Viral Video: ಕುಂಟುತ್ತಾ ನಡೆಯುತ್ತಿದ್ದ ವ್ಯಕ್ತಿಯನ್ನು ಗೇಲಿ ಮಾಡಿದ ಬುದ್ಧಿವಂತ ಕೋಳಿ

ಗಾಯಾಳು ವ್ಯಕ್ತಿ ಕೋಲಿನ ಸಹಾಯದಿಂದ ಕುಂಟುತ್ತಾ ನಡೆಯುತ್ತಿದ್ದರೆ ಹಿಂಬದಿಯಲ್ಲಿ ಬುದ್ಧಿವಂತ ಕೋಳಿ ಆತನನ್ನು ಗೇಲಿ ಮಾಡುವ ನಿಟ್ಟಿನಲ್ಲಿ ನಾಟಕೀಯವಾಗಿ ಕುಂಟುತ್ತಾ ಬಂದಿದೆ. ಮುಂದೇನಾಯ್ತು ಎಂಬುದನ್ನು ಈ ವಿಡಿಯೋದಲ್ಲಿ ನೋಡಿ..

Viral Video: ಕುಂಟುತ್ತಾ ನಡೆಯುತ್ತಿದ್ದ ವ್ಯಕ್ತಿಯನ್ನು ಗೇಲಿ ಮಾಡಿದ ಬುದ್ಧಿವಂತ ಕೋಳಿ
ಕುಂಟುತ್ತಾ ನಡೆಯುತ್ತಿದ್ದ ವ್ಯಕ್ತಿಯನ್ನು ಗೇಲಿ ಮಾಡಿದ ಬುದ್ಧಿವಂತ ಕೋಳಿ
Follow us
TV9 Web
| Updated By: Rakesh Nayak Manchi

Updated on:Sep 25, 2022 | 11:59 AM

ಸಾಮಾಜಿಕ ಮಾಧ್ಯಮದ ಜಗತ್ತು ತಮಾಷೆಯ ಚಿತ್ರಗಳು ಮತ್ತು ವೀಡಿಯೊಗಳಿಂದ ತುಂಬಿದೆ. ಇಂತಹ ವಿಡಿಯೋಗಳನ್ನು ನೆಟಿಜನ್‌ಗಳು ಬಹಳ ಉತ್ಸಾಹದಿಂದ ವೀಕ್ಷಿಸಲು ಇಷ್ಟಪಡುತ್ತಾರೆ. ಸದ್ಯ ಕೋಳಿಯ ನಡೆಯೊಂದು ನಗದವರನ್ನು ಕೂಡ ನಗಿಸುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಕೋಳಿಯನ್ನು ನಾಟಿ ಕೋಳಿ ಎಂದು ಕರೆದಿದ್ದಾರೆ. ವಾಸ್ತವವಾಗಿ, ಕೋಳಿಯೊಂದು ಕಾಲು ನೋವಿನ ವ್ಯಕ್ತಿಯನ್ನು ಗೇಲಿ ಮಾಡುವುದನ್ನು ಕಾಣಬಹುದು. ಕೋಳಿ ಆ ವ್ಯಕ್ತಿಯನ್ನು ಹೇಗೆ ಗೇಲಿ ಮಾಡಿದೆ ಎಂಬುದನ್ನು ತಿಳಿಯಲು ಈ ವೈರಲ್ ವಿಡಿಯೋ (Viral Video) ವೀಕ್ಷಣೆ ಮಾಡಿ. ಇದು ಭಾನುವಾರದ ರಜಾದಿನದಂದು ರಿಲಾಕ್ಸ್ ಮಾಡುತ್ತಿರುವ ನಿಮ್ಮ ಮನಸ್ಸಿಗೆ ಮುದ ನೀಡುವಂತಿದೆ.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಗಾಯಗೊಂಡ ವ್ಯಕ್ತಿಯೊಬ್ಬರು ಕಾಲಿಗೆ ಬ್ಯಾಂಡೇಜ್ ಹಾಕಿದ್ದಾರೆ. ರಸ್ತೆಯಲ್ಲಿ ಊರುಗೋಲು ಸಹಾಯದಿಂದ ಡೊಂಕ ಹಾಕಿಕೊಂಡು ನಡೆಯುತ್ತಿರುತ್ತಾರೆ. ಇವರ ಹಿಂಬದಿಯಲ್ಲಿ ಕೋಳಿಯೊಂದು ಗಾಯಾಳು ವ್ಯಕ್ತಿಯನ್ನು ಗೇಲಿ ಮಾಡಲು ಮುಂದಾಗಿದೆ. ಅದರಂತೆ ಕೋಳಿಯು ಗಾಯಾಳು ವ್ಯಕ್ತಿಯಂತೆ ಕುಂಟುತ್ತಾ ನಡೆಯುತ್ತದೆ. ಇದನ್ನು ನೋಡಿದ ಆ ವ್ಯಕ್ತಿ ತನ್ನ ಕೈಯಲ್ಲಿದ್ದ ಕೋಲಿನಲ್ಲಿ ಓಡಿಸುತ್ತಾನೆ. ಈ ವೇಳೆ ಕೋಳಿ ನಾಟಕವನ್ನು ಬಿಟ್ಟು ತನ್ನ ಎರಡು ಕಾಲುಗಳಲ್ಲಿ ಓಡಿಹೋಗುತ್ತದೆ. ಈ ವಿಡಿಯೋವನ್ನು ನೋಡಿದಾಗ ನಿಮ್ಮ ಗೆಳೆಯರ ಬಳಗದಲ್ಲಿ ನಡೆದ ಇಂತಹ ಸವಿನೆನಪನ್ನು ಮರುಕಳಿಸುವಂತೆ ಮಾಡಬಹುದು.

ಈ ವಿಡಿಯೋವನ್ನು Gabriele Corno ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಕೋಳಿ ರೈತನನ್ನು ಗೇಲಿ ಮಾಡುತ್ತಿದೆ” ಎಂದು ಶೀರ್ಷಿಕೆ ಬರೆಯಲಾಗಿದೆ. 18 ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಆಗಿದ್ದು, 63 ಸಾವಿರಕ್ಕೂ ಅಧಿಕ ಲೈಕ್​ಗಳು, 13ಸಾವಿರಕ್ಕೂ ಅಧಿಕ ರೀಟ್ವೀಟ್​ಗಳು ಸಾವಿರಕ್ಕೂ ಅಧಿಕ ಪ್ರತಿಕ್ರಿಯೆಗಳು ಬಂದಿವೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published On - 11:57 am, Sun, 25 September 22