Viral Video : ಈ ವಿಡಿಯೋ ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿದ್ದು ಇದೀಗ ವೈರಲ್ ಆಗುತ್ತಿದೆ. ಈತನಕ 2 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 6,000 ಕ್ಕಿಂತಲೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಹಾಗಿದ್ದರೆ ಯಾವುದು ಈ ವಿಡಿಯೋ? ಸುಷ್ಮಿತಾ ಸೇನ್ರ ದಿಲ್ಭರ್ ಹಾಡಿಗೆ ಯುವತಿಯೊಬ್ಬಳು ನಡುರಸ್ತೆಯಲ್ಲಿ ನರ್ತಿಸಿದ ವಿಡಿಯೋ ಇದು. ಇಷ್ಟೇ ಆದರೆ ಇದು ವೈರಲ್ ಆಗುತ್ತಿರಲಿಲ್ಲ. ಅಲ್ಲಿರುವ ಆಟೋ ಡ್ರೈವರ್ ಕೂಡ ಈ ಹಾಡಿಗೆ ನರ್ತಿಸಿದ್ದಾನೆ. ಹಾಗಾಗಿ ನೆಟ್ಮಂದಿ ಕುತೂಹಲದಿಂದ ನೋಡುತ್ತಿದ್ದಾರೆ.
अच्छा है आजकल रोड साइड लोगों को कंपनी मिल जाती है pic.twitter.com/PoLcw8U5Vs
— 24 (@Chilled_Yogi) October 6, 2022
ಹೀಗೆ ನರ್ತಿಸಿದ ಆಟೋ ಡ್ರೈವರ್ನ ಆತ್ಮವಿಶ್ವಾಸವನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ. ಬಹಳಷ್ಟು ಜನರಿಗೆ ಈ ವಿಡಿಯೋ ಉತ್ಸಾಹವನ್ನು ತುಂಬಿದೆ ‘ಆಹ್ ಎಂಥ ಖುಷಿಯಾಯ್ತು ಈ ವಿಡಿಯೋ ನೋಡಿ’ ಎಂದಿದ್ದಾರೆ ನೆಟ್ಟಿಗರೊಬ್ಬರು. ‘ಇದು ತಮಾಷೆ ಎನ್ನಿಸುತ್ತಿದೆ ನೋಡಲು’ ಎಂದಿದ್ದಾರೆ ಮತ್ತೊಬ್ಬರು. ‘ಹೀಗೆ ನರ್ತಿಸಲು ಧೈರ್ಯ ಬೇಕು. ನರ್ತಿಸಿ ನರ್ತಿಸಿ’ ಎಂದಿದ್ಧಾರೆ ಮಗದೊಬ್ಬರು.
ನೃತ್ಯ ಕೊಡುವ ಸ್ಪೂರ್ತಿ ಶಕ್ತಿ ಮತ್ತು ಖುಷಿ ಬಹಳ ದೊಡ್ಡದು. ಒಮ್ಮೆ ಹುಕಿ ಹೊಕ್ಕಿತೋ ತಾವು ಎಲ್ಲಿದ್ದೇವೆ ಸುತ್ತಮುತ್ತ ಏನಿದೆ ಯಾರಿದ್ದಾರೆ ಎನ್ನುವುದನ್ನೂ ಮರೆತು ನರ್ತಿಸಬೇಕು ಎನ್ನಿಸುತ್ತದೆ ಕೆಲವರಿಗೆ. ಹೀಗೆ ಮನರಂಜನೆ ಒದಗಿದಾಗ ಜನರೂ ಹುರುಪುಗೊಳ್ಳುತ್ತಾರೆ.
ಈಗಿನ ದಿನಗಳಲ್ಲಿ ರಸ್ತೆಗಳಲ್ಲಿ ಕುಣಿಯುವುದೇ ಭೇಷ್ ಹೀಗೆ ಯಾರಾದರೂ ಸಾಥ್ ಕೊಡುತ್ತಾರೆ ಎಂಬ ಶೀರ್ಷಿಕೆ ಈ ವಿಡಿಯೋಗಿದೆ. ನಿಮಗೇನು ಅನ್ನಿಸುತ್ತೆ ಈ ಶೀರ್ಷಿಕೆ ಮತ್ತು ವಿಡಿಯೋ ನೋಡಿದಾಗ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:08 am, Sat, 8 October 22