Viral Video: ಹೋಟೆಲ್ ಕೊಠಡಿಗೆ ಏಕಾಏಕಿ ನುಗ್ಗಿದ ಚಿರತೆ; ವಿಡಿಯೋ ವೈರಲ್​​

ಚಿರತೆ ನುಗ್ಗಿದಾಗ ಕೊಠಡಿಯೊಳಗೆ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಚಿರತೆಯನ್ನು ಕಂಡ ಹೋಟೆಲ್ ಆಡಳಿತ ಮಂಡಳಿಯವರು ಕೊಠಡಿಗೆ ಹೊರಗಿನಿಂದ ಬೀಗ ಹಾಕಿ, ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

Viral Video: ಹೋಟೆಲ್ ಕೊಠಡಿಗೆ ಏಕಾಏಕಿ ನುಗ್ಗಿದ ಚಿರತೆ; ವಿಡಿಯೋ ವೈರಲ್​​
Viral Video
Image Credit source: Pinterest

Updated on: Jan 19, 2024 | 12:01 PM

ಜೈಪುರದ ಕನೋಟಾದಲ್ಲಿರುವ ಹೋಟೆಲ್‌ಗೆ ಚಿರತೆಯೊಂದು ಏಕಾಏಕಿ ನುಗ್ಗಿದ್ದು, ಪ್ರವಾಸಿಗರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಹೋಟೆಲ್ ಕೋಣೆಗೆ ನುಗ್ಗಿದ ಚಿರತೆಯನ್ನು ಸುಮಾರು ಎರಡು ಗಂಟೆಗಳ ಕಾಲ ಆ ಕೋಣೆಯಲ್ಲಿ ಲಾಕ್​​ ಮಾಡಿ. ಹೋಟೆಲ್​​ನ ಆಡಳಿತ ಮಂಡಳಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಇದೇ ವೇಳೆ ಅಲ್ಲಿದ್ದ ಸಿಬ್ಬಂದಿಗಳು ಚಿರತೆ ಕೊಠಡಿಯಲ್ಲಿರುವ ದೃಶ್ಯಗಳನ್ನು ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ವೈರಲ್​ ವೀಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ನೋಡ ನೋಡುತ್ತಲೇ ತರಗತಿಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಯುವಕ; ಸಿಸಿಟಿವಿ ದೃಶ್ಯಾವಳಿ ಇಲ್ಲಿದೆ ನೋಡಿ

ಕೊಠಡಿಯೊಳಗೆ ಚಿರತೆ ನುಗ್ಗಿದಾಗ ಕೋಣೆಯಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಚಿರತೆಯನ್ನು ಕಂಡ ಹೋಟೆಲ್ ಆಡಳಿತ ಮಂಡಳಿಯವರು ಕೊಠಡಿಗೆ ಹೊರಗಿನಿಂದ ಬೀಗ ಹಾಕಿ, ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮೃಗಾಲಯದ ತಂಡ ಚಿರತೆಯನ್ನು ಅತ್ಯಂತ ಜಾಣ್ಮೆಯಿಂದ ಹಿಡಿದು ಬೋನಿಗೆ ಹಾಕಿದ್ದಾರೆ. ಬಳಿಕ ಚಿರತೆಯನ್ನು ಜೈಪುರ ಮೃಗಾಲಯಕ್ಕೆ ಸ್ಥಳಾಂತರಿಸಿದ್ದು,ನಂತರ ಅಧಿಕಾರಿಗಳ ಆದೇಶದಂತೆ ಕಾಡಿಗೆ ಬಿಡಲಾಗಿದೆ ಎಂದು ವರದಿಯಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ