Viral Video : ಎಣ್ಣೆಬಾಣಲೆಯಲ್ಲಿ ಮೀಯುತ್ತಿರುವ ಇಲಿ, ಪಾದಗಳಿಂದ ಹಿಟ್ಟು ನಾದುತ್ತಿರುವ ಯುವಕರು

Kneading Flour Dough with Feet : ಕಾಶ್ಮೀರದ ಬಡಗಾಮ್​ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಚಹಾ ಅಂಗಡಿಯ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಅಂಗಡಿಯನ್ನೂ ಸೀಲ್ ಮಾಡಿದ್ದಾರೆ.

Viral Video : ಎಣ್ಣೆಬಾಣಲೆಯಲ್ಲಿ ಮೀಯುತ್ತಿರುವ ಇಲಿ, ಪಾದಗಳಿಂದ ಹಿಟ್ಟು ನಾದುತ್ತಿರುವ ಯುವಕರು
ಕಾಲಿನಿಂದ ಹಿಟ್ಟು ನಾದುತ್ತಿರುವುದು, ಎಣ್ಣೆಬಾಣಲಿಯಲ್ಲಿ ಇಲಿ.
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 26, 2022 | 10:36 AM

Viral Video : ಇಷ್ಟುವರ್ಷಗಳಲ್ಲಿ ಇಂಥ ಅದೆಷ್ಟು ವಿಡಿಯೋಗಳು ವೈರಲ್ ಆಗಿವೆಯೋ ಏನೋ. ಆದರೂ ನಮ್ಮ ಜನ ಪಾನಿಪುರಿ, ಗೋಲ್​ಗಪ್ಪಾ, ಸಮೋಸಾ, ದಹೀಪುರಿ ಹೀಗೆ ಸ್ಟ್ರೀಟ್​ ಚಾಟ್​ನ ವ್ಯಾಮೋಹದಿಂದ ಹೊರಬರಲು ಸಾಧ್ಯವಾಗುತ್ತಲೇ ಇಲ್ಲ. ಸಣ್ಣಪುಟ್ಟ ಅಂಗಡಿಗಳಿಗೆ ಪೂರೈಕೆಯಾಗುವ ಖಾದ್ಯಗಳನ್ನು ಎಂಥ ಸ್ಥಳದಲ್ಲಿ ತಯಾರಿಸುತ್ತಾರೆ ಎಂಬ ಚಿತ್ರಣವನ್ನು ಇಲ್ಲಿ ವಿವರಿಸುವುದು ಅನಗತ್ಯ ಎನ್ನಿಸುತ್ತದೆ. ಏಕೆಂದರೆ ಈ ಹಿಂದೆ ನೋಡಿದ ವಿಡಿಯೋಗಳ ತುಣುಕುಗಳು ನಿಮ್ಮ ನೆನಪಿನ ಕೋಶದಲ್ಲಿ ಚೆನ್ನಾಗಿಯೇ ಅಚ್ಚಾಗಿರಲು ಸಾಕು. ಈಗ ವೈರಲ್ ಆಗಿರುವ ದೃಶ್ಯಗಳನ್ನು ನೋಡಿ. ದೃಶ್ಯ 1 : ಇಬ್ಬರು ಯುವಕರು ಹಿಟ್ಟನ್ನು ಪಾದಗಳಿಂದ ತುಳಿದು ಹದ ಮಾಡುತ್ತಿದ್ದಾರೆ. ದೃಶ್ಯ 2 : ದೊಡ್ಡ ಬಾಣಲೆಯಲ್ಲಿರುವ ಎಣ್ಣೆಯಲ್ಲಿ ಬಿದ್ದ ಇಲಿ ಹೊರಬರಲು ಆಗದೆ ಬಿದ್ದು ಹೊರಳಾಡುತ್ತಿದೆ.

ಕಾಶ್ಮೀರದ ಬಡಗಾಮ್​ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಚಹಾ ಅಂಗಡಿಯ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ ಅಷ್ಟೇ ಅಲ್ಲ ಅಂಗಡಿಯನ್ನು ಸೀಲ್ ಮಾಡಿದ್ದಾರೆ. ಆರೋಪಿಯನ್ನು ಬಡಗಾಮ್​ನ ಓಂಪುರಾದ ಇಮ್ರಾನ್​ ಹೋಟೆಲ್​ನ ಇಮ್ರಾನ್​ ಹುಸೇನ್​ ಹಲ್ವಾಯಿ ಎಂದು ಗುರುತಿಸಲಾಗಿದೆ.

ಬಡಗಾಮ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಶುಚಿರಹಿತ ವಾತಾವರಣದಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಕ್ಕಾಗಿ ಸ್ಥಳೀಯರು ಪೊಲೀಸರನ್ನು ಶ್ಲಾಘಿಸಿದ್ದಾರೆ.

ರಸ್ತೆಬದಿಯ ತಿಂಡಿಗಳ ರುಚಿಗೆ ಮಾರುಹೋಗುವವರು ಇನ್ನಾದರೂ ಯೋಚಿಸಿ. ಎಲ್ಲಿ ಹೇಗೆ ತಯಾರಿಸುತ್ತಾರೆ ಎಂಬುದನ್ನು ತಿಳಿದುಕೊಂಡು ತಿನ್ನುವಂತಿದ್ದರೆ ಸರಿ. ಇಲ್ಲವಾದಲ್ಲಿ ಅನಾರೋಗ್ಯ ತಪ್ಪಿದ್ದಲ್ಲ.

ಒಂದು ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:29 am, Mon, 26 September 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್