AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಕಾಲಿಗೆ ಬಿದ್ದು ಮತ ಯಾಚಿಸಿದ ರಾಜಸ್ಥಾನ ವಿದ್ಯಾರ್ಥಿ ಸಂಘದ ಮುಖಂಡರು

Rajasthan : ವಿದ್ಯಾರ್ಥಿ ಯೂನಿಯನ್ ಚುನಾವಣೆಗೆ ಮುನ್ನ ರಾಜಸ್ಥಾನದ ವಿದ್ಯಾರ್ಥಿ ನಾಯಕರು ಹುಡುಗಿಯರ ಕಾಲಿಗೆ ಬಿದ್ದು ಮತ ಕೇಳುತ್ತಿರುವ ವಿಡಿಯೋ ವೈರಲ್ ಆಗಿದೆ.

Viral Video : ಕಾಲಿಗೆ ಬಿದ್ದು ಮತ ಯಾಚಿಸಿದ ರಾಜಸ್ಥಾನ ವಿದ್ಯಾರ್ಥಿ ಸಂಘದ ಮುಖಂಡರು
ವೋಟಿಗಾಗಿ ವಿದ್ಯಾರ್ಥಿನಿಯರ ಕಾಲಿಗೆ ಬೀಳುತ್ತಿರುವ ವಿದ್ಯಾರ್ಥಿ ಲೀಡರ್
TV9 Web
| Edited By: ಶ್ರೀದೇವಿ ಕಳಸದ|

Updated on:Aug 27, 2022 | 11:29 AM

Share

Viral Video: ಮತಯಾಚನೆಗೆ ಏನೆಲ್ಲ ಸರ್ಕಸ್​ ಮಾಡುತ್ತಾರೆ ನಮ್ಮ ಜನನಾಯಕರು ಎಂದು ಕಣ್ಣಾರೆ ಕಂಡಿದ್ದೇವೆ. ಅನುಭವಿಸಿದ್ದೇವೆ. ಇಲ್ಲಿ ನೋಡಿ ರಾಜಸ್ಥಾನದ ವಿದ್ಯಾರ್ಥಿ ಸಂಘದ ಮುಖಂಡರುಗಳು ಕಾಲೇಜು ಹುಡುಗಿಯರ ಕಾಲಿಗೆ ಬಿದ್ದು, ನಮಸ್ಕರಿಸಿ, ರಸ್ತೆಯಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಿ ತಮಗೇ ಮತ ಹಾಕುವಂತೆ ದುಂಬಾಲು ಬಿದ್ದಿದ್ದಾರೆ. ರಾಜಸ್ಥಾನದ ಬರಾನ್‌ನಲ್ಲಿ ಇಂಥ ವಿಲಕ್ಷಣ ಘಟನೆ ನಡೆದಿದೆ. ಈ ಪ್ರಚಾರತಂತ್ರವನ್ನು ಕಂಡ ಸ್ಥಳೀಯರು ಅಚ್ಚರಿಗೊಳಗಾಗಿದ್ದಾರೆ. ಇಂಥ ಕೆಲವು ಫೋಟೋ, ವೀಡಿಯೊ ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಇಲ್ಲಿರುವ ಈ ಕ್ಲಿಪ್ ಟ್ವಿಟ್ಟರ್‌ನಲ್ಲಿ ಅನ್‌ಸೀನ್ ಇಂಡಿಯಾ ಎಂಬ ಪುಟದಲ್ಲಿ ಹಂಚಿಕೆಯಾಗಿದೆ.

ವಿದ್ಯಾರ್ಥಿ ಸಂಘದ ಚುನಾವಣೆ ಎರಡು ವರ್ಷಗಳ ನಂತರ ಶುಕ್ರವಾರ ರಾಜಸ್ಥಾನದಲ್ಲಿ ನಡೆದಿದೆ. ಇಂದು ಬೆಳಗ್ಗೆ ಮತ ಎಣಿಕೆ ಆರಂಭಗೊಂಡಿದೆ. ಮಧ್ಯಾಹ್ನದ ನಂತರ ಫಲಿತಾಂಶ ಹೊರಬೀಳಲಿದೆ.

ಆದರೆ ಈ ತಂತ್ರ ಯೋಗ್ಯವೆ? ಅಭ್ಯರ್ಥಿಯು ನಡೆನುಡಿಯಲ್ಲಿಯೇ ತನ್ನ ಬಗ್ಗೆ ಭರವಸೆ ಹುಟ್ಟಿಸುವ ಗಟ್ಟಿ ವ್ಯಕ್ತಿತ್ವದಿಂದ ಕೂಡಿರಬೇಕಲ್ಲವೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:23 am, Sat, 27 August 22

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್