Viral Video: ನಿನ್ನಂಥ ಸೊಸೆಯು ಇಲ್ಲ, ನಿಮ್ಮಂಥ ಅತ್ತೆ ಇಲ್ಲಾ…
MIL and DIL : ಡಚ್ ಸೊಸೆ, ಭಾರತೀಯ ಅತ್ತೆ. ಇವರಿಬ್ಬರೂ ಸೇರಿ ಮಾಡುವ ವೈವಿಧ್ಯಮಯ ಬೆಳಗಿನ ತಿಂಡಿ ತಿನಿಸುಗಳ ವಿಡಿಯೋಕ್ಕೆ 6.4 ಮಿಲಿಯನ್ ನೆಟ್ಟಿಗರು ಫಿದಾ!
Viral Video : ಭಾರತದ ಅತ್ತೆ ಮತ್ತು ಡಚ್ ಸೊಸೆಯ ಬಾಂಧವ್ಯದ ವಿಡಿಯೋ ಈಗ ವೈರಲ್ ಆಗಿದೆ. ತನ್ನ ಸೊಸೆಗೆ ದಕ್ಷಿಣ ಭಾರತದ ವಿವಿಧ ತಿಂಡಿ ತಿನಿಸುಗಳನ್ನು ಮಾಡುವುದು ಹೇಗೆ ಎಂದು ಅತ್ತೆ ಕಲಿಸುತ್ತಿರುವ ವಿಡಿಯೋ ಇದಾಗಿದೆ. Prabhu Visha ಎನ್ನುವ ಇನ್ಸ್ಟಾಗ್ರಾಂ ಖಾತೆದಾರರು ತಮ್ಮ ತಾಯಿ ಮತ್ತು ಹೆಂಡತಿಯ ಈ ವಿಡಿಯೋ ಹಂಚಿಕೊಂಡಿದ್ದಾರೆ. ‘ಕೈಯಿಂದ ತಿನ್ನುವುದೇ ಒಂದು ವಿಶಿಷ್ಟ ಭಾವನೆ. ಅದನ್ನು ವಿವರಿಸುವುದಕ್ಕಿಂತ ಅನುಭವಿಸುವುದು ಉತ್ತಮ’ ಎಂಬ ಒಕ್ಕಣೆಯನ್ನು ಅವರು ಬರೆದಿದ್ದಾರೆ. ‘ದಕ್ಷಿಣ ಭಾರತದ ಬೆಳಗಿನ ತಿಂಡಿಯ ಪಟ್ಟಿಯಲ್ಲಿ ಇನ್ನೂ ಸಾಕಷ್ಟಿವೆ. ಮುಂದಿನ ರೀಲ್ಗೆ ಅವಿರಲಿ’ ಎಂದು ಹೇಳಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. 6.4 ಮಿಲಿಯನ್ ವೀಕ್ಷಣೆಗಳನ್ನು ಈ ವಿಡಿಯೋ ಪಡೆದಿದೆ.
ಇದನ್ನೂ ಓದಿ
View this post on Instagram
ಬಾಂಧವ್ಯ ವೃದ್ಧಿಗೆ ಏನೆಲ್ಲಾ ಉಪಾಯಗಳಿವೆಯಲ್ಲ!?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:07 pm, Sat, 27 August 22