Viral Video: ಭರ್ಜರಿ ಬೇಟೆಯಾಡಿದ ಏಡಿ; ಅಪರೂಪದ ವಿಡಿಯೋ ನೋಡಿ ಅಚ್ಚರಿಗೊಂಡ ನೆಟ್ಟಿಗರು
ಏಡಿ ಆಮೆಯನ್ನು ಬೇಟೆಯಾಡಿರುವುದನ್ನು ನೀವು ಸಾಮಾನ್ಯವಾಗಿ ಕಂಡಿರಲು ಸಾಧ್ಯವಿಲ್ಲ. ಆದರೆ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ತೀರಾ ಅಪರೂಪದ ದೃಶ್ಯಾವಳಿಯನ್ನು ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
ಏಡಿಗಳು ಎಲ್ಲರಿಗೂ ಚಿರಪರಿಚಿತ. ಜಗತ್ತಿನಲ್ಲಿ 4 ಸಾವಿರಕ್ಕೂ ಹೆಚ್ಚು ಜಾತಿಯ ಏಡಿಗಳಿದ್ದು, ಇವುಗಳು ತುಂಬಾ ಅಪಾಯಕಾರಿಯೂ ಆಗಿವೆ. ಸಣ್ಣದಾಗಿರಲಿ, ದೊಡ್ಡದಾಗಿರಲಿ ಮುಟ್ಟಲು ಹೋದರೆ ಕಚ್ಚಲು ಬಂದೇ ಬರುತ್ತವೆ. ಅನೇಕ ಕಡೆ ಜನರು ಏಡಿಗಳನ್ನೂ ತಿನ್ನುತ್ತಾರೆ. ಒಂದಷ್ಟು ಜನರ ನೆಚ್ಚಿನ ಭಕ್ಷ್ಯ ಕೂಡ ಆಗಿದೆ. ಏಡಿಗಳ ದೊಡ್ಡ ವೈಶಿಷ್ಟ್ಯವೆಂದರೆ ಅವು ಸಸ್ಯಾಹಾರಿ ಮತ್ತು ಮಾಂಸಾಹಾರಿ. ಇಂತಹ ಏಡಿಯ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಚ್ಚರಿ ಎಂಬಂತೆ ಆಮೆಯೊಂದನ್ನು ಬೇಟೆಯಾಡಿ ಎಳೆದೊಯ್ಯುತ್ತಿರುವುದನ್ನು ಕಾಣಬಹುದು.
ವಿಡಿಯೋದಲ್ಲಿ, ಸಣ್ಣ ಗಾತ್ರದ ಆಮೆಯೊಂದು ತೆವಲುತ್ತಾ ಹೋಗುತ್ತಿರುತ್ತದೆ. ಇದನ್ನು ನೋಡಿದ ಆಮೆಗಿಂತ ಸ್ವಲ್ಪ ದೊಡ್ಡ ಗಾತ್ರದ ಏಡಿ ಭಾನುವಾರದ ಬಾಟೂಟ ಸಿಕ್ಕಿತು ಅಂತ ಅದರತ್ತ ಓಡೋಡಿ ಬಂದು ಹಿಡಿಯುತ್ತದೆ. ಅಷ್ಟೇ ಅಲ್ಲದೆ ತನ್ನ ಬೇಟೆಯನ್ನು ಎಳೆದುಕೊಂಡ ಹೋಗುವುದನ್ನು ಕಾಣಬಹುದು. ಆದರೆ ಏಡಿ ಆಮೆಯನ್ನು ಬೇಟೆಯಾಡಿರುವುದನ್ನು ನೀವು ಸಾಮಾನ್ಯವಾಗಿ ಕಂಡಿರಲು ಸಾಧ್ಯವಿಲ್ಲ. ತೀರಾ ಅಪರೂಪದ ವಿಡಿಯೋ ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
ಈ ವೀಡಿಯೊವನ್ನು natureisbruta1 ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈವರೆಗೆ 28 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಗಳನ್ನು ಮಾಡಲಾಗಿದ್ದು, ನೂರಾರು ಲೈಕ್ಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರೊಬ್ಬರು ಉಲ್ಲಾಸದಾಯಿಕ ವಿಡಿಯೋ ಎಂದು ಹೇಳಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ಬುದ್ದಿವಂತ ಸರ್ವಶಕ್ತನಾದ ದೇವರು ಇದನ್ನು ಸೃಷ್ಟಿಸಿದನು” ಎಂದಿದ್ದಾರೆ.
— Nature is Brutal (@natureisbruta1) September 20, 2022
ಮತ್ತಷ್ಟು ವೈರಲ್ ವಿಡಿಯೋ ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
Published On - 1:33 pm, Sun, 25 September 22