Viral Video: ರಸ್ತೆಯಲ್ಲಿ ನಿಂತು ಗನ್ ಹಿಡಿದು ಸ್ಟೈಲ್​ಆಗಿ ಕ್ಯಾಮರಾಕ್ಕೆ ಪೋಸ್​ ಕೊಡುತ್ತಿದ್ದವ ಅರೆಸ್ಟ್!

| Updated By: shruti hegde

Updated on: Oct 18, 2021 | 9:49 AM

ರಸ್ತೆಯಲ್ಲಿ ನಿಂತು ಗನ್ ಹಿಡಿದು ಪೋಸ್ ಕೊಡುತ್ತಾ, ಕಿಸೆಯಲ್ಲಿದ್ದ ಹಣವನ್ನೆಲ್ಲಾ ತೋರಿಸುತ್ತ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

Viral Video: ರಸ್ತೆಯಲ್ಲಿ ನಿಂತು ಗನ್ ಹಿಡಿದು ಸ್ಟೈಲ್​ಆಗಿ ಕ್ಯಾಮರಾಕ್ಕೆ ಪೋಸ್​ ಕೊಡುತ್ತಿದ್ದವ ಅರೆಸ್ಟ್!
ರಸ್ತೆಯಲ್ಲಿ ನಿಂತು ಗನ್ ಹಿಡಿದು ಸ್ಟೈಲ್​ಆಗಿ ಕ್ಯಾಮರಾಕ್ಕೆ ಪೋಸ್​ ಕೊಡುತ್ತಿದ್ದವ ಅರೆಸ್ಟ್!
Follow us on

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಆದರೆ ಎಲ್ಲಾ ವಿಡಿಯೋಗಳು ತಮಾಷೆಯಾಗಿರುವುದಿಲ್ಲ. ಯಾವುದನ್ನು ಮಾಡಬಾರದು ಎಂದು ಎಚ್ಚರಿಸುವ ವಿಡಿಯೋಗಳೂ ಸಹ ಸಾಕಷ್ಟು ಹರಿದಾಡುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ಕೂಡಾ ಅಂಥದ್ದೇ! ರಸ್ತೆಯಲ್ಲಿ ನಿಂತು ಗನ್ ಹಿಡಿದು ಪೋಸ್ ಕೊಡುತ್ತಾ, ಕಿಸೆಯಲ್ಲಿದ್ದ ಹಣವನ್ನೆಲ್ಲಾ ತೋರಿಸುತ್ತ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯಲು ಒಂದಲ್ಲಾ ಒಂದು ರೀತಿಯ ಆಲೋಚನೆಗಳನ್ನು ಜನರು ಮಾಡುತ್ತಲೇ ಇರುತ್ತಾರೆ. ಆದರೆ ಕೆಲವು ವಿಶಿಷ್ಟ ಆಲೋಚನೆಗಳು ಏನೆಲ್ಲಾ ಸಮಸ್ಯೆಗಳನ್ನು ತಂದೊಡ್ಡಬಹುದು ಎಂಬುದಕ್ಕೆ ಸಾಕ್ಷಿ ಎಂಬಂತೆ ಈ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಘಟನೆ ಕೆನಡಾದಲ್ಲಿ ನಡೆದಿದ್ದು, ಕೂಲ್ ಆಗಿ ಕಾಣುವ ಆಲೋಚನೆಯೊಂದಿಗೆ ಗನ್ ಹಿಡಿದು ಫೋಸ್ ಕೊಡುತ್ತಾ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.

ದೃಶ್ಯವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಕೆಂಪು ಬಣ್ಣದ ಟೋಪಿ ಧರಿಸಿದ್ದ ವ್ಯಕ್ತಿ ಅಂಗಡಿಯಿಂದ ಕೆಲವು ವಸ್ತುಗಳನ್ನು ಖರೀದಿಸಿ ರಸ್ತೆ ದಾಟುತ್ತಿರುತ್ತಾನೆ. ದೂರದಲ್ಲಿದ್ದ ಆತನ ಸ್ನೇಹಿತ ವಿಡಿಯೋ ಮಾಡುತ್ತಿರುವುದು ಕಣ್ಣಿಗೆ ಬಿದ್ದಂತೆಯೇ ಕಿಸೆಯಲ್ಲಿದ್ದ ಗನ್ ತೆಗೆದು ಪೋಸ್ ಕೊಡುತ್ತಾನೆ. ಬಳಿಕ ಒಂದಿಷ್ಟು ಹಣವನ್ನು ತೆಗೆದು ರಸ್ತೆಗೆ ಎಸೆಯುತ್ತಾನೆ.

ಕೆಲ ಸೆಕೆಂಡುಗಳ ಬಳಿಕ ಆ ವ್ಯಕ್ತಿ ಹಿಮ್ಮುಖವಾಗಿ ಪೊಲೀಸ್ ಅಧಿಕಾರಿಗಳ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದು, 4 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ವಿಡಿಯೋ ಹಳೆಯದಾಗಿದ್ದರೂ ಇದೀಗ ಮತ್ತೆ ಫುಲ್ ವೈರಲ್ ಆಗಿದೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಗನ್ ಮತ್ತು ಹಣವನ್ನು ಸಾರ್ವಜನಿಕವಾಗಿ ತೋರಿಸುವುದು ಮೂರ್ಖತನ ಎಂದು ಓರ್ವರು ಹೇಳಿದ್ದಾರೆ.

ಇದನ್ನೂ ಓದಿ:

Shocking Video: ಬಕೆಟ್​ನಲ್ಲಿ ನೀರು ಹಿಡಿದು ದೈತ್ಯ ನಾಗರ ಹಾವಿನ ತಲೆಯ ಮೇಲೆ ಸುರಿದ ಭೂಪ! ವಿಡಿಯೋ ನೋಡಿ

Shocking News: ರೋಗಿಯ ಹೊಟ್ಟೆಯಿಂದ 1 ಕೆಜಿಗಿಂತ ಹೆಚ್ಚು ಉಗುರು ಮತ್ತು ಕಬ್ಬಿಣದ ತುಂಡುಗಳನ್ನು ಹೊರತೆಗೆದ ವೈದ್ಯರು!