ಪ್ರತಿಭೆ ಅನಾವರಣಕ್ಕೆ ಅಲಂಕರಿಸಿದ ವೇದಿಕೆಯೇ ಆಗಬೇಕೆಂದಿಲ್ಲ, ತಾವು ನಿಂತಲ್ಲೇ ತಮ್ಮ ಪ್ರತಿಭೆಯನ್ನು ಹೊರಹಾಕಿ ಜನರ ಮನಸ್ಸನ್ನು ಗೆಲ್ಲಬಹುದು ಎಂಬುದಕ್ಕೆ ಈ ಬಸ್ ನಿರ್ವಾಹಕನೇ ಸಾಕ್ಷಿ. ತನ್ನ ಗಾಯನಿಂದಲೇ ಕೆಎಸ್ಆರ್ಟಿಸಿ ಬಸ್ ಕಂಡೆಕ್ಟರ್ ಪ್ರಯಾಣಿಕರನ್ನು ಮನಸೋಲುವಂತೆ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದ್ದು, ನೆಟ್ಟಿಗರು ಕೂಡ ಅವರ ಗಾಯನಕ್ಕೆ ಫಿದಾ ಆಗಿದ್ದಾರೆ.
ಚಾಮರಾಜನಗರ ಹೋಗೆನಕಲ್ಗೆ ತೆರಳುತ್ತಿದ್ದ ಸರ್ಕಾರಿ ಬಸ್ನ ನಿರ್ವಾಹಕರಾಗಿರುವ ಹೇಮಂತ್, ಎಂದಿನಂತೆ ಪ್ರಯಾಣಿಕರಿಗೆ ಟಿಕೆಟ್ ಕೊಟ್ಟು ಬೈಕ್ ಹಿಡಿದು ಹಾಡಲು ಆರಂಭಿಸಿದ್ದಾರೆ. ಡಾ.ರಾಜ್ಕುಮಾರ್ ಅವರು ಅಭಿನಯದ ‘ನಿನ್ನ ಕಂಗಳ ಬಿಸಿಯ ಹನಿಗಳು’ ಎಂಬ ಹಾಡನ್ನು ಹಾಡಿ ಪ್ರಯಾಣಿಕರನ್ನು ರಂಜಿಸಿದ್ದಾರೆ.
ಹೇಮಂತ್ ಅವರು ತಮ್ಮ ಸುಮಧುರ ಕಂಠದಿಂದ ಅಣ್ಣವ್ರ ಹಾಡನ್ನು ಹಾಡಲು ಪ್ರಾರಂಭಿಸಿದಾಗ ಬಸ್ನಲ್ಲಿದ್ದ ಪ್ರಯಾಣಿಕರು ತಮ್ಮ ಮೊಬೈಲ್ ಕ್ಯಾಮರಾವನ್ನು ತೆರೆದು ವಿಡಿಯೋ ಮಾಡಿಕೊಂಡಿದ್ದಾರೆ. ಹೀಗೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹೇಮಂತ್ ಅವರ ಗಾಯನ ಪ್ರತಿಭೆಗೆ ನೆಟ್ಟಿಗರು ಕೂಡ ಮನಸೋತಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಹೇಮಂತ್ ಅವರ ವೈರಲ್ ವಿಡಿಯೋ ಇಲ್ಲಿದೆ:
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published On - 7:37 pm, Tue, 20 September 22