AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನಿದ್ರಿಸುತ್ತಿದ್ದ ನಾಯಿಯನ್ನು ಎಬ್ಬಿಸಲು ಬೌಬೌ ಎಂದ ಸ್ಮಾರ್ಟ್ ಗಿಳಿ; ಮಿಮಿಕ್ರಿಗೆ ನೆಟ್ಟಿಗರು ಫಿದಾ

ಈ ವಿಡಿಯೋದಲ್ಲಿ ಬೌಬೌ ಎಂದು ಕೇಳುವ ಶಬ್ದವನ್ನು ನೀವು ಅದು ನಾಯಿಯೇ ಬೊಗಳುತ್ತಿದೆ ಎಂದು ಭಾವಿಸಿದರೆ ಅದು ತಪ್ಪು. ನಾಯಿಯಂತೆ ಬೊಗಳುತ್ತಿರುವುದು ಮುದ್ದಾದ ಗಿಳಿರಾಜ ಎಂದು ತಿಳಿದಾಗ ನೀವು ಅಚ್ಚರಿಗೊಳ್ಳುವುದರಲ್ಲಿ ಅನುಮಾನವೇ ಇಲ್ಲ.

Viral Video: ನಿದ್ರಿಸುತ್ತಿದ್ದ ನಾಯಿಯನ್ನು ಎಬ್ಬಿಸಲು ಬೌಬೌ ಎಂದ ಸ್ಮಾರ್ಟ್ ಗಿಳಿ; ಮಿಮಿಕ್ರಿಗೆ ನೆಟ್ಟಿಗರು ಫಿದಾ
ನಿದ್ರಿಸುತ್ತಿದ್ದ ನಾಯಿಯನ್ನು ಎಬ್ಬಿಸಲು ನಾಯಿಯಂತೆ ಬೊಗಳಿದ ಗಿಳಿ
TV9 Web
| Updated By: Rakesh Nayak Manchi|

Updated on:Sep 25, 2022 | 11:12 AM

Share

ಗಿಳಿಗಳು ಮಾನವರ ಧ್ವನಿಯನ್ನು ನಿಖರವಾಗಿ ಅನುಕರಿಸುವ ಸಾಮರ್ಥ್ಯವನ್ನು ಹೊಂದಿವೆ. ಒಂದಷ್ಟು ಮಂದಿ ಗಿಳಿ ಮನುಷ್ಯರಂತೆ ಮಾತಾಡುತ್ತವೆ ಎಂಬುದನ್ನು ಕೇಳಿರುತ್ತಾರೆ, ಕೆಲವರು ಗಿಳಿ ಮಾತನಾಡುವುದನ್ನು ನೋಡಿರುತ್ತಾರೆ. ಬಹಳ ಮುದ್ದಾದ ಈ ಪಕ್ಷಿಗಳು ಮನುಷ್ಯರನ್ನು ಮಾತ್ರವಲ್ಲದೆ ವಿವಿಧ ರೀತಿಯ ಪ್ರಾಣಿಗಳನ್ನು ಒಳಗೊಂಡಂತೆ ಇತರ ಹಲವು ರೀತಿಯ ಶಬ್ದಗಳನ್ನು ಸಹ ಹೊರಹಾಕುತ್ತವೆ. ಇದನ್ನೆಲ್ಲ ಗಮನಿಸಿದಾಗ ಗಿಳಿಗಳು ಮಿಮಿಕ್ರಿ ಮಾಡುವುದರಲ್ಲಿ ಎತ್ತಿದ ಕೈ ಎಂದು ಎನಿಸದೆ ಇರಲಾರದು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ (Viral Video) ಆಗುತ್ತಿದ್ದು, ಹಾಯಾಗಿ ನಿದ್ರಿಸುತ್ತಿರುವ ನಾಯಿಯನ್ನು ಎಬ್ಬಿಸಲು ಗಿಳಿರಾಜ ನಾಯಿಯ ಧ್ವನಿಯನ್ನು ಅನುಕರಿಸುವುದನ್ನು ಕಾಣಬಹುದು. ಗಿಳಿಯ ಮಿಮಿಕ್ರಿ ನೋಡಿದ ನೆಟ್ಟಿಗರು ಸಖತ್ ಫಿದಾ ಆಗಿದ್ದಾರೆ. ರಜಾ ದಿನವಾದ ಇಂದು ನೀವು ನಿಮ್ಮ ಮನಸ್ಸಿಗೆ ರಿಲಾಕ್ಸ್ ನೀಡಬೇಕೆಂದಿದ್ದರೆ ಈ ವಿಡಿಯೋ ನೋಡಿ.

ನಾಯಿಯಂತೆ ಗಿಳಿ ಬೊಗಳುತ್ತಿರುವ ಸದ್ದು ಕೇಳಿದರೆ ಅದು ನಾಯಿಯೇ ಬೊಗಳುತ್ತಿದೆ ಎಂದು ನಿಮಗೆ ಅನಿಸಬಹುದು. ಆದರೆ ಅದು ನಾಯಿ ಬೊಗಳುತ್ತಿಲ್ಲ, ಬದಲಾಗಿ ಗಿಳಿ ನಾಯಿಯ ಧ್ವನಿಯನ್ನು ಅನುಕರಿಸುತ್ತಿದೆ ಎಂದು ತಿಳಿದಾಗ ನೀವು ಅಚ್ಚರಿಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ವೀಡಿಯೋದಲ್ಲಿ, ನಾಯಿಯೊಂದು ತನ್ನ ಹಾಸಿಗೆಯ ಮೇಲೆ ಆರಾಮವಾಗಿ ನಿದ್ರಿಸುತ್ತಿರುವುದನ್ನು ನೀವು ನೋಡಬಹುದು. ಇದರ ಬಳಿ ಬಂದ ಬೆಳ್ಳಗಿರುವ ಗಿಳಿಯೊಂದು ಮೊದಲು ತನ್ನದೇ ಧ್ವನಿಯಲ್ಲಿ ಕೂಗಿ ನಾಯಿಯನ್ನು ಎಬ್ಬಿಸಲು ಪ್ರಯತ್ನಿಸುತ್ತದೆ. ನಾಯಿ ಏಳುವುದನ್ನು ಗಮನಿಸಿದ ಆ ಗಿಳಿರಾಯ ನಿನ್ನನ್ನು ನಾನು ಮಂಗ ಮಾಡಿಯೇ ಎಬ್ಬಿಸುತ್ತೇನೆ ಎಂದು ಮಿಮಿಕ್ರಿ ಮಾಡಲು ಮುಂದಾಗಿದೆ . ಅದರಂತೆ ಗಿಳಿರಾಯ ನಾಯಿಯ ಧ್ವನಿಯಲ್ಲಿ ಬೊಗಳಲು ಆರಂಭಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ಮನುಷ್ಯರನ್ನು ಅನುಕರಿಸುವ ಗಿಳಿಗಳನ್ನು ನೀವು ಬಹಳಷ್ಟು ನೋಡಿರಬಹುದು, ಆದರೆ ಗಿಳಿ ನಾಯಿಯಂತೆ ಬೊಗಳುವುದನ್ನು ಕಾಣುವ ಈ ವಿಡಿಯೋ ತೀರಾ ಅಪರೂಪವಾಗಿದೆ. ಈ ವಿಡಿಯೋ ತುಂಬಾ ತಮಾಷೆ ಮತ್ತು ಅದ್ಭುತವಾಗಿದೆ, ಇದನ್ನು ನೋಡಿದ ನಂತರ ನೀವು ಕೂಡ ದಿಗ್ಭ್ರಮೆಗೊಂಡಿರುತ್ತೀರಿ. ಅಲ್ವಾ?

ನಾಯಿಯನ್ನು ಅನುಕರಿಸುವ ಗಿಳಿಯ ಈ ಬೆರಗುಗೊಳಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ವಿಶಾಲ್ ಕಶ್ಯಪ್ ಎಂಬವರು ಹಂಚಿಕೊಂಡಿದೆ. ಈ ವೀಡಿಯೊವನ್ನು ಇಲ್ಲಿಯವರೆಗೆ 3 ಮಿಲಿಯನ್‌ಗಿಂತಲೂ ಹೆಚ್ಚು ಅಂದರೆ 30 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದ್ದು, 1.65 ಲಕ್ಷಕ್ಕೂ ಅಧಿಕ ಲೈಕ್​ಗಳು ಬಂದಿವೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published On - 11:12 am, Sun, 25 September 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್