ಇಂಥ ಪ್ರಾಮಾಣಿಕ ಜನರು ಬೇಕು ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಕಾಡಿನ ರಾಜ ಕಾರುಗಳ ಮಧ್ಯೆ ಕಾರುಬಾರು ಮಾಡದೇ ಹೋದ ವಿಡಿಯೋ ವೈರಲ್
ಈ ನಗುವಿನ ಕಿರಣಗಳು ಕತ್ತಲೆಯಾದ ಮೂಲೆಗಳನ್ನು ಬೆಳಗುತ್ತಿದೆ, ಇವಳ ಸರಳತನ ಹೃದಯವನ್ನು ಸ್ಪರ್ಷಿಸುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಇವಳೇ ನಾಯಕಿ! ಇಂಥ ಸ್ತ್ರೀವಾದಿ ನಮಗೆ ಬೇಕು, ಆಕೆ ಹೇಗಿದ್ದರೂ ಏನು ಕೆಲಸ ಮಾಡಿಕೊಂಡಿದ್ದರೂ ಸರಿ ಎಂದಿದ್ದಾರೆ ಇನ್ನೊಬ್ಬರು. ಟಿಕೆಟ್ ಇಲ್ಲದೆಯೇ ಮುಂಬೈ ಸೇರಿದ ಅನೇಕ ಹೆಣ್ಣುಮಕ್ಕಳು ಇಂದು ಕೋಟ್ಯಾಧಿಪತಿಗಳಾಗಿದ್ದಾರೆ ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ