Viral Video: ಪ್ರಿತಿಯಲ್ಲಿ ಮುಳುಗಿದ ಮೀನುಗಳ ಪ್ರಣಯದಾಟ; ಚುಂಬನದ ವಿಡಿಯೋ ವೈರಲ್
ಮೀನುಗಳು ಪ್ರೀತಿ ಮಾಡುವುದನ್ನು ಎಂದಾದರು ನೀವು ನೋಡಿದ್ದೀರಾ? ಹಾಗಿದ್ದರೆ ಇಲ್ಲಿದೆ ವಿಡಿಯೋ ನೋಡಿ. ಎರಡು ಮೀನುಗಳು ಪರಸ್ಪ ಪ್ರೀತಿಯಲ್ಲಿ ಮುಳುಗಿ ಚುಂಬಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ನಿಸರ್ಗವು ಮನಸ್ಸಿಗೆ ಮುದ ನೀಡುವಷ್ಟು ಸೌಂದರ್ಯ. ಈ ಪ್ರಕೃತಿಯಲ್ಲಿನ ಸಕಲ ಜೀವ ರಾಶಿಗಳು ವಿಭಿನ್ನವಾಗಿರುವುದರ ಜೊತೆಗೆ ಬೇರೆಬೇರೆ ರೀತಿಯ ನಡವಳಿಕೆಯನ್ನು ಹೊಂದಿರುತ್ತವೆ. ಕೆಲವೊಮ್ಮೆ ಅವುಗಳ ಕಾದಾಟ, ಕೆಲವೊಂದು ಚಮತ್ಕಾರ, ದಾಳಿ ಮಾಡುವ, ತುಂಟಾಟ ಮೆರೆಯುವ ಮತ್ತು ಕೆಲವೊಮ್ಮೆ ಮೋಜಿನಲ್ಲಿ ಮುಳುಗಿರುವ ಜೀವಿಗಳು ಹೆಚ್ಚಾಗಿ ಕಂಡುಬರುತ್ತವೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದಾಗಿದೆ. ಇಂತಹ ವಿಡಿಯೋಗಳನ್ನು ನೋಡಲು ನೆಟ್ಟಿಗರು ಇಷ್ಟಪಡುತ್ತಾರೆ. ಇದೀಗ ಅಂತಹದ್ದೇ ಒಂದು ವಿಡಿಯೋ ವೈರಲ್ (Video Viral) ಆಗುತ್ತಿದ್ದು, ಇದರಲ್ಲಿ ಎರಡು ಮೀನುಗಳು ಪ್ರೀತಿಯಲ್ಲಿ ಮುಳುಗಿರುವುದನ್ನು ಕಾಣಬಹುದು.
ವೈರಲ್ ವಿಡಿಯೋದಲ್ಲಿ ಇರುವಂತೆ, ಅಕ್ವೇರಿಯಂನಲ್ಲಿ ಒಂದಷ್ಟು ಮೀನುಗಳು ತಮ್ಮಷ್ಟಕ್ಕೆ ಈಜಾಡುತ್ತಿರುವುದನ್ನು ಕಾಣಬಹುದು. ಆ ಎಲ್ಲಾ ಮೀನುಗಳು ಮತ್ತು ನೈಸರ್ಗಿಕ ನೋಟದ ನಡುವೆ ಎರಡು ದೊಡ್ಡ ಮೀನುಗಳು ಪರಸ್ಪರ ಪ್ರೀತಿಯಲ್ಲಿ ಮುಳುಗಿ ಲಿಪ್ಲಾಕ್ ಮಾಡಿವೆ. ಬಹಳ ಹೊತ್ತು ಎರಡು ಮೀನುಗಳು ಚುಂಬಿಸುವುದರಲ್ಲಿ ಸಮಯ ಕಳೆದಿವೆ. ಕ್ಯಾಮರಾದಲ್ಲಿ ಸೆರೆಹಿಡಿದ ಈ ಸುಂದರ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಬಹಳ ಇಷ್ಟಪಡುತ್ತಿದ್ದಾರೆ. ಮೊದಲ ಬಾರಿಗೆ ಮೀನುಗಳ ರೊಮ್ಯಾಂಟಿಕ್ ಶೈಲಿಯನ್ನು ನೋಡಿರುವುದಾಗಿ ನೆಟ್ಟಿಗರು ಹೇಳಿದ್ದಾರೆ.
ಈ ವಿಡಿಯೋವನ್ನು Naturelife_ok ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 28 ಸಾವಿರಕ್ಕೂ ಅಧಿಕ ಲೈಕ್ಗಳು ಬಂದಿವೆ. ವಿಡಿಯೋ ನೋಡಿದ ಒಂದಷ್ಟು ಮಂದಿ ಮೀನುಗಳ ಪ್ರಣಯವನ್ನು ಇಷ್ಟಪಟ್ಟಿದ್ದಾರೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, “ವಾಸ್ತವದಲ್ಲಿ ಮೀನುಗಳು ಚುಂಬಿಸುತ್ತಿಲ್ಲ, ಬದಲಾಗಿ ಜಗಳವಾಡುತ್ತಿವೆ” ಎಂದಿದ್ದಾರೆ. ಆದರೆ ಈ ಮೀನುಗಳು ಪ್ರೀತಿಯಲ್ಲಿವೆ ಎಂದು ಅನೇಕ ಬಳಕೆದಾರರು ಹೇಳಿದ್ದಾರೆ. ಈ ನಡುವೆ ಮತ್ತೊಬ್ಬರು ಕಾಮೆಂಟ್ ಮಾಡಿ, “ಅಂತಹ ಸುಂದರವಾದ ಮೀನನ್ನು ಯಾರಾದರೂ ಹೇಗೆ ತಿನ್ನಬಹುದು” ಎಂದು ಪ್ರಶ್ನಿಸಿದ್ದಾರೆ.
View this post on Instagram
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
Published On - 4:13 pm, Sun, 25 September 22