ಕಾಡುಗಳನ್ನು ನಾಶ ಮಾಡಿ ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣ ಮಾಡಿದ ಕಾರಣ ಕಾಡು ಪ್ರಾಣಿಗಳು ನಾಡಿನತ್ತ ಬರುತ್ತಿದೆ. ಪ್ರಾಣಿಗಳು ನಾಡಿ ಬರುವುದು ಏನು ವಿಶೇಷವಲ್ಲ. ಆದರೆ ಅವುಗಳ ದಾಳಿಗಳು ಭಯನಕವಾಗಿರುವುದು ಸತ್ಯ. ಕಾಡುಪ್ರಾಣಿಗಳಿಗೆ ನಾಡಿಗೆ ಬಂದಾಗ ಜನರು ನಮಗೆ ಏನು ಮಾಡುತ್ತಾರೆ ಎಂಬ ಭಯ ಇದ್ದೆ ಇರುತ್ತದೆ. ಅವುಗಳನ್ನು ರಕ್ಷಣೆ ಮಾಡುವುವಲ್ಲಿ ಅರಣ್ಯ ಇಲಾಖೆಯ ಪಾತ್ರ ದೊಡ್ಡದು. ಆದರೆ ಅವರ ಮೇಲೆ ಈ ಪ್ರಾಣಿಗಳು ದಾಳಿ ಮಾಡಿದಾಗ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಅವುಗಳ ರಕ್ಷಣೆ ಮಾಡುವುದು ಇದೆಲ್ಲ ಅದು ಖಂಡಿತ ಕಷ್ಟದ ಪರಿಸ್ಥಿತಿಯಾಗಿರುತ್ತದೆ. ಇಂತಹ ಘಟನೆಯೊಂದು ಹರಿಯಾಣದ ಪಾಣಿಪತ್‌ನ ಬೆಹ್ರಾಂಪುರ ಗ್ರಾಮದಲ್ಲಿ ಚಿರತೆ ಹಿಡಿಯುವ ಕಾರ್ಯಾಚರಣೆ ವೇಳೆ ಓರ್ವ ಪೊಲೀಸ್ ಹಾಗೂ ಇಬ್ಬರು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಚಿರತೆ ದಾಳಿ ಮಾಡಿದೆ. ಬಳಿಕ ಚಿರತೆಯನ್ನು ಯಶಸ್ವಿಯಾಗಿ ಸೆರೆಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಶನಿವಾರ ರಕ್ಷಣಾ ತಂಡ ಚಿರತೆ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಚಿರತೆ ಕಂಡ ಗ್ರಾಮಸ್ಥರ ಮಾಹಿತಿಯ ಮೇರೆಗೆ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಚಿರತೆಯನ್ನು ಹಿಡಿಯಲು ಎನ್‌ಕೌಂಟರ್ ತಂಡದ ನೇತೃತ್ವ ವಹಿಸಿದ್ದ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಮತ್ತು ಇಬ್ಬರು ಅರಣ್ಯ ಇಲಾಖೆ ಅಧಿಕಾರಿಗಳು ಗಾಯಗೊಂಡಿದ್ದಾರೆ. ಇನ್ನೂ ಚಿರತೆಯನ್ನು ಹಿಡಿಯುವಲ್ಲಿ ತಂಡ ಯಶಸ್ವಿಯಾಗಿದೆ.
ಪಾಣಿಪತ್ ಪೊಲೀಸ್ ವರಿಷ್ಠಾಧಿಕಾರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಅಧಿಕಾರಿಗಳ ಶೌರ್ಯ ಮತ್ತು ಧೈರ್ಯವನ್ನು ವಂದಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. “ಪೊಲೀಸ್ ಮತ್ತು ಅರಣ್ಯ ಇಲಾಖೆಯ ಜನರಿಗೆ ಕೆಲಸದಲ್ಲಿ ಕಠಿಣ ದಿನ.. ಅವರಲ್ಲಿ ಅನೇಕರಿಗೆ ಗಾಯಗಳಾಗಿವೆ.. ಅವರ ಧೈರ್ಯ ಮತ್ತು ಕೆಲಸಕ್ಕೆ ಸೆಲ್ಯೂಟ್.. ಕೊನೆಯಲ್ಲಿ, ಚಿರತೆ ಸೇರಿದಂತೆ ಎಲ್ಲರೂ ಸುರಕ್ಷಿತವಾಗಿದ್ದಾರೆ” ಎಂದು ಪಾಣಿಪತ್ ಎಸ್ಪಿ ಶಶಾಂಕ್ ಕುಮಾರ್ ಸಾವನ್ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.
ಶ್ರೀ ಸಾವನ್ ಅವರ ಟ್ವೀಟ್ ಗೆ 8,800 ಕ್ಕೂ ಹೆಚ್ಚು ಲೈಕ್‌ಗಳನ್ನು ಮತ್ತು 1,700 ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಗಳಿಸಿದೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಅಧಿಕಾರಿಗಳು ಪ್ರದರ್ಶಿಸಿದ ಧೈರ್ಯವನ್ನು ಶ್ಲಾಘಿಸಿದ್ದಾರೆ. “ಪೊಲೀಸ್‌ನ ಕೆಲಸ ಎಷ್ಟು ಅಪಾಯಕಾರಿ ಎಂಬುದನ್ನು ಈ ವೀಡಿಯೊ ಸ್ಪಷ್ಟಪಡಿಸುತ್ತದೆ” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
Tough day at work for people from police and forest dept.. A couple of them suffered injuries..Salute to their bravery and courage..In the end, everyone is safe..Including the leopard.. pic.twitter.com/wbP9UqBOsF
— Shashank Kumar Sawan (@shashanksawan) May 8, 2022
ಇಂದು ಮುಂಜಾನೆ ಅಸ್ಸಾಂನ ದಿಬ್ರುಗಢದಲ್ಲಿ ಚಿರತೆಯ ಛಾಯಾಚಿತ್ರ ತೆಗೆಯಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಚಿರತೆ ದಾಳಿ ನಡೆಸಿತ್ತು. ಅಸ್ಸಾಂನ ದಿಬ್ರುಗಢ್‌ನ ಖರ್ಜನ್ ಟೀ ಎಸ್ಟೇಟ್ ಬಳಿ ನಡೆದ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಹೆಚ್ಚು ಹೆಚ್ಚು ವೈರಲ್ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:21 pm, Mon, 9 May 22