ಮೊಸಳೆ ನಿಮ್ಮ ಹತ್ತಿರಕ್ಕೆ ಬರುತ್ತಿದೆ ಅಂತ ತಿಳಿದಿದ್ದೇ ಭಯವಾಗಲು ಶುರುವಾಗತ್ತದೆ. ಮೊಸಳೆ ಕಂಡಿದ್ದೇ ದಿಕ್ಕಾಪಾಲಾಗಿ ಓಡುತ್ತೇವೆ. ಅಂಥಾದ್ರಲ್ಲಿ ಇದೀಗ ವೈರಲ್ ಆಗಿರುವ ವಿಡಿಯೊ ನೋಡಿದ್ದೆ ಮೂ ಜುಮ್ ಅನ್ನುತ್ತೆ! ಯುವತಿಯನ್ನು ಮೊಸಳೆ ಬಿಗಿಯಾಗಿ ಅಪ್ಪಿಕೊಂಡಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ (Social Media) ಫುಲ್ ವೈರಲ್ 9Viral video) ಆಗಿದೆ. ಕೇರ್ಟೇಕರ್ ಅವರು, ಡಾರ್ತ್ ಗೇಟರ್ ಎಂಬ ಹೆಸರಿನ ಮೊಸಳೆಯನ್ನು ಪರಿಚಯಿಸಿದ್ದಾರೆ. ಈ ಮೊಸಳೆ (Alligator) ನನ್ನ ಜೀವನದಲ್ಲಿ ಉತ್ತಮ ಸ್ನೇಹಿತ ಎಂದು ಹೇಳಿದ್ದಾರೆ. ಆದರೆ ವಿಡಿಯೊ ನೋಡಿದ ತಕ್ಷಣ ಕೇರ್ ಟೇಕರ್ನು (Care Taker) ಮೊಸಳೆ ಬಿಗಿದಪ್ಪಿ ಹಿಡಿದಿರುವುದನ್ನು ನೋಡಿದರೆ ಒಮ್ಮೆಲೆ ಭಯವಾಗುವುದಂತೂ ಸತ್ಯ.
ನಾನು, ಡಾರ್ತ್ ಗೇಟರ್ ಹೆಸರಿನ ಮೊಸಳೆಯನ್ನು ಅಪ್ಪಿಕೊಳ್ಳಲು ಹೋದಾಗ ಬೇಡ ಬೇಡ ಅನ್ನುತ್ತಾನೆ. ನನ್ನ ಬದಿಯಲ್ಲಿ ತೆವಳುತ್ತಾನೆ ಎಂದು ಕೇರ್ಟೇಕರ್ ವಿಡಿಯೊ ಶೀರ್ಷಿಕೆಯಲ್ಲಿ ಹೇಳಿದ್ದಾರೆ. ಯುವತಿಯನ್ನು ಬಿಗಿದಪ್ಪಿ ಹಿಡಿದ ಮೊಸಳೆಯ ದೃಶ್ಯ ನೋಡಿದಾಕ್ಷಣ ಭಯವಾಗುತ್ತದೆ. ಯುವತಿಯು ಧರಿಸಿದ್ದ ಉಡುಗೆಯ ಮೇಲೆ ಮೊಸಳೆ ಮೂತ್ರವಿಜರ್ಜಿಸುವ ಮೂಲಕ ರಾಡಿಗೊಳಿಸಿದೆ. ಅದನ್ನು ನೋಡಿದ ಯುವತಿ ಮೇಲೆದ್ದುಕೊಂಡಿದ್ದಾಳೆ. ಜೋರಾಗಿ ನಗುತ್ತಾ ಅಯ್ಯೋ ದೇವರೆ! ಏನಾಯ್ತು? ಎಂದು ಹೇಳುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಫುಲ್ ವೈರಲ್ ಆಗುತ್ತಿದ್ದಂತೆಯೇ 1,25 ಲಕ್ಕಕ್ಕೂ ಹೆಚ್ಚಿನ ಲೈಕ್ಸ್ಗಳು ಲಭ್ಯವಾಗಿದೆ. ಕೇರ್ಟೇಕರ್ ಮತ್ತು ಮೊಸಳೆಯ ಬಾಂಧವ್ಯದ ಬಗ್ಗೆ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಪ್ರಾಣಿಗಳಿಗೆ ಪ್ರೀತಿ ತೋರಿಸಿದಷ್ಟೇ ಅವೂ ನಮಗೆ ಪ್ರೀತಿ ಕೊಡುತ್ತವೆ ಎಂದು ಮತ್ತೊರ್ವರು ಹೇಳಿದ್ದಾರೆ. ನಿಮ್ಮ ಸ್ನೇಹ ಹೀಗೆಯೇ ಇರಲಿ ಎಂದು ಮತ್ತೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಲಿಗೇಟರ್ ನಿಮ್ಮನ್ನು ಹೆಚ್ಚು ಇಷ್ಟಪಡುತ್ತದೆ ಎಂದು ಕೆಲವರು ಹೇಳಿದ್ದಾರೆ. ಹೀಗೆ ನಾನಾ ರೀತಿಯ ಅಭಿಪ್ರಾಯಗಳನ್ನು ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Viral Video: ಕಡಲ ತೀರದಲ್ಲಿ ಅಲೆಗಳ ಜೊತೆ ಆಟವಾಡುತ್ತಿದ್ದ ನಾಗರ ಹಾವು!
Viral Video: ಶಾಲೆ ಪುನರಾರಂಭ; ಬ್ಯಾಂಡ್ ಬೀಟ್ಗೆ ಹೆಜ್ಜೆ ಹಾಕುತ್ತಾ ಶಾಲೆಯ ಒಳಗೆ ಸಾಗಿದ ಮಕ್ಕಳು; ವಿಡಿಯೋ ನೋಡಿ
Published On - 11:00 am, Wed, 17 November 21