ಕಲಬುರಗಿ: ವಿಶ್ರಾಂತಿ ಪಡೆಯಲೆಂದು ಜಮೀನಿನಲ್ಲಿ ಮಲಗಿದ್ದ ಮಹಿಳೆ ಮೇಲೆ ನಾಗರಹಾವೊಂದು ಹೆಡೆಬಿಚ್ಚಿ ನಿಂತ ಘಟನೆಯೊಂದು ಜಿಲ್ಲೆಯ ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ನಡೆದಿದೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಭಯಬೀತಿಗೊಂಡಿದ್ದಾರೆ. ಗ್ರಾಮದ ಭಾಗಮ್ಮ ಬಡದಾಳ್ ಎಂಬುವರು ತಮ್ಮ ಜಮೀನಿನಲ್ಲಿ ಮಲಗಿದ್ದಾಗ ಮೈಮೇಲೆ ಬಂದ ನಾಗರಹಾವು ಹೆಡೆಎತ್ತಿ ನಿಂತುಕೊಂಡಿದೆ. ಈ ವೇಳೆ ಪ್ರಾಣ ಭೀತಿ ಅನುಭವಿಸಿದ ಮಹಿಳೆ ಕೈ ಮುಗಿದು ದೇವರಲ್ಲಿ ಬೇಡಿಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಇರುವಂತೆ, ಭಾಗಮ್ಮ ಅವರ ಜಮೀನಿನಲ್ಲಿ ವಿಶ್ರಾಂತಿ ಪಡೆಯಲೆಂದೇ ಒಂದು ಮಲಗುವ ಮಂಚ ಇದೆ. ಇದರಲ್ಲಿ ಮಲಗಿಕೊಂಡಿದ್ದ ಭಾಗಮನ್ನ ಮೇಲೆ ನಾಗರಹಾವೊಂದು ಹತ್ತಿ ಹೆಡೆಬಿಚ್ಚಿ ನಿಂತುಕೊಂಡಿದೆ. ಇದನ್ನು ತಿಳಿದ ಭಾಗಮ್ಮ ಯಾವುದೇ ಆತುರದ ನಿರ್ಧಾರಗಳನ್ನು ಕೈಗೊಳ್ಳದೆ ಪ್ರಾಭ ಭಯದಿಂದಲೇ “ಕಾಪಾಡು ಶ್ರೀಶೈಲ ಮಲ್ಲಯ್ಯ” ಎಂದು ಕೈಗಳನ್ನು ಮುಗಿದು ಪ್ರಾರ್ಥಿಸಿದ್ದಾರೆ. ಇದಾಗಿ ಕೆಲಹೊತ್ತಿನ ನಂತರ ಮಹಿಳೆಗೆ ಯಾವುದೇ ತೊಂದರೆಯನ್ನು ನೀಡದೆ ನಾಗರಹಾವು ಇಳಿದು ಹೋಗಿದೆ. ನಿನ್ನೆ ಮಧ್ಯಾಹ್ನ ನಡೆದಿರೋ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Sat, 27 August 22