Viral Video: ಚಿರತೆಯ ಭೀಕರ ದಾಳಿ, ತನ್ನೆಲ್ಲಾ ಶಕ್ತಿ ಪ್ರಯೋಗಿಸಿದ ಹಸು ಏನಾಯ್ತು? ಇಲ್ಲಿದೆ ನೋಡಿ ವಿಡಿಯೋ

ಚಿರತೆಯೊಂದು ಹಸುವಿನ ಪ್ರಾಣ ಹಿಂಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ, ವಿಡಿಯೋ ನೋಡಿದ ನೆಟ್ಟಿಗರು ಕೂಡ ಆಕ್ರೋಶಗೊಂಡಿದ್ದಾರೆ.

Viral Video: ಚಿರತೆಯ ಭೀಕರ ದಾಳಿ, ತನ್ನೆಲ್ಲಾ ಶಕ್ತಿ ಪ್ರಯೋಗಿಸಿದ ಹಸು ಏನಾಯ್ತು? ಇಲ್ಲಿದೆ ನೋಡಿ ವಿಡಿಯೋ
ಹಸುವಿನ ಮೇಲೆ ಚಿರತೆ ದಾಳಿ
Edited By:

Updated on: Aug 16, 2022 | 5:00 PM

ಕಾಡು ಪ್ರಾಣಿಗಳು ಹಳ್ಳಿಗಳಿಗೆ ನುಗ್ಗಿ ಮನುಷ್ಯರ ಮೇಲೆ, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುವ ಅಪಾಯಕಾರಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಕಾಡಿನ ಮೃಗಗಳು ಇನ್ನೊಂದು ಪ್ರಾಣಿಯ ಜೀವ ಹಿಂಡಿ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತವೆ. ಸಿಂಹಗಳು, ಚಿರತೆಗಳು, ಹುಲಿಗಳು ಮತ್ತು ತೋಳಗಳಂತಹ ಅನೇಕ ರೀತಿಯ ಪ್ರಾಣಿಗಳು ತಮ್ಮ ಆಹಾರವನ್ನಾಗಿ ಇತರ ಪ್ರಾಣಿಗಳನ್ನು ಅವಲಂಬಿಸಿದೆ. ಇದೀಗ ಮುಗ್ದ ಪ್ರಾಣಿಯ ಮೇಲೆ ಚಿರತೆ ದಾಳಿ ನಡೆಸಿದ ಭಯಾನಕ ಹಾಗೂ ಹೃದಯವಿದ್ರಾವಕ ವಿಡಿಯೋವೊಂದು ವೈರಲ್ ಆಗುತ್ತಿದೆ. ಚಿರತೆಯೊಂದು ದಾಳಿ ನಡೆಸಿ ಹಸುವಿನ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡು ಸಾಯಿಸುವ ಪರಿ ನೋಡಿದರೆ ನೀವು ಮನಸ್ಸಿನಲ್ಲಿ ಅಯ್ಯೋ ಎಂಬ ಹೇಳಬಹುದು. ಅಷ್ಟುಮಾತ್ರವಲ್ಲ ಈಗಾಗಲೇ ಈ ವಿಡಿಯೋವನ್ನು ನೋಡಿದ ನೆಟ್ಟಿಗರು, ಆಪತ್ಕಾಲದಲ್ಲಿ ಸಹಾಯಕ್ಕೆ ನಿಲ್ಲದೆ ವಿಡಿಯೋ ಮಾಡಿದ ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಇರುವಂತೆ, ರಸ್ತೆಯಲ್ಲಿದ್ದ ಹಸುವಿನ ಮೇಲೆ ದಾಳಿ ಮಾಡಿ ಎಳೆದೊಯ್ಯಲು ಮುಂದಾಗಿದೆ. ಅದರಂತೆ ಹಸುವಿನ ಕುತ್ತಿಗೆಯನ್ನು ತನ್ನ ಬಾಯಿಯಿಂದ ಬಿಗಿಯಾಗಿ ಕಚ್ಚಿ ಹಿಡಿದಿದೆ. ರಸ್ತೆಯ ಬದಿಯಲ್ಲಿ ಇದ್ದ ರೇಲಿಂಗ್ ಕೆಳಗಿನಿಂದ ಚಿರತೆ ಹಸುವಿನ ಕುತ್ತಿಗೆಯನ್ನು ಹಿಡಿದು ಎಳೆಯುತ್ತಿದ್ದರೆ, ಇತ್ತ ಹಸು ತನ್ನ ಪ್ರಾಣ ರಕ್ಷಣೆಗಾಗಿ ತನ್ನೆಲ್ಲಾ ಬಲವನ್ನು ಹಾಕಿ ನಿಂತುಕೊಂಡಿದೆ. ಆದರೆ ಕರುಣೆ ಇಲ್ಲದ ಚಿರತೆ ಮುಗ್ದ ಹಸುವಿನ ಕುತ್ತಿಗೆಯನ್ನು ಬಿಡಲೇ ಇಲ್ಲ, ಹಸು ತನ್ನ ಉಸಿರು ನಿಲ್ಲುವವರೆಗೆ ತನ್ನ ಎಲ್ಲಾ ಶಕ್ತಿಯನ್ನು ಬಳಿಸಿತಾದರೂ ಕೊನೆಯಲ್ಲಿ ಜೀವ ಬಿಟ್ಟು ಕೆಳಗೆ ಬಿದ್ದೇಬಿಟ್ಟಿತು. ಕ್ಷಣಾರ್ಧದಲ್ಲೇ ಚಿರತೆ ಹಸುವನ್ನು ಕಾಡಿನೊಳಗೆ ಎಳೆದುಕೊಂಡು ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.

ಈ ವಿಡಿಯೋವನ್ನು ಸಾಕೇಟ್ ಬಡೋಲಾ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ವೈರಲ್ ಪಡೆದು 42ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ವಿಡಿಯೋ ನೋಡಿದ ಕೆಲವರು ಇದನ್ನು ಆಹಾರದ ಸರಪಳಿ ಎಂದರೆ ಇನ್ನೂ ಕೆಲವರು ವಿಡಿಯೋ ಮಾಡಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, “ಸರ್ ನೀವು ಗಮನಿಸಿದ್ದರೆ ಒಂದು ಹಸು ಕೂಡ ಇದರಲ್ಲಿ ಪ್ರಾಣ ಕಳೆದುಕೊಂಡಿದೆ. ಚಿರತೆಯ ಶಕ್ತಿಯನ್ನು ಕೊಂಡಾಡಿದರೂ ಹಸುವಿನ ಬಗ್ಗೆ ಮಾತುಗಳೇ ಬರಲಿಲ್ಲ” ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, “ಹಸುವನ್ನು ರಕ್ಷಿಸುವ ಬದಲು ವಿಡಿಯೋ ಯಾಕೆ ಮಾಡಿದರು?” ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:00 pm, Tue, 16 August 22