Viral Video: ಪರ ಮಹಿಳೆಯೊಂದಿಗೆ ಪತಿಯ ಸರಸ ಸಲ್ಲಾಪ ನೋಡಿದ ಪತ್ನಿ; ಮುಂದೆ ಪತಿ ಪಾಡು ಹೇಳಬೇಕೇ?

| Updated By: Rakesh Nayak Manchi

Updated on: Sep 25, 2022 | 2:52 PM

ಮದುವೆಯಾದರೂ ಪರ ಮಹಿಳೆಯೊಂದಿಗೆ ಹೊಟೇಲ್​ನಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ತನ್ನ ಪತಿಯನ್ನು ನೋಡಿದ ಮಹಿಳೆ ಕಾಲಿನಲ್ಲಿದ್ದ ಚಪ್ಪಲಿ ಕೈಗೆತ್ತಿಕೊಂಡು ಹಿಗ್ಗಾಮುಗ್ಗ ಥಳಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

Viral Video: ಪರ ಮಹಿಳೆಯೊಂದಿಗೆ ಪತಿಯ ಸರಸ ಸಲ್ಲಾಪ ನೋಡಿದ ಪತ್ನಿ; ಮುಂದೆ ಪತಿ ಪಾಡು ಹೇಳಬೇಕೇ?
ಪರ ಮಹಿಳೆಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ಪತ್ನಿ ಕೈಗೆ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ
Image Credit source: ANI
Follow us on

ಮದುವೆಯಾದರೂ ಪರ ಮಹಿಳೆಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೈಗೆ ರೆಡ್​ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಬೆಡ್​ರೂಮ್​ನಲ್ಲಿ ಮಹಿಳೆಯೊಂದಿಗೆ ಇದ್ದ ತನ್ನ ಪತಿಯನ್ನು ನೋಡಿದ ಮಹಿಳೆ ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಹಿತಿ ಪ್ರಕಾರ, ಉತ್ತರ ಪ್ರದೇಶದ ಆಗ್ರಾದ ಹೋಟೆಲ್​ವೊಂದರ ಕೊಠಡಿಯಲ್ಲಿ ತನ್ನ ಪತಿ ಇನ್ನೊಬ್ಬ ಮಹಿಳೆಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ಮಹಿಳೆ ಇಬ್ಬರನ್ನು ಹಿಡಿದು ಶೂ ಚಪ್ಪಲಿಗಳಿಂದ ಥಳಿಸಿದ್ದಾಳೆ. ವಾಸ್ತವವಾಗಿ, ದಿಯೋರಿ ರಸ್ತೆಯ ನಿವಾಸಿ ದಿನೇಶ್, ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಅವರ ಪತ್ನಿ ನೀಲಂ ಆರೋಪಿಸಿದ್ದಾರೆ. ಈ ಬಗ್ಗೆ ಇಬ್ಬರ ನಡುವೆ ಸಾಕಷ್ಟು ಜಗಳ ನಡೆದಿದ್ದು, ಕೋಪಗೊಂಡ ನೀಲಂ ಮನೆ ಬಿಟ್ಟು ತಾಯಿ ಮನೆಗೆ ಹೋಗಿದ್ದಾಳೆ ಎಂದು ವರದಿಯಾಗಿದೆ.

ಸೋಮವಾರ ತನ್ನ ಪತಿ ದೆಹಲಿ ಗೇಟ್‌ನಲ್ಲಿರುವ ಹೋಟೆಲ್‌ನಲ್ಲಿ ಮಹಿಳೆಯೊಂದಿಗೆ ಇರುವುದು ತಿಳಿದುಬಂದಿದೆ. ಅದರಂತೆ ತಕ್ಷಣ ತನ್ನ ಸಹೋದರನೊಂದಿಗೆ ಆ ಹೋಟೆಲ್‌ಗೆ ತೆರಳಿ ಬಾಗಿಲು ತಟ್ಟಿದ್ದಾಳೆ. ಈ ವೇಳೆ ತನ್ನ ಪತಿ ದಿನೇಶ್ ಬೇರೆ ಮಹಿಳೆಯ ಜೊತೆ ಇರುವುದನ್ನು ನೋಡಿದ್ದಾಳೆ. ಕೂಡಲೇ ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ಕೈಗೆತ್ತಿಕೊಂಡು ಏಟಿನ ಸುರಿಮಳೆಯನ್ನೇ ಗೈದಿದ್ದಾಳೆ. ಪತಿಯೊಂದಿಗಿದ್ದ ಮಹಿಳೆಗೂ ಥಳಿಸಿದ್ದಲ್ಲದೆ ಆಕೆಯ ಕೂದಲನ್ನು ಎಳೆದಾಡಿದ್ದಾಳೆ. ಪತ್ನಿಯ ಆಕ್ರೋಶ ಅವತಾರವನ್ನ ನೋಡಿದ ದಿನೇಶ್ “ತಪ್ಪು ನಡೆದಿದೆ, ಮತ್ತೆ ಮರುಕಳಿಸುವುದಿಲ್ಲ, ಈ ಬಾರಿ ಕ್ಷಮಿಸಿ ಬಿಡು” ಅಂತ ಕ್ಷಮೆ ಕೇಳುತ್ತಾನೆ. ಆದರೂ ನೀಲಂ ನೆತ್ತಿ ಮೇಲಿದ್ದ ಕೋಪ ತಣ್ಣಗಾಗದೆ ತರಾಟೆಗೆ ತೆಗೆದುಕೊಳ್ಳುವುದನ್ನು ಮುಂದುವರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಇತ್ತ ಮಹಿಳೆ ಕೂಡ ದಿನೇಶ್ ಪತ್ನಿ ಬಳಿ ಅಳುತ್ತಾ ಕ್ಷಮೆ ಕೇಳಿದ್ದಾಳೆ.

Published On - 2:52 pm, Sun, 25 September 22