Viral Video: ವಿಮಾನದಲ್ಲಿ ಹಾವು ಪ್ರತ್ಯಕ್ಷ; ಗಾಬರಿಗೊಂಡ ಪ್ರಯಾಣಿಕರು

ಇತ್ತೀಚೆಗಷ್ಟೇ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಥಾಯ್ ಏರ್‌ಏಷ್ಯಾ ವಿಮಾನದಲ್ಲಿ ಹಾವೊಂದು ಪತ್ತೆಯಾಗಿದೆ. ಇದರಿಂದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

Viral Video: ವಿಮಾನದಲ್ಲಿ ಹಾವು ಪ್ರತ್ಯಕ್ಷ; ಗಾಬರಿಗೊಂಡ ಪ್ರಯಾಣಿಕರು
snake spotted on plane
Image Credit source: Pinterest

Updated on: Jan 20, 2024 | 12:19 PM

ಇತ್ತೀಚೆಗಷ್ಟೇ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಥಾಯ್ ಏರ್‌ಏಷ್ಯಾ ವಿಮಾನದಲ್ಲಿ ಹಾವೊಂದು ಪತ್ತೆಯಾಗಿದೆ. ಇದರಿಂದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬ್ಯಾಂಕಾಕ್‌ನಿಂದ ಫುಕೆಟ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಹಾವು ಕಾಣಿಸಿಕೊಂಡಿದ್ದು, ಪ್ರಯಾಣಿಕರೊಬ್ಬರು ಮೊಬೈಲ್​​​ ಮೂಲಕ ವಿಡಿಯೋ ಸೆರೆಹಿಡಿದ್ದಾರೆ.

ಜನವರಿ 13 ರಂದು, ಥಾಯ್ ಏರ್‌ಏಷ್ಯಾ ಫ್ಲೈಟ್ ಎಫ್‌ಡಿ 3015 ನಲ್ಲಿ ಘಟನೆ ಸಂಭವಿಸಿದೆ. ವಿಮಾನ ಲ್ಯಾಂಡ್ ಆಗುವ ಮುನ್ನವೇ  ಪುಟ್ಟ ಹಾವು ಪತ್ತೆಯಾಗಿದ್ದು, ಇದರಿಂದ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ. ವಿಮಾನ ಸಿಬ್ಬಂದಿ ಪ್ಲಾಸ್ಟಿಕ್​​ ಕವರ್​​ ಮೂಲಕ ಹಾವನ್ನು ಹಿಡಿದಿದ್ದು, ವಿಮಾನ ಲ್ಯಾಂಡ್ ಆದ ಕೂಡಲೇ ಹಾವನ್ನು ಬಿಡಲಾಗಿದೆ. ವಿಮಾನಗಳು ನಿರ್ಗಮನಕ್ಕೆ ಸಿದ್ಧವಾದಾಗ ಫುಕೆಟ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್ ಅನ್ನು ಪರಿಶೀಲಿಸಲಾಗುತ್ತದೆ. ಆದರೆ, ಹಾವುಗಳು ಹೇಗೆ ಒಳಗೆ ಬಂತು ಎಂಬ ನಿಗೂಢ ಇನ್ನೂ ಬಗೆಹರಿದಿಲ್ಲ.

ಇದನ್ನೂ ಓದಿ: ಬಿರುಗಾಳಿಗೆ ಈ ಗಗನಚುಂಚಿ ಕಟ್ಟಡ ಹೇಗೆ ಅಲುಗಾಡುತ್ತೆ ನೋಡಿ; ಎದೆ ನಡುಕ ಹುಟ್ಟಿಸುವ ವಿಡಿಯೋ ವೈರಲ್​​

@ThaiEnquirer ಎಂಬ ಎಕ್ಸ್​​​​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಬಳಕೆದಾರರೊಬ್ಬರು ಹಾವು ಟೂರ್​​ ಪ್ಲಾನ್​ ಮಾಡಿ ವಿಮಾನದಲ್ಲಿ ಬಂದಿದೆ ಎಂದ ಹಾಸ್ಯಾಸ್ಪದವಾಗಿ ಕಾಮೆಂಟ್​ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ