ಜಾಗಿಂಗ್ ಹೋಗುತ್ತಿದ್ದೇನೆ ಎಂಬ ನೆಪದಲ್ಲಿ ಗರ್ಲ್ ಫ್ರೆಂಡ್ ಮೀಟ್ ಮಾಡಲು ಹೋದ ಪತಿಯನ್ನು, ಹೆಂಡತಿ ರೆಡ್ ಹ್ಯಾಂಡ್ಆಗಿ ಹಿಡಿದಿದ್ದಾಳೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್ ವೈರಲ್ ಆಗಿದೆ. ಕೋಪಗೊಂಡ ಹೆಂಡತಿ, ರೆಡ್ ಹ್ಯಾಂಡ್ಆಗಿ ಪತಿಯನ್ನ ಗಂಡನನ್ನು ಹಿಡಿದು ಏರು ಧ್ವನಿಯಲ್ಲಿ ನಿಂದಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಮಹಿಳೆಯ ಗಂಡ ಮತ್ತು ಆತನ ಗರ್ಲ್ ಫ್ರೆಂಡ್ ಪಾರ್ಕ್ನಲ್ಲಿ ಬೆಂಚ್ ಮೇಲೆ ಕುಳಿತಿರುತ್ತಾರೆ. ಗೆಳತಿ ಆತನ ಭುಜದ ಮೇಲೆ ಮಲಗಿಕೊಳ್ಳುತ್ತಿದ್ದಂತೆಯೇ ಆತನ ಹೆಂಡತಿ ಹಿಂಬದಿಯಿಂದ ಮಾತನಾಡಿಸಿದ್ದಾಳೆ. ಆ ಜಾಗದಿಂದ ಗಂಡ ಓಡಿ ಹೋಗುತ್ತಿರುವ ದೃಶ್ಯವನ್ನು ಮಹಿಳೆ ಕ್ಯಾಮರದಲ್ಲಿ ಸೆರೆ ಹಿಡಿದಿದ್ದಾಳೆ.
ಪ್ರತಿದಿನವೂ ವ್ಯಕ್ತಿ ಜಾಗಿಂಗ್ ಹೋಗುತ್ತಾನೆ, ಗಂಟೆಗಟ್ಟಲೇ ಜಾಗಿಂಗ್ ಮಾಡುತ್ತಾನೆ, ಪ್ರತಿನಿತ್ಯವೂ ಜಾಗಿಂಗ್ ತೆರಳುತ್ತಾನೆ ಆದರೆ ತೂಕ ಮಾತ್ರ ಇಳಿಯುತ್ತಿಲ್ಲ ಎಂದು ಅನುಮಾನಗೊಂಡ ಹೆಂಡತಿ ಆತನನ್ನು ಹಿಂಬಾಲಿಸಿದ್ದಾಳೆ.
ಪಾರ್ಕ್ನಲ್ಲಿ ಬೇರೊಂದು ಯುವತಿಯ ಜತೆಗೆ ಕುಳಿತಿರುವುದನ್ನು ನೋಡಿದ ಆಕೆ ಗಾಬರಿಗೊಂಡಿದ್ದಾಳೆ. ತಕ್ಷಣವೇ ಅವರಿಬ್ಬರು ಕುಳಿತಿದ್ದ ಜಾಗಕ್ಕೆ ಹೋಗಿ ಗಂಡನನ್ನು ಮಾತನಾಡಿಸುತ್ತಿದ್ದಂತೆಯೇ ಆತ ಓಡಿ ಹೋಗಿದ್ದಾನೆ. ಮಹಿಳೆ ಗಂಡನಿಗೆ ಏರು ಧ್ವನಿಯಲ್ಲಿ ನಿಂದಿಸುತ್ತಿರುವ ದೃಶ್ಯವನ್ನು ನೋಡಬಹುದು.
ಇದನ್ನೂ ಓದಿ:
Viral Video: ಅಳಿಲಿಗೆ ಆಟ, ಬೆಕ್ಕಿಗೆ ಸಂಕಟ!; ಇದೇನಿದು ಹೊಸ ಗಾದೆ? ತಮಾಷೆಯ ಈ ವಿಡಿಯೊ ನೋಡಿ
Viral Video: ಸಫಾರಿ ಮಾಡುತ್ತಿರುವ ಜೀಪ್ ಒಳಗೆ ನುಗ್ಗಿದ ಸಿಂಹಿಣಿ; ನಂತರ ಏನಾಯ್ತು? ಅಚ್ಚರಿಯ ವಿಡಿಯೊ ಇಲ್ಲಿದೆ
Published On - 12:44 pm, Thu, 30 September 21