Viral Video: ಭೀಕರ ಅಪಘಾತಕ್ಕೆ ಬೈಕ್ ಸವಾರ ಐದು ಪಲ್ಟಿ; ವೈರಲ್ ವಿಡಿಯೋ ಇಲ್ಲಿದೆ

ಕೇವಲ ಎಂಟು ಸೆಕೆಂಡುಗಳಷ್ಟೆ, ಕಾರಿಗೆ ಡಿಕ್ಕಿ ಹೊಡೆದು ಐದು ಪಲ್ಟಿ ಹೊಡೆದು ನೆಲಕ್ಕೆ ಅಪ್ಪಳಿಸಿದ ಬೈಕ್ ಸವಾರ ಮತ್ತೆ ಏಳಲೇ ಇಲ್ಲವೆಂಬತೆ ತೋರಿಸುತ್ತಿದೆ ಈ ವೈರಲ್ ವಿಡಿಯೋ.

Viral Video: ಭೀಕರ ಅಪಘಾತಕ್ಕೆ ಬೈಕ್ ಸವಾರ ಐದು ಪಲ್ಟಿ; ವೈರಲ್ ವಿಡಿಯೋ ಇಲ್ಲಿದೆ
ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ
Follow us
TV9 Web
| Updated By: Rakesh Nayak Manchi

Updated on:Sep 25, 2022 | 10:31 AM

ನೀವು ಕೆಲವೊಮ್ಮೆ ಹಿಂದೆ ಮುಂದೆ ನೋಡದೆ ಯಾವುದೋ ಯೋಚನೆ ಮಾಡಿಕೊಂಡು ವಾಹನವನ್ನು ಚಲಾಯಿಸುತ್ತಿರಾ? ಎಂದಿಗೂ ಈ ತಪ್ಪನ್ನು ಮಾಡದಿರಿ. ಇದಕ್ಕೆ ಪೂರಕವಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೀವು ನೋಡಿದರೆ ಎಂದಿಗೂ ಮೈಮರೆತು ವಾಹನ ಚಲಾಯಿಸುವುದಿಲ್ಲ. ರಸ್ತೆಗಳಲ್ಲಿ ನಡೆಯುತ್ತಿರಲಿ ಅಥವಾ  ವಾಹನದಲ್ಲಿ ಹೋಗುತ್ತಿರುವಾಗಲೇ ಆಗಲಿ ಬಹಳ ಎಚ್ಚರಿಕೆಯಿಂದ ಇರಬೇಕು ಎನ್ನಲಾಗುತ್ತದೆ. ಇದಕ್ಕೆ ಕಾರಣ ರಸ್ತೆ ಅಪಘಾತಗಳೆಲ್ಲವೂ ಆಕಸ್ಮಿಕವಾಗಿ ನಡೆಯುವಂತಹದ್ದು. ಎಲ್ಲಿಂದ ಯಾವ ವಾಹನ ಬಂದು ಡಿಕ್ಕಿ ಹೊಡೆಯುತ್ತದೆ ಎಂದು ತಿಳಿಯುವುದೇ ಇಲ್ಲ. ಇದೀಗ ವೈರಲ್ ಆಗುತ್ತಿರುವ ವಿಡಿಯೋ (Viral video)ದಲ್ಲಿ ಬೈಕ್ ಮತ್ತು ಕಾರಿನ ನಡುವೆ ನಡೆದಿ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೇಲಕ್ಕೆ ಎಸೆದು ಐದು ಪಲ್ಟಿ ಹೊಡೆದು ರಸ್ತೆಗೆ ಅಪ್ಪಳಿಸುವುದನ್ನು ನೋಡುವಾಗ ಮೈ ಜುಮ್ಮೆನ್ನುತ್ತದೆ.

ವಿಡಿಯೋದಲ್ಲಿ ಕಾಣುವಂತೆ, ವೇಗವಾಗಿ ಬೈಕ್ ಓಡಿಸುತ್ತಿದ್ದ ವ್ಯಕ್ತಿಯೊಬ್ಬ ಎಡಕ್ಕೆ ತಿರುಗಿಸಿ ಇನ್ನೊಂದು ರಸ್ತೆಗೆ ಹೋಗಲು ಯತ್ನಿಸಿದ್ದಾನೆ. ಈ ವೇಳೆ ಮುಂಭಾಗದಿಂದ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಮೇಲಕ್ಕೆ ಎಸೆಯಲ್ಪಟ್ಟು ಕಾರಿನ ಮುಂಭಾಗದಿಂದ ಹಿಂಭಾಗಕ್ಕೆ ಐದು ಪಲ್ಟಿ ಹೊಡೆದು ನಂತರ ರಸ್ತೆಗೆ ಅಪ್ಪಳಿಸಿದ್ದಾನೆ. ನಂತರ ಬೈಕ್ ಸವಾರನ ಯಾವುದೇ ಚಲನೆ ಇರುವುದಿಲ್ಲ. ಬಹುಶಃ ಜೀವಕ್ಕೆ ಹಾನಿಯಾಗಿರಬಹುದು.

ಈ ಹೃದಯ ವಿದ್ರಾವಕ ವೀಡಿಯೊವನ್ನು AccidentTraffi3 ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 8 ಸೆಕೆಂಡ್‌ಗಳ ಈ ವೀಡಿಯೋವನ್ನು ಇದುವರೆಗೆ 24 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, ನೂರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ ಮತ್ತು ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published On - 10:31 am, Sun, 25 September 22